KCET Results 2024: ಕರ್ನಾಟಕ ಸಿಇಟಿ ಫಲಿತಾಂಶ ಇನ್ನು 10 ದಿನಗಳ ಒಳಗೆ ಪ್ರಕಟ, ಫಲಿತಾಂಶ ನೋಡಲು ಹೀಗೆ ಮಾಡಿ
ಕಳೆದ ತಿಂಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಕೆ ಸಿಇಟಿ ಪರೀಕ್ಷೆಗಳ ಫಲಿತಾಂಶ (KCET Results 2024) ಇನ್ನು 10 ದಿನಗಳ ಒಳಗೆ ಪ್ರಕಟವಾಗಲಿದೆ. ಮೇ25ರ ನಂತರ ಫಲಿತಾಂಶ ನಿರೀಕ್ಷಿಸಬಹುದು. ಕಳೆದತಿಂಗಳು ನಡೆದಿದ್ದ ಕರ್ನಾಟಕ ವೃತ್ತಿಪರಕೋರ್ಸ್ ಪ್ರವೇಶ ಪರೀಕ್ಷೆ( KCET 2024) ಫಲಿತಾಂಶ ಬಹುತೇಕ ಇಂದು (ಮೇ 20) ಪ್ರಕಟಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.
ಬೆಂಗಳೂರು: ಕಳೆದ ತಿಂಗಳು ನಡೆದಿದ್ದ ಕರ್ನಾಟಕ ವೃತ್ತಿಪರ ಕೋರ್ಸ್ ಪ್ರವೇಶ ಪರೀಕ್ಷೆಗಳ ( KCET 2024) ಫಲಿತಾಂಶ ಬಹುತೇಕ ಮೇ20ರ ಸೋಮವಾರ ಪ್ರಕಟಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪ್ರಕಟವಾಗಿಲ್ಲ. ಈ ಕುರಿತು ವಿಚಾರಿಸಿದಾಗ, ಈ ತಿಂಗಳ ಅಂತ್ಯದೊಳಗೆ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಇದಕ್ಕಾಗಿ ಸಿದ್ದತೆ ಮಾಡುತ್ತಿದ್ದು, ಔಟ್ ಆಫ್ ಸಿಲೆಬಸ್ ಪ್ರಶ್ನೆಗಳ ವಿವಾದ ಎದುರಾದ ಕಾರಣ ವಿಳಂಬವಾಗಿದೆ. ಸಾಧ್ಯವಾದಷ್ಟೂ ಮೇ 25 ರಿಂದ 30 ರ ಒಳಗೆ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟಿಸುವ ಇರಾದೆ ಇದೆ ಎಂದು ಮೂಲಗಳು ತಿಳಿಸಿವೆ.
ಸಿಇಟಿ ಫಲಿತಾಂಶ ಪ್ರಕಟವಾದಾಗ, ಸಿಇಟಿಯ ವಿವಿಧ ಕೋರ್ಸ್‌ಗಳ ಟಾಪರ್‌ಗಳ ಪಟ್ಟಿಯ ಜತೆಗೆ ಒಟ್ಟಾರೆ ವಿಷಯಗಳಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಪ್ರಕಟಿಸಲಾಗುತ್ತದೆ. ವೆಬ್‌ಸೈಟ್‌ನಲ್ಲಿಯೂ ವಿವರವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
kea.kar.nic.in ವೆಬ್‌ಸೈಟ್ ಮೂಲಕವೇ ಫಲಿತಾಂಶವನ್ನು ಪ್ರತಿ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸುತ್ತಿದ್ದು, ಈ ಬಾರಿಯೂ ಇದರಲ್ಲಿ ಫಲಿತಾಂಶ ಲಭ್ಯವಾಗಲಿದೆ.
2024ರ ಏಪ್ರಿಲ್ 18 ಹಾಗೂ 19 ರಂದು ನಡೆಸಲಾಗಿದ್ದ ಕರ್ನಾಟಕ ಸಿಇಟಿ ಪರೀಕ್ಷೆಗಳ ಫಲಿತಾಂಶಕ್ಕೆ ವಿದ್ಯಾರ್ಥಿಗಳೂ ಕಾಯುತ್ತಿದ್ದರು. ಇದರ ಜತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಕೂಡ ವಿದ್ಯಾರ್ಥಿಗಳೂ ತಮ್ಮ ಅಂಕ ಪಟ್ಟಿಗಳನ್ನು ಮೇ 20 ರೊಳಗೆ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದೆ. ಅಲ್ಲದೇ ಬೋರ್ಡ್ ಪರೀಕ್ಷೆಗಳ ಅಂಕಗಳನ್ನು ನಮೂದಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿತ್ತು. ಇದರ ನಡುವೆಯೇ ಕೆಸಿಇಟಿಯ ಫಲಿತಾಂಶ ಸೋಮವಾರವೇ ಪ್ರಕಟಗೊಳ್ಳಲಿದೆ ಎನ್ನಲಾಗುತ್ತಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವೃತ್ತಿಪರ ಪರೀಕ್ಷೆಗಳ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತಾ ಬರುತ್ತಿದೆ. ಪರೀಕ್ಷೆ ಆಯೋಜಿಸಿ ಫಲಿತಾಂಶವನ್ನು ರ್ಯಾಂಕಿಂಗ್ ಆಧರಿತವಾಗಿ ನೀಡಲಿದೆ. ಯಾರು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೋ ಅವರು ಆಯಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರು. ಎಂಜಿನಿಯರಿಂಗ್ ಟೆಕ್ನಾಲಜಿ, ಬಿ ಫಾರ್ಮಾ, ಡಿ ಫಾರ್ಮಾ, ಕೃಷಿ ವಿಜ್ಞಾನ ಕೋರ್ಸ್‌ಗಳು, ವೆಟರ್ನರಿ ಕೋರ್ಸ್‌ಗಳಿಗೆ ಪರೀಕ್ಷೆ ಎದುರಿಸಿದವರ ಫಲಿತಾಂಶಗಳು ಪ್ರಕಟವಾಗಲಿವೆ.
ಈ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ರಮ್ಯಾ ಅವರನ್ನು ವರ್ಗಾಯಿಸಲಾಗಿದೆ.ಈ ಬಾರಿ ಸಿಇಟಿ ಪರೀಕ್ಷೆಗೆ ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದ್ದು, ವಿವಾದಕ್ಕೆ ಗುರಿಯಾಗಿತ್ತು. ಈ ಕಾರಣದಿಂದಲೇ ಅವರ ವರ್ಗಾವಣೆಯಾಗಿತ್ತು. ಅವರ ಜಾಗಕ್ಕೆ ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಿರುವ ಎಚ್.ಪ್ರಸನ್ನ ಅವರನ್ನು ಹೆಚ್ಚುವರಿ ಕಾರ್ಯಭಾರವಾಗಿ ನೇಮಿಸಲಾಗಿದೆ. ಪ್ರಸನ್ನ ಅವರೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.
ಫಲಿತಾಂಶ ವೀಕ್ಷಣೆ ಹೀಗೆ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ kea.kar.nic.in ಕ್ಲಿಕ್ ಮಾಡಿ
- ಹೋಮ್ ಪೇಜ್‌ನಲ್ಲಿರುವ ಲೇಟೆಸ್ಟ್ ನ್ಯೂಸ್ ಸೆಕ್ಷನ್ ಗಮನಿಸಿ
- ಅಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ
- ನಿಮ್ಮ ಕೆಸಿಇಟಿ ರೋಲ್ ನಂಬರ್, ಹಾಗೂ ಜನುಮ ದಿನಾಂಕವನ್ನು ನಮೂದಿಸಿ.
- ಕೆ ಸಿಇಟಿ 2024ರ ಫಲಿತಾಂಶ ಓಪನ್ ಆಗಲಿದೆ.
- ಫಲಿತಾಂಶದ ವಿವರಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ
- ಇದಕ್ಕೆ ಪೂರಕವಾದ ದಾಖಲೆಗಳ ಪ್ರಿಂಟ್ ಔಟ್ ಅನ್ನು ತೆಗೆದಿರಿಸಿಕೊಳ್ಳಿ
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.