Liquor Rates Down: ಕರ್ನಾಟಕದ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ, ಪ್ರೀಮಿಯಂ ಮದ್ಯದ ದರಗಳಲ್ಲಿ ಶೇ. 15ರಿಂದ 25 ಇಳಿಕೆ ಸಾಧ್ಯತೆ-bangalore news karnataka excise department to reduce premium liquor rates from 15 to 25 percent shortly kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Liquor Rates Down: ಕರ್ನಾಟಕದ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ, ಪ್ರೀಮಿಯಂ ಮದ್ಯದ ದರಗಳಲ್ಲಿ ಶೇ. 15ರಿಂದ 25 ಇಳಿಕೆ ಸಾಧ್ಯತೆ

Liquor Rates Down: ಕರ್ನಾಟಕದ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ, ಪ್ರೀಮಿಯಂ ಮದ್ಯದ ದರಗಳಲ್ಲಿ ಶೇ. 15ರಿಂದ 25 ಇಳಿಕೆ ಸಾಧ್ಯತೆ

Business News ಕರ್ನಾಟಕದಲ್ಲಿ ಮದ್ಯ ದರಗಳನ್ನು ಇಳಿಸುವ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಬಹುದು ಎನ್ನುವ ನಿರೀಕ್ಷೆಯನ್ನು ಮದ್ಯ ವ್ಯಾಪಾರಿ ವಲಯ ಹೊಂದಿದೆ.

ಕರ್ನಾಟಕದ ಮದ್ಯ ಮಾರಾಟ ದರಗಳಲ್ಲಿ ಇಳಿಕೆಯಾಗಬಹುದು.
ಕರ್ನಾಟಕದ ಮದ್ಯ ಮಾರಾಟ ದರಗಳಲ್ಲಿ ಇಳಿಕೆಯಾಗಬಹುದು.

ಬೆಂಗಳೂರು: ಕರ್ನಾಟಕದ ಮದ್ಯ ಪ್ರಿಯರಿಗೆ ಇದೊಂದು ಸಿಹಿ ಸುದ್ದಿಯೇ. ಏಕೆಂದರೆ ಸತತ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯದ ದರ ಏರಿಸಿರುವ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಈ ಬಾರಿ ದರ ಇಳಿಕೆಗೆ ಮುಂದಾಗಿದೆ. ಕರ್ನಾಟಕದಾದ್ಯಂತ ಪ್ರೀಮಿಯಂ ಮದ್ಯದ ದರಗಳು ಶೇ. 15 ರಿಂದ 25 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಈ ಆದೇಶ ಜಾರಿಯಾಗಲಿದೆ. ಕರ್ನಾಟಕದಲ್ಲಿ ಮದ್ಯದ ಬಳಕೆ ದಕ್ಷಿಣ ಭಾರತದ ರಾಜ್ಯಗಳಿಗಿಂತ ಹೆಚ್ಚಿದ್ದರೂ ದರ ಕೂಡ ಕೊಂಚ ಹೆಚ್ಚೇ ಇತ್ತು.ಪ್ರೀಮಿಯಂ ಮದ್ಯದ ದರಗಳಲ್ಲಿ ಪರಿಷ್ಕರಣೆ ಮಾಡಬೇಕು ಎನ್ನುವ ಬೇಡಿಕೆ ಕೆಲ ದಿನಗಳಿಂದಲೇ ಇತ್ತು. ಲೋಕಸಭೆ ಚುನಾವಣೆ ಮುಗಿದ ನಂತರ ದರ ಪರಿಷ್ಕರಣೆ ಆಗುವ ಲೆಕ್ಕಾಚಾರವಿದ್ದರೂ ಈಗ ಅದು ಜಾರಿಯಾಗುವ ಸಾಧ್ಯತೆಗಳು ಹೆಚ್ಚಿವೆ.

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ, ಜೂನ್‌ನಲ್ಲಿ, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳ ಅಧಿಸೂಚನೆ ಸಿದ್ದಪಡಿಸಿದ್ದು, ಅಂತಿಮ ಅಧಿಸೂಚನೆಯನ್ನು ಸದ್ಯವೇ ಅಧಿಕೃತವಾಗಿಯೇ ಪ್ರಕಟಿಸಲಿದೆ. ಇದರಡಿ ಮದ್ಯ ಮಾರಾಟ, ದರ ಪರಿಷ್ಕರಣೆಗೆ ಅವಕಾಶ ನೀಡುವುದು ಅಧಿಸೂಚನೆಯಲ್ಲಿದೆ. ಇದರಡಿಯೇ ದರ ಪರಿಷ್ಕರಣೆಯೂ ಆಗಬಹುದು ಎನ್ನಲಾಗುತ್ತಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಅಂತಿಮ ಅಧಿಸೂಚನೆ ಮತ್ತು ಪರಿಷ್ಕೃತ ದರಗಳು ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದರೂ, ರಾಜಕೀಯ ಕಾರಣಗಳಿಂದಾಗಿ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ .ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ಲಿಮಿಟೆಡ್ (KSBCL) ಹೊಸ ಪರವಾನಗಿ ನೀಡುವುದನ್ನು ವಿಳಂಬಗೊಳಿಸಿದೆ. ಇದರಿಂದ ಅಂತಿಮ ಅಧಿಸೂಚನೆಯನ್ನು ಬಿಡುಗಡೆ ಮಾಡುವಲ್ಲಿನ ವಿಳಂಬವು ದರ ಪರಿಷ್ಕರಣೆ ನಿರ್ಧಾರವೂ ಮುಂದೆ ಹೋಗಿದೆ ಎಂದು ಮೂಲಗಳು ಹೇಳಿವೆ.

ಅಬಕಾರಿ ಇಲಾಖೆ ಗುರಿ ಏನು?

ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಅಂತಿಮ ಅಧಿಸೂಚನೆಯು ನೆರೆಯ ರಾಜ್ಯಗಳಲ್ಲಿನ ದರಗಳಿಗೆ ಸರಿಹೊಂದುವಂತೆ ಭಾರತೀಯ ನಿರ್ಮಿತ ಮದ್ಯ (IML) ಗಾಗಿ ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸಲಾಗುತ್ತಿದೆ. ಇದರೊಂದಿಗೆ, ಜನರು ಕರ್ನಾಟಕದಿಂದ ಹೊರಗಿನಿಂದ ಪ್ರೀಮಿಯಂ ಆಲ್ಕೋಹಾಲ್ ಖರೀದಿಸುವುದನ್ನು ತಡೆಯುವ ಗುರಿಯನ್ನು ಇಲಾಖೆ ಹೊಂದಿದೆ.

ಇದು ರಾಜ್ಯದಲ್ಲಿ ಅಬಕಾರಿ ಮಾರಾಟವನ್ನು ಹೆಚ್ಚಿಸುವ ಜತೆಯಲ್ಲಿಯೇ ಅಬಕಾರಿ ಇಲಾಖೆ ಆದಾಯವನ್ನು ಹೆಚ್ಚಿಸುತ್ತದೆ. ಪ್ರೀಮಿಯಂ ಮದ್ಯದ ಬೆಲೆಯನ್ನು ಕಡಿಮೆ ಮಾಡುವುದು ಇದರ ಭಾಗವೇ ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಲ್ಲಿ ಅಂದರೆ ಕೋವಿಡ್‌ ನಂತರ ಕರ್ನಾಟಕದಲ್ಲಂತೂ ಬಿಯರ್ ಮಾರಾಟವು ದ್ವಿಗುಣಗೊಂಡಿದೆ. ಬಿರು ಬೇಸಿಗೆಯಲ್ಲಿ ಮದ್ಯಪ್ರಿಯರಿಗೆ ಬಿಯರ್ ಅತ್ಯಂತ ಆದ್ಯತೆ. ಈ ಕ್ರಮವು ಭಾರತೀಯ ನಿರ್ಮಿತ ಮದ್ಯಗಳಲ್ಲಿ ಒಂದಾದ ಬಿಯರ್ ಮಾರುಕಟ್ಟೆಯನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಇದರಿಂದ ಬಿಯರ್‌ ದರವನ್ನು ಪರಿಷ್ಕರಣೆ ಮಾಡುವ ಉದ್ದೇಶ ಹೊಂದಲಾಗಿದೆ.

ವಿಳಂಬದಿಂದ ನಷ್ಟ

ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಅನೇಕ ಡಿಸ್ಟಿಲರಿಗಳು ನಷ್ಟದ ಭಯದಿಂದ ಉತ್ಪಾದನೆಯನ್ನು ನಿಲ್ಲಿಸಿವೆ. ಏಕೆಂದರೆ ಬಹುತೇಕ ಡಿಸ್ಟಲರಿಗಳು ಹೆಚ್ಚಿನ ವೆಚ್ಚದಲ್ಲಿ ಮದ್ಯ ಉತ್ಪಾದಿಸುತ್ತವೆ. ಅಧಿಸೂಚನೆ ಪ್ರಾರಂಭವಾದ ನಂತರ ಕಡಿಮೆ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಲಾಗುವುದರಿಂದ ನಷ್ಟ ಅನುಭವಿಸುವ ಒತ್ತಡಕ್ಕೆ ಸಿಲುಕಿವೆ. ಯಾವುದೇ ಬೆಲೆ ಬದಲಾವಣೆಗಳು ನಷ್ಟಕ್ಕೆ ಕಾರಣವಾಗುವುದರಿಂದ ಚಿಲ್ಲರೆ ವ್ಯಾಪಾರಿಗಳು ಪ್ರೀಮಿಯಂ ಮದ್ಯವನ್ನು ಸಂಗ್ರಹಿಸುವುದಿಲ್ಲ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಹೇಳುತ್ತಾರೆ.

'ಮದ್ಯದ ಸಣ್ಣ ಪ್ರಮಾಣ' ಅಂತಿಮ ಅಧಿಸೂಚನೆಯಲ್ಲಿನ ವಿಳಂಬದಿಂದಾಗಿ ಅನಿಶ್ಚಿತತೆಯು ಡಿಪೋ ಮಟ್ಟದಲ್ಲಿ ಮದ್ಯದ ಕೊರತೆಗೆ ಕಾರಣವಾಗಿದೆ. ಶೀಘ್ರದಲ್ಲೇ ಪರಿಹರಿಸದಿದ್ದರೆ ಚಿಲ್ಲರೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದ ನಂತರ ದರಗಳು ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಚಿಲ್ಲರೆ ಮದ್ಯ ವ್ಯವಹಾರದ ಮೂಲಗಳು ಚಿಲ್ಲರೆ ಅಂಗಡಿಗಳಲ್ಲಿ ವ್ಯತ್ಯಾಸವನ್ನು ತೋರಿಸಲು ಕನಿಷ್ಠ ಒಂದರಿಂದ ಎರಡು ತಿಂಗಳು ತೆಗೆದುಕೊಳ್ಳಬಹುದು ಎನ್ನುವುದು ಅವರ ವಿವರಣೆ.