ಕನ್ನಡ ಸುದ್ದಿ  /  ಕರ್ನಾಟಕ  /  Chemicals In Food: ಕಬಾಬ್‌ ತಯಾರಿಕೆಗೆ ಕೃತಕ ಬಣ್ಣ ನಿಷೇಧ; ಚಿಕನ್‌, ಫಿಶ್‌, ವೆಜ್‌ ಕಬಾಬ್‌ ಗೆ ಕೃತಕ ಬಣ್ಣ ಬೆರೆಸಿದರೆ ಜೈಲು ಗ್ಯಾರಂಟಿ

Chemicals in Food: ಕಬಾಬ್‌ ತಯಾರಿಕೆಗೆ ಕೃತಕ ಬಣ್ಣ ನಿಷೇಧ; ಚಿಕನ್‌, ಫಿಶ್‌, ವೆಜ್‌ ಕಬಾಬ್‌ ಗೆ ಕೃತಕ ಬಣ್ಣ ಬೆರೆಸಿದರೆ ಜೈಲು ಗ್ಯಾರಂಟಿ

Food safety ಕರ್ನಾಟಕ ಸರ್ಕಾರವು ಆಹಾರದಲ್ಲಿ ಬಳಸುವ ಕೃತಕ ಬಣ್ಣಕ್ಕೆ ನಿಷೇಧ ಹೇರಿದೆ. ವಿಶೇಷವಾಗಿ ಕಬಾಬ್‌ಗೆ ಈ ಬಣ್ಣ ಬಳಸದಂತೆ ಆದೇಶಿಸಲಾಗಿದೆ.ವರದಿ: ಎಚ್.ಮಾರುತಿ,ಬೆಂಗಳೂರು

ಕೆಬಾಬ್‌ಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಲಾಗಿದೆ.
ಕೆಬಾಬ್‌ಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಲಾಗಿದೆ.

ಬೆಂಗಳೂರು: ಕಾಟನ್‌ ಕ್ಯಾಂಡಿ ಅಥವಾ ಬಾಂಬೆ ಮಿಠಾಯಿಯನ್ನು ನಿಷೇಧಿಸಿದ ನಂತರ ರಾಜ್ಯ ಸರಕಾರ ಇದೀಗ ಕಬಾಬ್‌ ಗೆ ಬೆರೆಸುವ ಕೃತಕ ಬಣ್ಣವನ್ನೂ ನಿಷೇಧಿಸಿ ಆದೇಶ ಹೊರಡಿಸಿದೆ. ಬಹುತೇಕ ಮಾಂಸಾಹಾರಿ ಪ್ರಿಯರಿಗೆ ಇಷ್ಟವಾಗುವ ಕಬಾಬ್‌ ಗೆ ಕೃತಕ ಬಣ್ಣಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಬೀದಿ ಬದಿಯ ತಳ್ಳುವ ಗಾಡಿಗಳಿಂದ ಹಿಡಿದು ಪಂಚಾತಾರಾ ಹೋಟೆಲ್‌ ವರೆಗೆ ಯಾವುದೇ ರೀತಿಯ ಹೋಟೆಲ್‌ ಗಳಲ್ಲಿ ಕೃತಕ ಬಣ್ಣವನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣವವನ್ನು ಬಳಸಿ ಕಬಾಬ್‌ ತಯಾರಿಸಿದರೆ ಕಾನೂನು ಪ್ರಕಾರ 7 ವರ್ಷ ಅಥವಾ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ.ಗಳ ದಂಡವನ್ನು ವಿಧಿಸಲು ಅವಕಾಶ ಇದೆ.

ಕೃತಕ ಬಣ್ಣ ಬೆರೆಸುವುವಿಕೆಯಿಂಧಾಗಿ ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಕಬಾಬ್‌ ಗುಣಮಟ್ಟ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಉಂಟಾಗುತ್ತಿದೆ. ಈ ಸಂಬಂಧ ಮಾಧ್ಯಮಗಳಲ್ಲಿಯೂ ವರದಿಯಾಗಿ ಆತಂಕ ವ್ಯಕ್ತಪಡಿಸಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಆದ್ದರಿಂದ ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಕಬಾಬ್‌ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ರೀತಿ ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 08 ಕಬಾಬ್‌ ಮಾದರಿಗಳು ಕೃತಕ ಬಣ್ಣದಿಂದ (ಸನ್‌ ಸೆಟ್‌ ಯೆಲ್ಲೋ -07 ಮಾದರಿಗಳು ಹಾಗೂ ಸನ್‌ ಸೆಟ್‌ ಯೆಲ್ಲೋ ಮತ್ತು ಕಾರ್ಮೋಸಿನ್‌ ಹೊಂದಿರುವ ಮಾದರಿಗಳು-01) ಕೂಡಿರುರುವದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಯಲ್ಲಿ ಕಂಡು ಬಂದಿರುತ್ತದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯಿದೆ -2006 ರ ಪ್ರಕಾರ ಈ ರೀತಿಯ ಬಣ್ಣಗಳನ್ನು ಬಳಕೆ ಮಾಡುವಂತಿಲ್ಲ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯಿದೆ-2011ರ ನಿಯಮದ ಅನ್ವಯ ಕಬಾಬ್‌ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳು ಬಳಕೆದಾರರ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಬಾಬ್‌ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳುವುದಕ್ಕೆ ಸುರಕ್ಷತೆ ಮತ್ತು ಗುಣಮಟ್ಟ-2006 ರ ನಿಯಮಗಳಲ್ಲಿ ಅವಕಾಶ ಇಲ್ಲದಿರುವುದರಿಂದ ವೆಜ್‌, ಚಿಕನ್ ಅಥವಾ ಫಿಶ್‌ ಮತ್ತಿತರ ಕಬಾಬ್‌ ಗಳ ತಯಾರಿಕೆಯಲ್ಲಿ ಯಾವುದೇ ರೀತಿಯ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಕೃತಕ ಬಣ್ಣಗಳನ್ನು ಬಳಕೆ ಮಾಡಿ ಕಬಾಬ್‌ ತಯಾರಿಸಿದರೆ 7 ವರ್ಷಗಳಿಂದ ಜೀವಾವಧಿ ಅವದೀಯವರೆಗೆ ಜೈಲು ಶಿಕ್ಷೆಯನ್ನು ಮತ್ತು 10 ಲಕ್ಷ ರೂಪಾಯಿ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಹಿಂದೆ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಿದಾಗಲೂ ಸಾರ್ವಜನಿಕರ ಆರೋಗ್ಯವನ್ನು ಮುಖ್ಯವಾಗಿ ಪರಿಗಣಿಸಲಾಗಿತ್ತು. ಕಾಟನ್‌ ಕ್ಯಾಂಡಿಯಲ್ಲಿ ಬಳಸಲಾಗುವ ರೋಡ್‌ ಮೈನ್‌-ಬಿ ಎಂಬ ರಾಸಾಯನಿಕ ಅಂಶವು ದೇಹವನ್ನು ಸೇರಿದರೆ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಸಾರ್ವಜನಿಕರು ಬಣ್ಣ ಬೆರೆಸಿರುವ ಕಬಾಬ್‌ ತಿನ್ನುವುದುನ್ನು ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ಉತ್ತಮ. ಕಬಾಬ್‌ ತಯಾರಕರೂ ಯಾವುದೇ ಬಣ್ಣಗಳನ್ನು ಬೆರೆಸದೆ ಸ್ವಾಭಾವಿಕವಾಗಿ ಕಬಾಬ್‌ ತಯಾರಿಸಿ ಗ್ರಾಹಕರಿಗೆ ಒದಗಿಸಿದರೆ ದಂಡದಿಂದ ಪಾರಾಗಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

(ವರದಿ: ಎಚ್.ಮಾರುತಿ,ಬೆಂಗಳೂರು)