Liquor Rate: ಕರ್ನಾಟಕ ಮದ್ಯ ಪ್ರಿಯರಿಗೆ ಸಂತಸದ ಸುದ್ದಿ, ಬಿಯರ್‌ ಸೇರಿ ದುಬಾರಿ ಮದ್ಯಗಳ ಬೆಲೆ ಇಳಿಕೆ, ಯಾವಾಗಿನಿಂದ ಜಾರಿ?-bangalore news karnataka government reducing costly liquor rate including beer from 2024 july 1st mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Liquor Rate: ಕರ್ನಾಟಕ ಮದ್ಯ ಪ್ರಿಯರಿಗೆ ಸಂತಸದ ಸುದ್ದಿ, ಬಿಯರ್‌ ಸೇರಿ ದುಬಾರಿ ಮದ್ಯಗಳ ಬೆಲೆ ಇಳಿಕೆ, ಯಾವಾಗಿನಿಂದ ಜಾರಿ?

Liquor Rate: ಕರ್ನಾಟಕ ಮದ್ಯ ಪ್ರಿಯರಿಗೆ ಸಂತಸದ ಸುದ್ದಿ, ಬಿಯರ್‌ ಸೇರಿ ದುಬಾರಿ ಮದ್ಯಗಳ ಬೆಲೆ ಇಳಿಕೆ, ಯಾವಾಗಿನಿಂದ ಜಾರಿ?

Bangalore News ಕರ್ನಾಟಕ ಸರ್ಕಾರವು 2024ರ ಜುಲೈ 1 ರಿಂದ ಜಾರಿಗೆ ಬರುವಂತೆ ಮದ್ಯದ ಬೆಲೆಯನ್ನು ಇಳಿಸಲಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕದಲ್ಲಿ ಮದ್ಯದ ಬೆಲೆ ಇಳಿಕೆಯಾಗಲಿದೆ.
ಕರ್ನಾಟಕದಲ್ಲಿ ಮದ್ಯದ ಬೆಲೆ ಇಳಿಕೆಯಾಗಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯ ಅಗ್ಗವಾಗಲಿದೆ. ದುಬಾರಿ ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿದ್ದು, ಜುಲೈ 1 ರಿಂದ ಅಗ್ಗವಾಗಿ ಲಭ್ಯವಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ ನಲ್ಲಿ ಹಣಕಾಸು ಇಲಾಖೆಯ ಜವಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ರಾಜ್ಯಗಳ ಮದ್ಯದ ದರಗಳಿಗೆ ಅನುಗುಣವಾಗಿ ದೇಶಿಯವಾಗಿ ತಯಾರಿಸಿದ ಮದ್ಯ (ಐಎಂಎಲ್)‌ ಮತ್ತು ಬಿಯರ್‌ ನ ಸ್ಲ್ಯಾಬ್‌ ದರಗಳನ್ನು ಪರಿಷ್ಕರಿಸುವುದಗಿ ಭರವಸೆ ನೀಡಿದ್ದರು. ಈಗ ಅನುಷ್ಠಾನಗೊಳ್ಳುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಆದಾಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ದೇಶೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚಿಸಿದ್ದರೆ 2024ರ ಜನವರಿಯಲ್ಲಿ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇದೇ ಮೊದಲ ಬಾರಿಗೆ ತೆರಿಗೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಕರ್ನಾಟಕದಲ್ಲಿ ದುಬಾರಿ

ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮದ್ಯದ ಬೆಲೆ ತುಸು ಹೆಚ್ಚಾಗಿಯೇ ಇದೆ. ಪದೇ ಪದೇ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಳ ಮಾಡುತ್ತಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣ. ಇದೇ ಕಾರಣಕ್ಕೆ ನೆರೆಯ ರಾಜ್ಯಗಳಿ ರಾಜ್ಯದೊಳಗೆ ಅಕ್ರಮವಾಗಿ ಮದ್ಯ ಸರಬರಾಜಾಗುತ್ತಿದೆ. ಈ ರೀತಿ ಅಕ್ರಮವಾಗಿ ಸರಬರಾಜಾಗುತ್ತಿರುವ ಮದ್ಯದ ಪ್ರಮಾಣ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ ಎಂದು ಹೇಳಲಾಗುತ್ತಿದೆ.

ಗಡಿ ಭಾಗದ ಸಾರ್ವಜನಿಕರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿ ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರಣಗಳಿಂದ ರಾಜ್ಯದ ವರಮಾನದಲ್ಲಿ ಖೋತಾ ಆಗಿದ್ದು, ಅಬಕಾರಿ ತೆರಿಗೆಯಲ್ಲಿ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಮದ್ಯ ಮಾರಾಟವನ್ನು ಹೆಚ್ಚಳ ಮಾಡಿ ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ನೆರೆಯ ರಾಜ್ಯಗಳಲ್ಲಿನ ಮದ್ಯ ದರಗಳಿಗೆ ಹತ್ತಿರವಿರುವಂತೆ ರಾಜ್ಯದಲ್ಲೂ ಮದ್ಯದ ದರ ಪರಿಷ್ಕರಿಸಲು ಕರ್ನಾಟಕ ಅಬಕಾರಿ ನಿಯಮಗಳು-1968 ಕ್ಕೆ ತಿದ್ದುಪಡಿ ತರಲು ಮಂಗಳವಾರ ಸರಕಾರ ಕರಡು ಅಧಿಸೂಚನೆ ಹೊರಡಿಸಿದೆ. ಜುಲೈ ೧ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಸ್ಲ್ಯಾಬ್‌ ಲೆಕ್ಕಾಚಾರ

ರಾಜ್ಯದಲ್ಲಿ 18 ಸ್ಲ್ಯಾಬ್‌ ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಸ್ಲ್ಯಾಬ್‌ ಗಳ ಸಂಖ್ಯೆಯನ್ನು 16ಕ್ಕೆ

ಇಳಿಸಿದೆ. ಪ್ರತಿ ಬಲ್ಕ್‌ ಲೀಟರ್‌ ಮದ್ಯದ ಘೋಷಿತ ಉತ್ಪಾದನಾ ದರ ರೂ. 449 ಮೊದಲ ಸ್ಲ್ಯಾಬ್‌ ನಲ್ಲಿದ್ದರೆ 15,001ರಿಂದ ಮೇಲಿನ ಘೋಷಿತ ದರದ ಎಲ್ಲಾ ಮಾದರಿಯ ಮದ್ಯಗಳನ್ನು 18ನೇ ಸ್ಲ್ಯಾಬ್‌ ನಲ್ಲಿ ಇರಿಸಲಾಗಿತ್ತು. ಪರಿಷ್ಕೃತ ದರ ಪಟ್ಟಿಯಲ್ಲಿರುವಂತೆ ಪ್ರತಿ ಬಲ್ಕ್‌ ಲೀಟರ್‌ ಘೋಷಿತ ಉತ್ಪಾದನಾ ದರ ರೂ.450 ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ ನಲ್ಲಿದ್ದರೆ 20,001 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ ಗೆ ಸೇರಿಸಲಾಗಿದೆ ಎನ್ನುವುದು ಅಬಕಾರಿ ಅಧಿಕಾರಿಗಳು ನೀಡುವ ಮಾಹಿತಿ.

ಪ್ರತಿ ಲೀಟರ್‌ ಮದ್ಯದ ಬೆಲೆ ಎಷ್ಟು ಇಳಿಕೆ ಮಾಡಲಾಗಿದೆ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ದರ ಇಳಿಕೆಯಾಗುವುದಂತೂ ನಿಶ್ಚಿತವಾಗಿದ್ದು, ಮದ್ಯಪ್ರಿಯರಿಗೆ ಸರ್ಕಾರದ ಈ ನಿರ್ಧಾರ ಸಂತೋಷವನ್ನುಂಟು ಮಾಡಿದೆ.

ವರದಿ: ಎಚ್.ಮಾರುತಿ, ಬೆಂಗಳೂರು

mysore-dasara_Entry_Point