Education News: ಕರ್ನಾಟಕದಲ್ಲಿ ಪುನರಚನೆಯಾಯ್ತು ಉನ್ನತ ಶಿಕ್ಷಣ ಪರಿಷತ್‌, ಯಾರಿಗೆಲ್ಲಾ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  Education News: ಕರ್ನಾಟಕದಲ್ಲಿ ಪುನರಚನೆಯಾಯ್ತು ಉನ್ನತ ಶಿಕ್ಷಣ ಪರಿಷತ್‌, ಯಾರಿಗೆಲ್ಲಾ ಅವಕಾಶ

Education News: ಕರ್ನಾಟಕದಲ್ಲಿ ಪುನರಚನೆಯಾಯ್ತು ಉನ್ನತ ಶಿಕ್ಷಣ ಪರಿಷತ್‌, ಯಾರಿಗೆಲ್ಲಾ ಅವಕಾಶ

ಬೆಂಗಳೂರಿನಲ್ಲಿರುವ ಉನ್ನತ ಶಿಕ್ಷಣ ಪರಿಷತ್‌ ಅನ್ನು ಪುನರ್‌ರಚಿಸಲಾಗಿದ್ದು, ಹೊಸ ಸದಸ್ಯರನ್ನು ನೇಮಕ ಮಾಡಲಾಗಿದೆ.

ಬೆಂಗಳೂರಿನಲ್ಲಿರುವ ಉನ್ನತ ಶಿಕ್ಷಣ ಪರಿಷತ್‌ ಕಚೇರಿ
ಬೆಂಗಳೂರಿನಲ್ಲಿರುವ ಉನ್ನತ ಶಿಕ್ಷಣ ಪರಿಷತ್‌ ಕಚೇರಿ

ಬೆಂಗಳೂರು: ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಉನ್ನತ ಶಿಕ್ಷಣದ ಬೇಕು ಬೇಡಗಳು, ವರ್ಷದ ಯೋಜನೆ, ಕಾರ್ಯಕ್ರಮ, ಅನುಷ್ಠಾನದ ಕುರಿತು ಪರಾಮರ್ಶೆ ಮಾಡುವ ಕನಾರ್ಕ ಉನ್ನತ ಶಿಕ್ಷಣ ಪರಿಷತ್‌ ಅನ್ನು ಪುನರ್‌ ರಚಿಸಲಾಗಿದೆ. ಕನ್ನಡ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಶಿ..ಬೋರಲಿಂಗಯ್ಯ ಸಹಿತ ಹಲವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯಾಗಿರುವ ಕೆ.ಮಂಜುನಾಥ ಅವರು ಪರಿಷತ್‌ ಗೆ ಹತ್ತು ಮಂದಿ ಸದಸ್ಯರನ್ನು ನೇಮಿಸಿರುವ ಆದೇಶ ಹೊರಡಿಸಿದ್ದಾರೆ.

ಸಮಿತಿಗೆ ಬೋರಲಿಂಗಯ್ಯ ಅವರೊಂದಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಪ್ರೊ.ಕರಿಸಿದ್ದಪ್ಪ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಕರ್ನಾಟಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಪ್ರೊ.ಎಸ್.ಎ.ಪಾಟೀಲ್‌. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವರಾದ ಪ್ರೊ.ಆರ್.ಸುನಂದಮ್ಮ, ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಹಮತ್‌ ತರೀಕೆರೆ, ಬೆಂಗಳೂರು ಕ್ರೈಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕೊ ಪ್ರೊ.ತೆರೇಸಾ ಮಿಥಿಲಾ. ಬೆಂಗಳೂರಿನ ರಾಜರಾಜೇಶ್ವರ ನಗರಿ ನಿವಾಸಿ. ನಿವೃತ್ತ ಪ್ರಾಧ್ಯಾಪಕರಿ ಪ್ರೊ.ಎನ್.ನಂದಿನಿ, ದಾವಣಗೆರೆ ಎಆರ್ ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಹಲಸಂಗಿ ಹಾಗೂ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಯತಿರಾಜುಲು ನಾಯ್ಡು ಅವರನ್ನು ನೇಮಿಸಲಾಗಿದೆ.

ಮುಂದಿನ ಐದು ವರ್ಷಗಳವರೆಗೆ ಅಥವಾ ನಾಮನಿರ್ದೇಶಿತ ಸದಸ್ಯರ 70 ವರ್ಷ ತುಂಬುವವವರೆ ಇಲ್ಲವೇ ಮುಂದಿನ ಆದೇಶದವರೆಗೆ ಇವರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಉನ್ನತ ಪರಿಷತ್‌ ಅನ್ನು ಬಿಜೆಪಿ ಸರ್ಕಾರವಿದ್ದಾಗ ನೇಮಿಸಲಾಗಿತ್ತು. ವಿಶ್ರಾಂತ ಕುಲಪತಿ ಪ್ರೊ.ಸಿದ್ದೇಗೌಡ ಇದರ ಉಪಾಧ್ಯಕ್ಷರಾಗಿದ್ದರು. ಆನಂತರ ಅವರನ್ನು ಬದಲಿಸಿ ಮತ್ತೊಬ್ಬ ವಿಶ್ರಾಂತ ಕುಲಪತಿ ಪ್ರೊ.ನಿರಂಜನ ಅವರ ನೇತೃತ್ವದಲ್ಲಿ ಪರಿಷತ್‌ ರಚನೆಯಾಗಿತ್ತು. ಈಗ ಪರಿಷತ್‌ ಅನ್ನು ಪುನರ್‌ ರಚಿಸಲಾಗಿದೆ.

ಉನ್ನತ ಶಿಕ್ಷಣ ಸಚಿವರು ಪರಿಷತ್‌ನ ಅಧ್ಯಕ್ಷರಾಗಿರುತ್ತಾರೆ. ಸದಸ್ಯರಲ್ಲಿಯೇ ಹಿರಿಯೊಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಅಲ್ಲದೇ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪರಿಷತ್‌ನ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ.

Whats_app_banner