ಕನ್ನಡ ಸುದ್ದಿ  /  ಕರ್ನಾಟಕ  /  Puc Exam-2 Results: ಕರ್ನಾಟಕ ದ್ವಿತೀಯ ಪರೀಕ್ಷೆ- 2 ಫಲಿತಾಂಶ ಇಂದು ಪ್ರಕಟ, ನೋಡೋದು ಹೇಗೆ

Puc Exam-2 Results: ಕರ್ನಾಟಕ ದ್ವಿತೀಯ ಪರೀಕ್ಷೆ- 2 ಫಲಿತಾಂಶ ಇಂದು ಪ್ರಕಟ, ನೋಡೋದು ಹೇಗೆ

ಕರ್ನಾಟಕದಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ2( Second Puc-2) ಪರೀಕ್ಷೆಗಳ ಫಲಿತಾಂಶ ಮೇ 21ರ ಮಂಗಳವಾರ ಪ್ರಕಟವಾಗಲಿದೆ.

ಕರ್ನಾಟಕದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.
ಕರ್ನಾಟಕದ್ವಿತೀಯ ಪಿಯುಸಿ ಪರೀಕ್ಷೆ 2ರ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ( KSEAB) ನಡೆಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು 2024 ರ ಮೇ 21 ರ ಮಂಗಳವಾರದಂದು ಪ್ರಕಟಿಸಲಿದೆ. ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ ಮೂಲಕ ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಗಳನ್ನು ವೀಕ್ಷಿಸಬಹುದು ಎಂದು ಮಂಡಳಿ ಅಧ್ಯಕ್ಷೆಯೂ ಆಗಿರುವ ಐಎಎಸ್‌ ಅಧಿಕಾರಿ ಎನ್‌.ಮಂಜುಶ್ರೀ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2024 ರ ಪಿಯುಸಿ ಪರೀಕ್ಷೆ-2 ಅನ್ನು ಏಪ್ರಿಲ್‌ 29ರಿಂದ ಮೇ 16ರವರೆಗೆ ಆಯೋಜಿಸಲಾಗಿತ್ತು. ಕರ್ನಾಟಕ ನಾನಾ ಭಾಗಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 2024 ರ ಪಿಯುಸಿ ಪರೀಕ್ಷೆ-1ರಲ್ಲಿ ನಿರೀಕ್ಷಿತ ಅಂಕ ಪಡೆಯದವರು, ಅನುತ್ತೀರ್ಣರಾದವರು ಈ ಪರೀಕ್ಷೆ ತೆಗೆದುಕೊಂಡಿದ್ದರು.

ಅದರಲ್ಲಿ ಹಲವಾರು ವಿಷಯಗಳಲ್ಲಿ ಅಂಕ ನಿರೀಕ್ಷೆಯಷ್ಟು ಬಾರದೇ ಇರದವರು ಉತ್ತಮಪಡಿಸಿಕೊಳ್ಳಲು ಬರೆದವರೇ ಹೆಚ್ಚು, ಎರಡು ವಾರದ ಅವಧಿಯಲ್ಲಿ ಪರೀಕ್ಷೆ ನಡೆಸಿ ಐದು ದಿನದಲ್ಲಿಯೇ ಮೌಲ್ಯಮಾಪನ ಮುಗಿಸಿ ಫಲಿತಾಂಶವನ್ನು ನೀಡಲಾಗುತ್ತಿದೆ.

ಅರ್ಹ ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ 3ಕ್ಕೆ https://karresults.nic.in ಮೂಲಕ ಫಲಿತಾಂಶವನ್ನು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕೋವಿಡ್‌ ಕಾರಣದಿಂದ ಮೂರು ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮರ್ಪಕವಾಗಿ ನಡೆದಿರಲಿಲ್ಲ. ಈ ಬಾರಿ ದ್ವಿತೀಯ ಪಿಯುಸಿಗೆ ಸಂಬಂಧಿಸಿದ ತರಗತಿಗಳು, ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ವ್ಯವಸ್ಥಿತವಾಗಿಯೇ ನಡೆಸಿಕೊಂಡು ಬಂದಿತ್ತು. ನಿಗದಿತ ಅವಧಿಯೊಳಗೆ ತರಗತಿಗಳನ್ನು ಮುಗಿಸಿ ಪರೀಕ್ಷೆಗಳ ದಿನಾಂಕಗಳನ್ನೂ ಪ್ರಕಟಿಸಲಾಗಿತ್ತು.

ಮೊದಲ ಬಾರಿಗೆ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ಪ್ರಕಟಿಸಿ ಈಗಾಗಲೇ ಎರಡು ಪರೀಕ್ಷೆಗಳನ್ನು ನಡೆಸಲಾಗಿದ್ದು, ಫಲಿತಾಂಶ ಹೊರ ಬರುತ್ತಿದೆ. ಪಿಯುಸಿ ಪರೀಕ್ಷೆ 3 ದಿನಾಂಕವೂ ಸದ್ಯವೇ ಪ್ರಕಟವಾಗಬಹುದು.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ 2 ಪ್ರವೇಶ ಪತ್ರದಲ್ಲಿ ಪರೀಕ್ಷೆಗಳ ಗೊಂದಲ ಉಂಟಾಗಿತ್ತು.ಪರೀಕ್ಷೆ ತೆಗೆದುಕೊಳ್ಳದ ವಿಷಯವೂ ಅದರಲ್ಲಿ ಮುದ್ರಣವಾಗಿತ್ತು. ತಮ್ಮ ವಿಷಯ ಇರುವ ಪರೀಕ್ಷೆ ಮಾತ್ರ ಎದುರಿಸುವಂತೆ ಮಂಡಳಿ ಸೂಚಿಸಿತ್ತು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ2 ತೆಗೆದುಕೊಳ್ಳುವವರ ನೋಂದಣಿಗೆ ಸಮಯವನ್ನೂ ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯ ಮಾಪನ ಮಂಡಳಿ ವಿಸ್ತರಣೆ ಮಾಡಿತ್ತು.

ಫಲಿತಾಂಶ ನೋಡುವುದು ಹೀಗೆ

https://karresults.nic.in ವೆಬ್‌ಸೈಟ್‌ ಕ್ಲಿಕ್‌ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶ ಎನ್ನುವ ಲಿಂಕ್‌ ಕ್ಲಿಕ್‌ ಮಾಡಿ

ನಿಮ್ಮ ರೋಲ್‌ ನಂಬರ್‌ ಅನ್ನು ನಮೂದಿಸಿ

ನಿಮ್ಮ ವಿಷಯ ಯಾವುದು ಎನ್ನುವುದನ್ನು ತಿಳಿಸಿ

ಅಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಎನ್ನುವ ವಿಷಯ ಬರಲಿದೆ

ಅದರ ಮೇಲೆ ನಿಮ್ಮ ವಿಷಯ ಕ್ಲಿಕ್‌ ಮಾಡಿ

ನಿಮ್ಮ ಫಲಿತಾಂಶ ಸಿಗಲಿದೆ


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024