ಕನ್ನಡ ಸುದ್ದಿ  /  ಕರ್ನಾಟಕ  /  Sslc Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

ಕರ್ನಾಟಕದಲ್ಲಿ ಕಳೆದ ತಿಂಗಳು ನಡೆಸಲಾಗಿದ್ದ ಎಸ್‌ ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಸದ್ಯವೇ ಪ್ರಕಟವಾಗಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ದಿನಾಂಕದ ಕುರಿತು ಫೇಕ್‌ ಸುದ್ದಿಗಳು ಹರಿದಾಡುತ್ತಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ದಿನಾಂಕದ ಕುರಿತು ಫೇಕ್‌ ಸುದ್ದಿಗಳು ಹರಿದಾಡುತ್ತಿವೆ.

ಬೆಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಸದ್ಯವೇ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯ ಮಾಪನಾ ಮಂಡಳಿಯು ಎಸ್‌ಎಸ್‌ಎಲ್‌ಸಿ2024 ಫಲಿತಾಂಶ ನೀಡುವ ದಿನಾಂಕವನ್ನುಸದ್ಯವೇ ಅಧಿಕೃತವಾಗಿ ಪ್ರಕಟಿಸಲಿದೆ.. ಈ ಕುರಿತು ಮಂಡಲಿ ಅಧ್ಯಕ್ಷರೂ ಆಗಿರುವ ಐಎಎಸ್‌ ಅಧಿಕಾರಿ ಎನ್. ಮಂಜುಶ್ರೀ ಅವರು ಸ್ಪಷ್ಟನೆ ನೀಡಿದ್ದಾರೆ. ಮೇ 8ರಂದು ಬೆಳಿಗ್ಗೆ 10ಕ್ಕೆ ಫಲಿತಾಂಶಗಳನ್ನು ಅಧಿಕೃತವಾಗಿ ಮಂಡಲಿ ಪ್ರಕಟಿಸಲಿದೆ ಎನ್ನುವ ಮಾಹಿತಿಗಳನ್ನು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಿಯುಸಿ ಪರೀಕ್ಷೆಗಳ ಫಲಿತಾಂಶದ ರೀತಿಯಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಫಲಿತಾಂಶದ ದಿನಾಂಕದ ವಿಚಾರದಲ್ಲಿ ಮಕ್ಕಳು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಸಹಜವಾಗಿ ಕುತೂಹಲ ಇರುತ್ತದೆ. ಮಾರ್ಚ್‌ನಲ್ಲಿ ಆರಂಭಗೊಂಡು ಏಪ್ರಿಲ್‌ ಎರಡನೇ ವಾರದಲ್ಲಿ ಪರೀಕ್ಷೆಗಳು ಮುಗಿದಿವೆ.

ಈಗಾಗಲೇ ಮೌಲ್ಯಮಾಪನವೂ ಮುಗಿದಿದ್ದು, ಕೊನೆ ಹಂತದ ಚಟುವಟಿಕೆಗಳು ನಡೆದಿವೆ. ಫಲಿತಾಂಶ ಈ ವಾರದಲ್ಲಿ ಇಲ್ಲವೇ ಮುಂದಿನ ವಾರ ಪ್ರಕಟವಾಗಬಹುದು ಎನ್ನಲಾಗುತ್ತಿದೆ.

ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಫಲಿತಾಂಶದ ದಿನಾಂಕ. ಸಮಯ ಹಾಗೂ ಮರುಮೌಲ್ಯಮಾಪನದ ಮಾಹಿತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಮಾಪನ ಮಂಡಲಿಯು ಸ್ಪಷ್ಟನೆ ನೀಡಿದೆ. ಈಗ ಹರಿದಾಡುತ್ತಿರುವ ದಿನಾಂಕಗಳು ಫೇಕ್‌. ಫಲಿತಾಂಶದ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಮಂಡಲಿ ಖಚಿತಪಡಿಸಿದೆ.

ಫಲಿತಾಂಶಗಳನ್ನು ಪರೀಕ್ಷಾ ಮಂಡಳಿಯು ಆನ್‌ಲೈನ್‌ ಮೂಲಕವೂ ಪ್ರಕಟಿಸಲಿದೆ.

Karresults.nic.in ವೆಬ್‌ ಸೈಟ್‌ ಮೂಲಕವೂ ವೀಕ್ಷಿಸಬಹುದು. ಇಲ್ಲವೇ ಮೊಬೈಲ್‌ ಮೂಲಕವೂ ಮೇಲಿನ ಲಿಂಕ್‌ ಕ್ಲಿಕ್‌ ಮಾಡಿ ನಿಮ್ಮ ರೋಲ್‌ ನಂಬರ್‌ ನೀಡಿದರೆ ಅಂಕಗಳು ಗೊತ್ತಾಗಲಿವೆ. ಈ ಕುರಿತು ಅಧಿಕೃತವಾಗಿಯೇ ಮಂಡಳಿ ಪ್ರಕಟಣೆಯನ್ನು ಹೊರಡಿಸಲಿದೆ.

IPL_Entry_Point