ಕನ್ನಡ ಸುದ್ದಿ  /  ಕರ್ನಾಟಕ  /  Ias Posting: ಕರ್ನಾಟಕದ ಅಭಿವೃದ್ದಿ ಆಯುಕ್ತರಾಗಿ ಹಿರಿಯ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ನೇಮಕ

IAS Posting: ಕರ್ನಾಟಕದ ಅಭಿವೃದ್ದಿ ಆಯುಕ್ತರಾಗಿ ಹಿರಿಯ ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌ ನೇಮಕ

Development Commissioner ಕರ್ನಾಟಕದ ಅಭಿವೃದ್ದಿ ಆಯುಕ್ತರಾಗಿ ಐಎಎಸ್‌ ಅಧಿಕಾರಿ( IAS) ಡಾ.ಶಾಲಿನಿ ರಜನೀಶ್‌( Shalini Rajneesh) ಅವರನ್ನು ನೇಮಕ ಮಾಡಲಾಗಿದೆ.

ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌
ಐಎಎಸ್‌ ಅಧಿಕಾರಿ ಶಾಲಿನಿ ರಜನೀಶ್‌

ಬೆಂಗಳೂರು: ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಡಾ.ಶಾಲಿನಿ ರಜನೀಶ್‌ ಅವರನ್ನು ಅಭಿವೃದ್ದಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಮತ್ತೊಬ್ಬ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ ಸಿಂಗ್‌ ಅವರು ಮೇ 31 ರಂದು ನಿವೃತ್ತರಾದ ಹಿನ್ನೆಲೆಯಲ್ಲ ತೆರವಾದ ಈ ಹುದ್ದೆಗೆ ಡಾ.ಶಾಲಿನಿ ರಜನೀಶ್‌ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕದ ಆಡಳಿತಾಂಗದಲ್ಲಿ ಶಾಲಿನಿ ರಜನೀಶ್‌ ಅವರು ಮುಖ್ಯ ಕಾರ್ಯದರ್ಶಿ ನಂತರ ಎರಡನೇ ಸ್ಥಾನದಲ್ಲಿ ಇರಲಿದ್ದಾರೆ. ಸದ್ಯ ಮಂಗಳವಾರದಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಸದ್ಯ ಯೋಜನೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೇವಲ 22 ವರ್ಷಕ್ಕೆ ಯುಪಿಎಸ್ಸಿ ಪರೀಕ್ಷೆ ಮೂಲಕ ಐಎಎಸ್‌ ನಲ್ಲಿ ತೇರ್ಗಡೆ ಹೊಂದಿದವರು. 1989 ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಶಾಲಿನಿ ರಜನೀಶ್‌ ಅವರು ಈಗಾಗಲೇ ಕರ್ನಾಟಕದಲ್ಲಿಯೇ ಐಎಎಸ್‌ ಅಧಿಕಾರಿಯಾಗಿ 35 ವರ್ಷದ ಸೇವೆಯನ್ನು ಪೂರೈಸಿದ್ದಾರೆ.

ಧಾರವಾಡ, ಬೆಳಗಾವಿ, ಕಲಬುರಗಿ ಸಹಿತ ನಾನಾ ಕಡೆಗಳಲ್ಲಿ ಜಿಲ್ಲಾಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಾಗಿಯೂ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲೂ ಹಲವು ಇಲಾಖೆಗಳ ಆಯುಕ್ತರು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಯಶಸ್ವಿಯಾಗಿಯೇ ನಿಭಾಯಿಸಿದ್ದಾರೆ.

ಹಲವಾರು ಪುಸ್ತಕಗಳನ್ನೂ ಶಾಲಿನಿ ಪ್ರಕಟಿಸಿದ್ದಾರೆ. ಉತ್ತಮ ಭಾಷಣಕಾರರಾಗಿಯೂ ಶಾಲಿನಿ ರಜನೀಶ್‌ ಅವರು ಗುರುತಿಸಿಕೊಂಡಿದ್ದಾರೆ.

ಪತಿ ಪತ್ನಿ ಸೇವೆ

ಶಾಲಿನಿ ಅವರು ವಿವಾಹವಾಗಿರುವುದು ಕರ್ನಾಟಕದ ಸದ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ರಜನೀಶ್‌ ಗೋಯಲ್‌ ಅವರನ್ನು. ಮೂರು ದಶಕದ ಹಿಂದೆಯೇ ವಿವಾಹವಾಗಿ ಕರ್ನಾಟಕದಲ್ಲಿಯೇ ದಂಪತಿ ಸೇವೆ ಸಲ್ಲಿಸಿದ್ದಾರೆ.

ಪತಿ ರಜನೀಶ್‌ ಗೋಯಲ್‌ ಜುಲೈಗೆ ನಿವೃತ್ತಿಯಾಗಲಿದ್ದಾರೆ. ಆಗ ಹಿರಿತನದ ಆಧಾರದ ಮೇಲೆ ಡಾ.ಶಾಲಿನಿ ರಜನೀಶ್‌ ಅವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆ ಲಭಿಸಬಹುದು. ಇವರಿಗಿಂಥ ಹಿರಿಯ ಅಧಿಕಾರಿಯಾಗಿರುವ ಅಜಯ್‌ ಸೇಠ್‌ ಸದ್ಯ ಕೇಂದ್ರ ಸೇವೆಯಲ್ಲಿದ್ದಾರೆ. ಅವರಿಗೆ ಇನ್ನೂ ಒಂದು ವರ್ಷದ ಸೇವಾವಧಿ ಇದೆ. ಆದರೆ ಅವರು ಕರ್ನಾಟಕ ಸೇವೆಗೆ ಮರಳುವುದು ಬಹುತೇಕ ಕಷ್ಟ. ಈ ಕಾರಣದಿಂದ ಶಾಲಿನಿ ಅವರೇ ಮುಖ್ಯ ಕಾರ್ಯದರ್ಶಿಯಾಗಬಹುದು. ಅದೂ ಪತಿ ಅವರಿಂದಲೇ ಈ ಹುದ್ದೆಯ ಅಧಿಕಾರ ಸ್ವೀಕರಿಸಬಹುದು. ಪತಿ ಎಂಟು ತಿಂಗಳಿನಿಂದ ಮುಖ್ಯ ಕಾರ್ಯದರ್ಶಿಯಾಗಿದ್ದರೆ. ಬಹುತೇಕ ಮೂರು ವರ್ಷ ಕಾಲ ಶಾಲಿನಿ ಅವರಿಗೆ ಈ ಹುದ್ದೆ ಸಿಗಲಿದೆ. ಇಷ್ಟು ಸುಧೀರ್ಘ ಅವಧಿಯ ಮುಖ್ಯ ಕಾರ್ಯದರ್ಶಿಯಾಗುವುದು ಶಾಲಿನಿ ಅವರೇ.

ಕೆಲವರ ನಿವೃತ್ತಿ

ಕರ್ನಾಟಕ ಕೇಡರ್‌ನ ಕೆಲ ಐಎಎಸ್‌ ಅಧಿಕಾರಿಗಳು ಈ ತಿಂಗಳು ನಿವೃತ್ತರಾಗಿದ್ದಾರೆ. ಇವರಲ್ಲಿ ಕರ್ನಾಟಕದ ನೀರಾವರಿ ಇಲಾಖೆ ಅಪ್ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ರಾಕೇಶ್‌ ಸಿಂಗ್‌, ವಿ. ಮಂಜುಲಾ ಅವರು ಶುಕ್ರವಾರ ನಿವೃತ್ತಿಯಾಗಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)ಟಿ20 ವರ್ಲ್ಡ್‌ಕಪ್ 2024

ವಿಭಾಗ