Yuva Nidhi: ಜನವರಿಯಲ್ಲೇ ಯುವನಿಧಿ ಜಾರಿ, ಡಿ 26ರಿಂದ ಅರ್ಜಿ ಸಲ್ಲಿಕೆ : ಅರ್ಜಿ ಸಲ್ಲಿಸಲು ಮಾರ್ಗ ಏನು , ಯಾರು ಅರ್ಹರಲ್ಲ ಇಲ್ಲಿದೆ ವಿವರ
Yuva Nidhi application ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರು ಆರ್ಥಿಕ ನೆರವು ಪಡೆಯುವ ಯೋಜನೆಗೆ ನೋಂದಣಿ ಪ್ರಕ್ರಿಯೆ ಡಿ.26ರಿಂದ ಆರಂಭಿಸಲಾಗುತ್ತಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿ ಯುವನಿಧಿ ಜಾರಿಯಾಗುತ್ತಿದ್ದು. ಸದ್ಯವೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದಿನ ವಾರ ಡಿಸೆಂಬರ್ 26 ರಿಂದ ಶುರುವಾಗಲಿದೆ.
ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಮೀಪದ ಆನ್‌ಲೈನ್‌ಸೆಂಟರ್‌ಗಳಿಗೆ ತೆರಳಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ನೀವೇ ಖುದ್ದು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅರ್ಜಿ ಸಲ್ಲಿಸಿ ಪರಿಶೀಲನೆ ಬಳಿಕ ಅರ್ಹರಾದವರಿಗೆ 2024ರ ಜನವರಿ ತಿಂಗಳಿನಿಂದಲೇ ಯುವನಿಧಿ ಸಹಾಯಧನ ಬ್ಯಾಂಕ್‌ಗಳ ಖಾತೆಗೆ ಬರಲಿದೆ.
ಈ ವರ್ಷದಲ್ಲಿ ಈಗಾಗಲೇ ಪದವಿ, ಡಿಪ್ಲೊಮಾ ಮುಗಿಸಿದವರಲ್ಲಿ ಸುಮಾರು 5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಅವರು ತಮ್ಮ ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪತ್ರ, ಉದ್ಯೋಗ ಇಲ್ಲದ ಬಗ್ಗೆ ನೋಟರಿಯಿಂದ ಪ್ರಮಾಣ ಪತ್ರ ಇಲ್ಲವೇ ಸ್ವಯಂ ದೃಢೀಕರಣ ಪತ್ರ ಸಲ್ಲಿಸಲು ಅವಕಾಶವಿದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://sevasindhu.karnataka.gov.in
ನಿಬಂಧನೆಗಳನ್ನು ಗಮನಿಸಿ
- ಪದವಿ ಇಲ್ಲವೇ ಡಿಪ್ಲೊಮಾ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಲಭಿಸಿದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.
- ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಈ ಉದ್ಯೋ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.
- ಭತ್ಯೆಯನ್ನು ನೇರ ಬ್ಯಾಂಕ್ ಖಾತೆಗೆ( DBT) ವರ್ಗ ಮಾಡಲಾಗುತ್ತದೆ.
- ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
*ನೀವು ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾಗುವವರಿಗೆ ದಂಡ ವಿಧಿಸಲಾಗುತ್ತದೆ.
ಯಾರು ಅರ್ಹರು
- ಇದು ಗರಿಷ್ಠ ಎರಡು ವರ್ಷದ ಅವಧಿಗೆ ಭತ್ಯೆಯನ್ನು ನೀಡುವ ಯೋಜನೆ
- 2023ರ ಸಾಲಿನಲ್ಲಿ ಉತ್ತೀರ್ಣಯಾದವರು ಅರ್ಜಿ ಸಲ್ಲಿಸಲು ಅರ್ಹರು
- ತೇರ್ಗಡೆಯಾದ ದಿನಾಂಕದಿಂದ 180 ದಿನಗಳ ಕಳೆದಿದ್ದರೂ ಉದ್ಯೋಗ ಸಿಗದೇ ಇದ್ದವರು
- ಪದವೀಧರ ನಿರುದ್ಯೋಗಿಗಳು ವೃತ್ತಿಪರ ಕೋರ್ಸ್ ಮುಗಿಸಿದ ಯುವಕರು. ಇವರಿಗೆ 3 ಸಾವಿರ ರೂ. ಮಾಸಿಕ ಭತ್ಯೆ ಸಿಗಲಿದೆ.
- ಇದೇ ಅವಧಿಯಲ್ಲಿ ಡಿಪ್ಲೋಮಾ ಪಾಸಾಗಿ ಉದ್ಯೋಗ ಸಿಗದವರು ಅರ್ಜಿ ಸಲ್ಲಿಸಬಹುದು. ಇವರಿಗೆ 1500 ರೂ. ನಿರುದ್ಯೋಗ ಭತ್ಯೆ ಮಾಸಿಕ ಸಿಗಲಿದೆ.
ಇವರು ಅರ್ಜಿ ಸಲ್ಲಿಸುವುದು ಬೇಡ
- ಉನ್ನತ ವ್ಯಾಸಂಗಕ್ಕೆ ದಾಖಲಾಗಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸಿದವರು
- ಶಿಶುಕ್ಷು( Apprentice) ವೇತನವನ್ನು ಪಡೆಯುತ್ತಿರುವವರು
- ಸರ್ಕಾರಿ ಇಲ್ಲವೇ ಖಾಸಗಿ ವಲಯದಲ್ಲಿ ಈಗಾಗಲೆ ಉದ್ಯೋಗ ಪಡೆಯುತ್ತಿರುವವರು
- ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು.
================

ವಿಭಾಗ