ಕನ್ನಡ ಸುದ್ದಿ / ಕರ್ನಾಟಕ /
Power rate Hike: ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ, ಫೆಬ್ರವರಿಯಲ್ಲಿ ಅಹವಾಲು ಆಲಿಕೆ
KERC ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರವು ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಎಸ್ಕಾಂಗಳು ಸಲ್ಲಿಸಿರುವ ಬೇಡಿಕೆ ಕುರಿತ ಅರ್ಜಿಗಳ ಮೇಲೆ ಅಹವಾಲು ಆಲಿಕೆ ಮಾಡಲಿದೆ.

ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ಅಹವಾಲುಗಳ ಆಲಿಕೆ ಫೆಬ್ರವರಿಯಲ್ಲಿ ನಡೆಯಲಿದೆ.
ಬೆಂಗಳೂರು: ಕರ್ನಾಟಕದ ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ದರ ಏರಿಕೆ ಮಾಡುವಂತೆ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರಕ್ಕೆ ಅಹವಾಲು ಸಲ್ಲಿಸಿವೆ. ಇವುಗಳ ವಿಚಾರಣೆಯಿ ಫೆಬ್ರವರಿ ತಿಂಗಳಿನಲ್ಲ ನಡೆಯಲಿದೆ. ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಅಹವಾಲು ಸಭೆಗಳು ನಡೆಯಲಿವೆ. ಇದಕ್ಕಾಗಿ ಆಯಾ ವಿದ್ಯುತ್ ಸರಬರಾಜು ಕಂಪೆನಿಗಳು ಸಿದ್ದತೆಯನ್ನು ಮಾಡಿಕೊಂಡಿವೆ. ಆಯೋಗ ಅಹವಾಲು ಆಲಿಸಿದ ನಂತರ ಸರ್ಕಾರಕ್ಕೆ ವರದಿ ನೀಡಲಿದ್ದು, ಸರ್ಕಾರದ ಅನುಮತಿ ಬಳಿಕ ವಿದ್ಯುತ್ ದರ ಏರಿಕೆ ಆಗಬಹುದು.
ಯಾವ ಊರಲ್ಲಿ ಯಾವ ದಿನ
- ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ಮೆಸ್ಕಾಂ ಹಾಗೂ ಮಂಗಳೂರು ವಿಶೇಷ ಆರ್ಥಿಕ ವಲಯದ ಅಹವಾಲು ಆಲಿಕೆ ಮೆಸ್ಕಾಂ ಕಾರ್ಪೊರೇಟ್ ಕಚೇರಿ ಮಂಗಳೂರಿನಲ್ಲಿ ನಡೆಯಲಿದೆ. ಫೆಬ್ರವರಿ 12ರ ಬೆಳಿಗ್ಗೆ 10ರಿಂದ.
ಇದನ್ನೂ ಓದಿರಿ: Ranji Trophy: ಕೇವಲ 147 ಎಸೆತಗಳಲ್ಲಿ ತ್ರಿಶತಕ; ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ತನ್ಮಯ್ ಅಗರ್ವಾಲ್
- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಹವಾಲು ಆಲಿಕೆ ಫೆಬ್ರವರಿ 13ರ ಮಧ್ಯಾಹ್ನ 2 ರಿಂದ. ನ್ಯಾಯಾಲಯ ಸಭಾಂಗಣ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ವಸಂತ ನಗರ ಬೆಂಗಳೂರು
- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ ಅಹವಾಲು ಆಲಿಕೆ. ಫೆಬ್ರವರಿ 14ರ ಬೆಳಿಗ್ಗೆ 10ರಿಂದ ಆರಂಭ. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಲಿದೆ.
- ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಅಹವಾಲು ಆಲಿಕೆ. ಫೆಬ್ರವರಿ 15ರ ಬೆಳಿಗ್ಗೆ 10ರಿಂದ ಆರಂಭ.ನ್ಯಾಯಾಲಯ ಸಭಾಂಗಣ ಕರ್ನಾಟಕ ವಿದ್ಯುತ್‌ಛಕ್ತಿ ನಿಯಂತ್ರಣ ಪ್ರಾಧಿಕಾರ ವಸಂತ ನಗರ ಬೆಂಗಳೂರು
- ಗುಲಬರ್ಗಾ ವಿದ್ಯುತ್ ಸರಬರಾಜು ಕಂಪೆನಿ ಅಹವಾಲು ಆಲಿಕೆ ಫೆಬ್ರವರಿ 20ರಂದು ಬೆಳಿಗ್ಗೆ 10ರಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ. ಮಧ್ಯಾಹ್ನ 2.30ರಿಂದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಕೋ ಆಪರೇಟಿವ್ ಸೊಸೈಟಿ ಹಾಗೂ ವಿಶೇಷ ಆರ್ಥಿಕ ವಲಯದ ಆಹವಾಲು ಆಲಿಕೆ. ಜೆಸ್ಕಾಂ ಕಚೇರಿಯಲ್ಲಿ ಆನ್‌ಲೈನ್ ಮೂಲಕ ನಡೆಯಲಿದೆ.
ಇದನ್ನೂ ಓದಿರಿ: ಕಣ್ಣಿಗೆ ಏಟು ತಿಂದರೂ ಬಾಲರಾಮನ ವಿಗ್ರಹ ಸಿದ್ದಪಡಿಸಿದ ಅರುಣ್ ಯೋಗಿರಾಜ್ , ಸುತ್ತೂರು ಮಠದಲ್ಲಿ ಬಯಲಾದ ಕಾಯಕ ಬದ್ದತೆ video
- ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಫೆಬ್ರವರಿ 21 ರಂದು ಬೆಳಿಗ್ಗೆ 10ರಿಂದ ಹುಬ್ಬಳ್ಳಿಯಲ್ಲಿರುವ ಹೆಸ್ಕಾಂನ ಕಚೇರಿಯ ನೂತನ ಸಭಾಂಗಣದಲ್ಲಿ ನಡೆಯಲಿದೆ ಎನ್ನುವುದು ಪ್ರಾಧಿಕಾರದ ಕಾರ್ಯದರ್ಶಿ ಅವರ ವಿವರಣೆ.
