Bangalore News: ಬೆಂಗಳೂರಿನ ನಾಳೆ ಹಲವೆಡೆ ವಿದ್ಯುತ್‌ ವ್ಯತ್ಯಯ, ಯಾವ ಬಡಾವಣೆಯಲ್ಲಿ ಕರೆಂಟ್‌ ಇರೋಲ್ಲ?
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನ ನಾಳೆ ಹಲವೆಡೆ ವಿದ್ಯುತ್‌ ವ್ಯತ್ಯಯ, ಯಾವ ಬಡಾವಣೆಯಲ್ಲಿ ಕರೆಂಟ್‌ ಇರೋಲ್ಲ?

Bangalore News: ಬೆಂಗಳೂರಿನ ನಾಳೆ ಹಲವೆಡೆ ವಿದ್ಯುತ್‌ ವ್ಯತ್ಯಯ, ಯಾವ ಬಡಾವಣೆಯಲ್ಲಿ ಕರೆಂಟ್‌ ಇರೋಲ್ಲ?

Bangalore Power ಬೆಂಗಳೂರು ನಗರದ ಪ್ರಮುಖ ಭಾಗದಲ್ಲಿ ಜೂನ್‌ 22ರ ಶನಿವಾರ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರಿನ ಕೆಲವೆಡೆ ಶನಿವಾರ  ವಿದ್ಯುತ್‌ ಸರಬರಾಜು ಇರುವುದಿಲ್ಲ.
ಬೆಂಗಳೂರಿನ ಕೆಲವೆಡೆ ಶನಿವಾರ ವಿದ್ಯುತ್‌ ಸರಬರಾಜು ಇರುವುದಿಲ್ಲ.

ಬೆಂಗಳೂರು: ಶನಿವಾರ ನಾಲ್ಕನೇ ರಜೆ. ಸರ್ಕಾರಿ ಕಚೇರಿಗಳಿಗೂ ಬಿಡುವು, ವಾರಾಂತ್ಯವಾಗಿರುವುದರಿಂದ ಸಾಫ್ಟ್‌ವೇರ್‌ ಸಹಿತ ಹಲವು ಕಂಪೆನಿಗಳಿಗೂ ರಜೆ.ಆದರೆ ಬೆಂಗಳೂರಿನ ಹಲವು ಪ್ರದೇಶದಲ್ಲಿ ಹಗಲಿನ ವೇಳೆ ವಿದ್ಯುತ್‌ ಕಡಿತವಾಗಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ನಿರ್ವಹಣಾ ಕಾಮಗಾರಿಯಿಂದಾಗಿ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ 2024ರ ಜೂನ್‌ 22ರ  ಶನಿವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕೆಳಗಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಚ್‌ಆರ್‌ಬಿಆರ್ 1ನೇ, 2ನೇ, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಬಾಬುಸಾಪಾಳ್ಯ, ಬಾಲಚಂದ್ರ ಲೇಔಟ್, ಹೂವಿನ ಉದ್ಯಾನ, ಎಂಎಂ ಗಾರ್ಡನ್, ಅರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್‌ಕ್ಲೇವ್,ದಿವ್ಯಾ ಉನ್ನತಿ ಲೇಔಟ್‌ ನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್, ಬಾಲಾಜಿ ಲೇಔಟ್, ಜಿಎನ್‌ಆರ್ ಗಾರ್ಡನ್, ಚೇಳಕೆರೆ, ಚೇಳೇಕೆರೆ ಗ್ರಾಮ, ಆಶೀರ್ವಾದ ಕಾಲೋನಿ, ಶಕ್ತಿ ನಗರ, ಹೆಣ್ಣೂರು ಗ್ರಾಮ ಬೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಹೆಣ್ಣೂರು ಕ್ರಾಸ್ ನಲ್ಲಿ ವಿದ್ಯುತ್‌ ಅಡಚಣೆಯಾಗಲಿದೆ.

ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್,ಒಎಂಬಿಆರ್ ಭಾಗಗಳು, ಕಸ್ತೂರಿ ನಗರದ ಭಾಗ, ಪಿಲ್ಲಾರೆಡ್ಡಿ ನಗರದ ಭಾಗಗಳು, ಕರವಳ್ಳಿ ರಸ್ತೆ, ರಾಮಯ್ಯ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆಯಲ್ಲೂ ಹಗಲು ಭಾಗದಲ್ಲಿ ವಿದ್ಯುತ್‌ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬಿ ಚನ್ನಸಂದ್ರ, ನಂಜಪ್ಪ ಗಾರ್ಡನ್, ಅಗರ ಮುಖ್ಯರಸ್ತೆ ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ, ಆರ್‌ಎಸ್ ಪಾಳ್ಯ, ಎಡಿಎಂಸಿ ಮಿಲಿಟರಿ ಗೇಟ್, ಮುನಿಸ್ವಾಮಿ ರಸ್ತೆ ಮತ್ತು ಮುನಿ ವೀರಪ್ಪ ರಸ್ತೆ, ಕುಳ್ಳಪ್ಪ ವೃತ್ತ, ರಾಜ್‌ಕುಮಾರ್ ಪಾರ್ಕ್, ಮೇಘನಾ ಪಾಳ್ಯ, ಮುನಿಸ್ವಾಮಪ್ಪ ಲೇಔಟ್, ಬಂಜಾರ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಟ್ರಿನಿಟಿ ಎನ್ಕ್ಲೇವ್, ಸಂಕಲ್ಪ ಲೇಔಟ್, ಸಮೃದ್ಧಿ ಲೇಔಟ್, ಎಸ್ಎಲ್ವಿ ಲೇಔಟ್, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್‌ ಇರುವುದಿಲ್ಲ ಎಂದು ತಿಳಿಸಲಾಗಿದೆ.

 

Whats_app_banner