Lok Sabha Elections2024: ಕಾಂಗ್ರೆಸ್ ನಲ್ಲಿ 6 ಸಚಿವರು ಇಲ್ಲವೇ ಅವರ ಕುಟುಂಬದವರಿಗೆ ಟಿಕೆಟ್ ಖಚಿತ
Karnataka Politics ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ನಡೆದಿದೆ. ಸಚಿವರು ಸ್ಪರ್ಧಿಸಬೇಕು ಎನ್ನುವ ಒತ್ತಡವಿದ್ದರೂ ಬಹುತೇಕರು ತಮ್ಮ ಕುಟುಂಬದವರ ಪರ ನಿಂತಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆಗೆ ತಯಾರಿಗಳು ನಡೆದಿರುವ ಜತೆಯಲ್ಲಿಯೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಜೋರಾಗಿದೆ. ಅದರಲ್ಲೂ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಎಲ್ಲಾ 28 ಕ್ಷೇತ್ರಗಳಿಗೂ ಸೂಕ್ತ ಅಭ್ಯರ್ಥಿಯನ್ನು ಹಾಕುವ ಪ್ರಯತ್ನಗಳು ನಡೆದಿವೆ. ಐದು ಕ್ಷೇತ್ರದಲ್ಲಿ ಸಚಿವರು ಇಲ್ಲವೇ ಅವರ ಕುಟುಂಬದವರಿಗೆ ಟಿಕೆಟ್ ಎನ್ನುವ ನಿರ್ಧಾರವನ್ನು ಸ್ಥಳೀಯ ಮಟ್ಟದಲ್ಲಿ ಮಾಡಲಾಗಿದೆ. ಇದಕ್ಕೆ ಹೈಕಮಾಂಡ್ ಅನುಮತಿ ದೊರೆತರೆ ಈ ಬಾರಿ ಸಚಿವರು ಇಲ್ಲವೇ ಅವರ ಕುಟುಂಬದವರು ಕಣಕ್ಕೆ ಇಳಿಯುವುದು ಖಚಿತ. ಅದರಲ್ಲೂ ಕೆಲವರು ಕಡೆ ಶಾಸಕರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ನಾಯಕರು ಅಭ್ಯರ್ಥಿಗಳ ಆಯ್ಕೆಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಶುಕ್ರವಾರ ಇಲ್ಲವೇ ಶನಿವಾರ ದೆಹಲಿಯಲ್ಲಿ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಕರ್ನಾಟಕದ ಪಟ್ಟಿ ಅಂತಿಮಗೊಳಿಸಬಹುದು ಎನ್ನಲಾಗುತ್ತಿದೆ.
ಯಾರಿಗೆ ಎಲ್ಲಿಗೆ ಅವಕಾಶ?
- ಹಿರಿಯ ಸಚಿವ ಹಾಗೂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಚಾಮರಾಜನಗರ ಮೀಸಲು ಕ್ಷೇತ್ರದಿಂದ ತಮ್ಮ ಪುತ್ರ ಸುನೀಲ್ ಬೋಸ್‌ಗೆ ಈ ಬಾರಿ ಶತಾಯಗತಾಯ ಟಿಕೆಟ್ ಕೊಡಿಸಬೇಕು ಎನ್ನುವ ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಗೂ ಮಗನಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಡಿಕೆ ಶಿವಕುಮಾರ್ ನೀವೇ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದು ಬನ್ನಿ. ಮುಂದೆ ಮಗನಿಗೆ ತಿ.ನರಸೀಪುರ ಕ್ಷೇತ್ರ ಬಿಟ್ಟು ಕೊಡಿ ಎನ್ನುವ ಸಲಹೆ ನೀಡಲಾಗಿದೆ. ಆದರೆ ಮಹಾದೇವಪ್ಪ ಒಪ್ಪದೇ ಮಗನಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
- ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಕ್ಕರೆ, ಜವಳಿ ಸಚಿವ, ಬಸವನಬಾಗೇವಾಡಿ ಶಾಸಕರೂ ಆಗಿರುವ ಶಿವಾನಂದ ಪಾಟೀಲ್ ಅವರಿಗೂ ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ ಅವರು ತಮ್ಮ ಪುತ್ರಿ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಸಂಯುಕ್ತ ಪಾಟೀಲ್ ಅವರಿಗೆ ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ. ಬಾಗಲಕೋಟೆಯಲ್ಲಿ ಸಂಯುಕ್ತ ಪಾಟೀಲ್ ಹೆಸರು ಪ್ರಬಲವಾಗಿಯೇ ಇದೆ.
ಇದನ್ನೂ ಓದಿರಿ:Women's Day 2024: ಮಹಿಳೆಯರ ಪರ ನಮ್ಮಲ್ಲಿವೆ ಅಗಣಿತ ಕಾನೂನುಗಳು, ಅನುಷ್ಠಾನದ್ದೇ ಸಮಸ್ಯೆ - ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರಿಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಲಾಗುತ್ತಿದೆ. ಅವರು ಒಪ್ಪದೇ ಕಳೆದ ಬಾರಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಸೋತ ಪುತ್ರಿ, ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದಾರೆ.
- ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇಲ್ಲವೇ ಅವರ ತಂದೆ ಶಾಸಕರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರು ದಾವಣಗರೆ ಕ್ಷೇತ್ರದಿಂದ ಕಣಕ್ಕಿಳಿಯುವಂತ ಒತ್ತಡವಿದೆ. ಆದರೆ ಮಲ್ಲಿಕಾರ್ಜುನ್ ತಮ್ಮ ಪತ್ನಿ ಪ್ರಭಾ ಅವರಿಗೆ ಅವಕಾಶ ಮಾಡಿಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ ಎನ್ನುವ ಮಾತನ್ನು ವರಿಷ್ಠರ ಮುಂದೆ ಹೇಳುತ್ತಿದ್ದಾರೆ.
- ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರೂ ಆಗಿರುವ ಕೇಂದ್ರದ ಮಾಜಿ ಸಚಿವ, ಹಾಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಕೋಲಾರದಿಂದ ಸ್ಪರ್ಧಿಸುವಂತೆ ಈಗಾಗಲೇ ವರಿಷ್ಠರೇ ಸೂಚಿಸಿದ್ದಾರೆ. ಅವರು ಆಸಕ್ತಿ ತೋರಿಸುತ್ತಿಲ್ಲ. ಕೊನೆ ಕ್ಷಣದಲ್ಲಿ ಕೋಲಾರದಿಂದ ಕಣಕ್ಕೆ ಇಳಿಯಬಹುದು.
ಇದನ್ನೂ ಓದಿರಿ:ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸರ್ಫರಾಜ್ ಖಾನ್ ಮನವಿ ಆಲಿಸದ ರೋಹಿತ್; ನಂತ್ರ ಆಗಿದ್ದು ಪಶ್ಚಾತಾಪ, ವಿಡಿಯೊ ನೋಡಿ - ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವ ಒತ್ತಡ ವರಿಷ್ಠರ ಮಟ್ಟದಲ್ಲಿದೆ. ಆದರೆ ಅವರು ನಿರಾಕರಿಸುತ್ತಿದ್ದಾರೆ. ಪರೋಕ್ಷವಾಗಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ. ಬೆಳಗಾವಿಗೂ ಪ್ರಿಯಾಂಕ ಹೆಸರು ಅಂತಿಮವಾಗಬಹುದು ಎನ್ನಲಾಗುತ್ತಿದೆ.
- ಇನ್ನು ಕೆನರಾ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಬಿಜೆಪಿ ಶಾಸಕ, ರಾಜ್ಯಸಭಾ ಚುನಾವಣೆಯಲ್ಲಿ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೆಸರು ಇದೆ
- ಬೆಂಗಳೂರು ಕೇಂದ್ರದಲ್ಲಿ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಅವರು ಕಣಕ್ಕೆ ಇಳಿಯಬಹುದು. ಇಲ್ಲಿ ಅವರು ಗೆದ್ದರೆ ತೆರವಾಗುವ ಶಾಸಕ ಸ್ಥಾನಕ್ಕೆ ಅವರ ಪುತ್ರ ನಳಪಾಡ್ ಅವರನ್ನು ಕಣಕ್ಕಿಳಿಸಬಹುದು ಎನ್ನುವ ಲೆಕ್ಕಾಚಾರವಿದೆ.
- ಬಳ್ಳಾರಿಯಲ್ಲಿ ಸಂಡೂರು ಶಾಸಕ, ಮಾಜಿ ಸಚಿವ ತುಕಾರಾಂ ಅವರ ಪುತ್ರಿ ಚೈತನ್ಯಾ ತುಕಾರಾಂ ಅವರ ಹೆಸರು ಅಂತಿಮವಾಗಿದೆ. ಇಲ್ಲಿಂದ ಸೋನಿಯಾಗಾಂಧಿ ಅವರು ಈ ಹಿಂದೆ ಕಣಕ್ಕಿಳಿದು ಗೆದ್ದಿದ್ದರು. ಈ ಕಾರಣದಿಂದ ಇಲ್ಲಿ ಮಹಿಳೆಯೊಬ್ಬರಿಗೆ ಅವಕಾಶ ನೀಡಬೇಕು ಎನ್ನುವ ಒತ್ತಡ ವರಿಷ್ಠರ ಹಂತದಲ್ಲಿಯೇ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿರಿ: Opinion: ಲೋಕಸಭಾ ಚುನಾವಣೆ 2024: 543 ಸ್ಥಾನಗಳಿಗೆ ನಡೆಯುವ ಹಾವು ಏಣಿಯಾಟದಲ್ಲಿ ಯುವಜನರಿಗೆಷ್ಟು ಅವಕಾಶ ಸಿಗಬಹುದು
- ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆ ಪ್ರಚಾರದ ಜವಾಬ್ದಾರಿಯಿಂದ ಕಣಕ್ಕೆ ಇಳಿಯುವ ಸಾಧ್ಯತೆ ಕಡಿಮೆ. ಅವರ ಬದಲು ಅಳಿಯ, ನಿವೃತ್ತ ಅಧಿಕಾರಿ ರಾಧಾಕೃಷ್ಣ ಅವರಿಗೆ ಅವಕಾಶ ಸಿಗಬಹುದು.