Bangalore Crime: ಬೆಂಗಳೂರು ವ್ಯಕ್ತಿಗೆ ಸ್ವಿಗ್ಗಿ ಹೆಸರಲ್ಲಿ ಬಂದದ್ದು 10,000 ಸಂದೇಶ: 38 ಸಾವಿರ ರೂ, ಕಡಿತ, ಆಗಿದ್ದೇನು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರು ವ್ಯಕ್ತಿಗೆ ಸ್ವಿಗ್ಗಿ ಹೆಸರಲ್ಲಿ ಬಂದದ್ದು 10,000 ಸಂದೇಶ: 38 ಸಾವಿರ ರೂ, ಕಡಿತ, ಆಗಿದ್ದೇನು

Bangalore Crime: ಬೆಂಗಳೂರು ವ್ಯಕ್ತಿಗೆ ಸ್ವಿಗ್ಗಿ ಹೆಸರಲ್ಲಿ ಬಂದದ್ದು 10,000 ಸಂದೇಶ: 38 ಸಾವಿರ ರೂ, ಕಡಿತ, ಆಗಿದ್ದೇನು

Bangalore Online fraud ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ ಯೊಬ್ಬರು ಸ್ವಿಗ್ಗಿ ಹೆಸರಿನಲ್ಲಿ ಬಂದ ಸಂದೇಶದಿಂದಾಗಿ 38 ಸಾವಿರ ರೂ. ಕಳೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು: ನೀವೇನಾದರೂ ಸ್ವಿಗ್ಗಿ ಇಲ್ಲವೇ ಇತರೆ ಕಂಪೆನಿಯಿಂದ ಆಹಾರ ಅಥವಾ ಇತರೆ ವಸ್ತುಗಳ ಖರೀದಿಗೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುತ್ತೀರಾ.. ಎಚ್ಚರ ವಹಿಸಲೇಬೇಕು.

ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ತಾವು ಯಾವುದೇ ವಸ್ತುವಿಗೆ ಬುಕ್ಕಿಂಗ್‌ ಮಾಡದೇ ಇದ್ದರೂ ಅನಗತ್ಯವಾಗಿ ಬಂದ ಸಂದೇಶಕ್ಕೆ ಉತ್ತರಿಸಲು ಹೋಗಿ ಹಣ ಕಳೆದುಕೊಂಡಿದ್ದಾರೆ.

ಅದೂ ಹತ್ತು ಸಾವಿರ ಸಂದೇಶಗಳು ಅವರ ಮೊಬೈಲ್‌ಗೆ ಬಂದಿವೆ. ವಿವರವನ್ನು ಹ್ಯಾಕ್‌ ಮಾಡಿ 38 ಸಾವಿರ ರೂ ಲಪಟಾಯಿಸಲಾಗಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಮೊಕದ್ದಮೆ ದಾಖಲಿಸಿದ್ಧಾರೆ.

ಕೆ.ಎಸ್‌.ಚನ್ನಕೇಶವ ಎನ್ನುವವರು ಅಟೊಮೊಬೈಲ್‌ ಸಂಸ್ಥೆಯೊಂದರ ಎಕ್ಸಿಕ್ಯೂಟಿವ್‌. ಅವರಿಗೆ ಕರೆಯೊಂದು ಬಂದಿದ್ದು. ಅದು ಆಟೋಮೆಟೆಡ್‌ ಧ್ವನಿ ಕರೆಯಾಗಿತ್ತು. ನೀವು ನೀಡಿದ್ದ ಆರ್ಡರ್‌ ಅನ್ನು ತೆಗೆದುಕೊಂಡಿದ್ದೇವೆ. ಸ್ವಿಗ್ಗಿ ಅಕೌಂಟ್‌ನಿಂದ 5,345 ರೂ.ಗಳ ಆರ್ಡರ್‌ ಇದು. ಅದು ನೀವೇ ಆಗಿದ್ದರೆ 2 ಒತ್ತಿ, ಇಲ್ಲದೇ ಇದ್ದರೆ 1 ಒತ್ತಿ ಎನ್ನುವ ಮಾಹಿತಿ ಬಂದಿದೆ.

ತಾವು ಸ್ವಿಗ್ಗಿ ಮೂಲಕ ಯಾವುದೇ ಆರ್ಡರ್‌ ಬುಕ್‌ ಮಾಡದೇ ಇದ್ದುದರಿಂದ ಅವರು 1 ಅನ್ನು ಒತ್ತಿದ್ದಾರೆ. ಆಗ ನಿಮಗೆ ಒಂದು ಒಟಿಪಿ ಬಂದಿದೆ ಎನ್ನುವ ಸಂದೇಶ ರವಾನೆಯಾಗಿದೆ. ಆಗ ಅವರು ಒಟಿಪಿಯನ್ನು ದಾಖಲು ಮಾಡಿದ್ದಾರೆ. ಆನಂತರ ನಿಮ್ಮ ಅಕೌಂಟ್‌ ಸೇಫ್‌ ಎನ್ನುವ ಸಂದೇಶ ಬಂದಿದೆ.

ಇದಾದ ಕೆಲವೇ ಹೊತ್ತಿನಲ್ಲಿ ಮತ್ತೆ ಸಂದೇಶ ಬರಲು ಶುರುವಾಗಿದ್ದರಿಂದ ತಮ್ಮ ಹೆಸರಿನ ಅಕೌಂಟ್‌ ಮೂಲಕ ಯಾರೋ ವಹಿವಾಟು ನಡೆಸುತ್ತಿರಬಬಹುದು ಎನ್ನುವ ಅನುಮಾನ ಅವರಿಗೆ ಬಂದಿದೆ. ಕೆಲವೇ ಹೊತ್ತಿನಲ್ಲಿ ಅವರ ಲೇಜಿ ಪೇ ಆ್ಯಪ್ ಮೂಲಕ 38,720 ರೂ. ಕಡಿತಗೊಂಡಿದೆ. ಇದಾದ ಬಳಿಕವಂತೂ ಅವರಿಗೆ ನಿಯಮಿತವಾಗಿ ಸಂದೇಶಗಳು ಬಂದಿವೆ. ಹಲವು ಬಾರಿ ಮಿಸ್ಡ್‌ ಕಾಲ್‌ ಕೂಡ ಬಂದಿದೆ. ಒಟ್ಟು ಹತ್ತು ಸಾವಿರ ಸಂದೇಶಗಳು ಅವರ ಮೊಬೈಲ್‌ಗೆ ಬಂದಿವೆ. ಆನಂತರ ಸ್ವಿಗ್ಗಿ ಅಕೌಂಟ್‌ ಲಾಗ್‌ ಆಫ್‌ ಮಾಡಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಎಲ್ಲ ದಾಖಲೆಗಳೊಂದಿಗೆ ಮರು ದಿನ ಠಾಣೆಗೆ ಹೋದಾಗ ಮತ್ತೆ ಸ್ವಿಗ್ಗಿ ಅಕೌಂಟ್‌ ಲಾಗ್‌ ಆನ್‌ ಮಾಡಿದಾಗ ಅಲ್ಲಿದ್ದ ಮಾಹಿತಿ ಎಲ್ಲಾ ಅಳಿಸಿ ಹಾಕಲಾಗಿತ್ತು. ಈ ಬಗ್ಗೆ ಸ್ವಿಗ್ಗಿ ಸಂಸ್ಥೆಗೂ ಇ ಮೇಲ್‌ ಮೂಲಕ ದೂರು ದಾಖಲಿಸಲಾಗಿದ್ದು. ಪೊಲೀಸ್‌ ತನಿಖೆ ನಡೆದಿದೆ.

Whats_app_banner