ಕನ್ನಡ ಸುದ್ದಿ  /  Karnataka  /  Bangalore News Ministers Lakshmi Hebbalkar Jameer Ahmad Khan Request To Meet Cm Siddaramaiah Wife Kpcc Video Viral Kub

Siddaramaiah Wife: ನಿಮ್ಮ ಪತ್ನಿ ತೋರಿಸಿ ಸರ್‌ ಎನ್ನುವ ಸಂಪುಟ ಸದಸ್ಯರ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಉತ್ತರವೇನು video

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಮ್ಮ ಪತ್ನಿ ಅವರನ್ನು ನಮಗೂ ತೋರಿಸಿ ಎನ್ನುವುದು ಸಚಿವರ ಬೇಡಿಕೆ. ಅದಕ್ಕೆ ಸಿದ್ದರಾಮಯ್ಯ ಅವರ ಉತ್ತರ ವಿಶಿಷ್ಟವಾಗಿಯೇ ಇತ್ತು,

ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಅವರೊಂದಿಗೆ
ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಅವರೊಂದಿಗೆ

ಬೆಂಗಳೂರು: ನಾವಂತೂ ನಿಮ್ಮ ಪತ್ನಿಯನ್ನು ಒಮ್ಮೆಯೂ ನೋಡಿಯೇ ಇಲ್ಲ. ನಮಗೂ ಒಮ್ಮೆ ತೋರಿಸಿ ಸರ್‌. ನಾವು ಅವರನ್ನು ಈವರೆಗೂ ನೋಡಿಲ್ಲ. ಅಮ್ಮ ಅವರನ್ನು ನಾವೆಲ್ಲರೂ ನೋಡಲೇಬೇಕು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ, ನಿಮ್ಮ ಪತ್ನಿ, ಕುಟುಂಬಕ್ಕೆ ನೀವು ಸಮಯ ಹೇಗೆ ಕೊಡುತ್ತೀರಿ, ರಾಜಕೀಯದಲ್ಲೇ ಹೆಚ್ಚು ಸಮಯ ಕಳೆಯುವ ನೀವು ಕುಟುಂಬದವರೊಂದಿಗೆ ಯಾವಾಗ ಇರುತ್ತೀರಿ, ಮನೆಯವರು ನಿಮ್ಮ ಸಮಯ ಕೇಳುವುದಿಲ್ಲವೇ,

ಇಂತಹ ಪ್ರಶ್ನೆಗಳು ಎದುರಾಗಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ. ಇಂತಹ ಪ್ರಶ್ನೆ ಹಾಕಿದವರು ಸಾಮಾನ್ಯರಾಗಲಿ, ಸಿದ್ದರಾಮಯ್ಯ ಅವರ ಅಭಿಮಾನಿಗಳಲ್ಲ. ಬದಲಿಗೆ ಸಿದ್ದರಾಮಯ್ಯ ಅವರ ಸಂಪುಟದ ಸದಸ್ಯರು.

ಸಿದ್ದರಾಮಯ್ಯ ಅವರೊಂದಿಗೆ ಡಿಸಿಎಂ ಡಿಕೆಶಿವಕುಮಾರ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್‌, ಜಮೀರ್‌ ಅಹಮದ್‌ ಖಾನ್‌, ಎಂ.ಸಿ.ಸುಧಾಕರ್‌, ಶಿವರಾಜ ತಂಗಡಗಿ, ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮದ್‌, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅತೀಕ್‌ ಅವರು ಕುಳಿತು ಸಂವಾದದಲ್ಲಿ ತೊಡಗಿರುವ ವಿಡಿಯೋ ಇದು. ಇದನ್ನು ಕೆಪಿಸಿಸಿ ಈ ವಿಡಿಯೋ ವನ್ನು ಸಿಎಂ ಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು ಎನ್ನುವ ಹೆಸರನ್ನು ಶೇರ್‌ ಮಾಡಿದೆ.

ನೀವು ರಾಜಕೀಯದಲ್ಲಿ ಗುರುತಿಸಿಕೊಂಡವರು. ಬರೀ ರಾಜಕೀಯ ಎಂದುಕೊಂಡುತ್ತೀರಾ, ಕುಟುಂಬಕ್ಕೂ ಸಮಯ ಕೊಡ್ತೀರಾ ಎಂದು ಲಕ್ಷ್ಮಿ ಹೆಬ್ಬಾಳಕರ್‌ ಪ್ರಶ್ನೆ, ಸಾರ್ವಜನಿಕ ಜೀವನದಲ್ಲಿ ಇರುವರಿಗೆ ಕುಟುಂಬದ ಕಡೆಗೆ ಸಮಯ ನೀಡಲು ಆಗುವುದಿಲ್ಲ. ರಾಜಕಾರಣಿ ಆಗಬೇಕಾದರೆ ಮದುವೆ ಆಗಬೇಡಿ ಎಂದು ಲೋಹಿಯಾ ಹೇಳುತ್ತಿದ್ದರು ಎನ್ನುವ ಸಿದ್ದರಾಮಯ್ಯ ಉತ್ತರಕ್ಕೆ ನಗೆ.

ನಾವೆಲ್ಲಾ ಸಿಎಂ ಅವರನ್ನು ನೋಡಬೇಕು. ಅವಕಾಶ ಮಾಡಿಕೊಡಬೇಕು. ಕಾಯಕವೇ ಕೈಲಾಸ ಎಂದು ಬಸವಣ್ಣ ಅವರ ತತ್ವ ನಂಬಿದವರು. ನಿಮ್ಮ ಪತ್ನಿ ದೈವೀ ಭಕ್ತರು ಎಂದು ಕೇಳಿದ್ದೇವೆ. ನಾವು ಅವರನ್ನು ನೋಡಲೇ ಇಲ್ಲ. ಒಮ್ಮೆ ತೋರಿಸಿ ಎನ್ನುವುದು ಲಕ್ಷ್ಮಿ ಹೆಬ್ಬಾಳಕರ್‌ ಬೇಡಿಕೆ.

ಮನೆಯಲ್ಲಿ ಗೃಹಮಂತ್ರಿಯೇ ಪ್ರಭಾವಿ. ಅವರ ಗೃಹಬಂಧನದಲ್ಲಿಟ್ಟೀದ್ದೀರಾ ಎನ್ನುವ ಪ್ರಶ್ನೆ ಎಂಸಿ ಸುಧಾಕರ್‌ ಅವರದ್ದು, ಅವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೀವಿ. ಕುಟುಂಬ ಕಾರ್ಯಕ್ರಮವೊಂದಕ್ಕೆ ಕರೆದರೂ ಅವರು ಬರಲಿಲ್ಲ ಎಂದರು ಸಿದ್ದರಾಮಯ್ಯ.

ಸದ್ಯಕ್ಕೆ ಸಿದ್ದರಾಮಯ್ಯ ಅವರು ಊಟಕ್ಕೆ ಕರೆಯಲಿದ್ದಾರೆ. ಎಲ್ಲರೂ ಸೇರಿ ಒಮ್ಮೆ ನಿಮ್ಮ ಮನೆಯವರೊಂದಿಗೆ ಊಟ ಮಾಡುತ್ತೇವೆ ಎನ್ನುವ ಸಲಹೆ ನೀಡಿದವರು ಡಿ.ಕೆ.ಶಿವಕುಮಾರ್‌. ಇದಕ್ಕೆ ಜಮೀರ್‌ ಅಹಮದ್‌ ಖಾನ್‌ ಕೂಡ ಅಮ್ಮ ಅವರನ್ನು ನಾವು ನೋಡಬೇಕು. ಅವರೊಂದಿಗೆ ಊಟ ಮಾಡಬೇಕು ಎಂದು ದನಿಗೂಡಿಸಿದರು. ಇದಕ್ಕೆ ಸಿದ್ದರಾಮಯ್ಯ ನಗುತ್ತಲೇ ಸಮ್ಮತಿಸಿದರು.

IPL_Entry_Point