Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ
ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ಇರುವ ನಡುವೆಯೇ ಬಿಬಿಎಂಪಿಯು ( BBMP) ಬೆಂಗಳೂರಿನಲ್ಲಿರುವ ಅಪಾಯಕಾರಿ ಮರಗಳ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಇದಕ್ಕೆ ದೂರವಾಣಿ ಸಂಖ್ಯೆಗಳನ್ನೂ ನೀಡಿದೆ.

ಬೆಂಗಳೂರು: ಈಗಾಗಲೇ ಬೆಂಗಳೂರು ಸಹಿತ ಕರ್ನಾಟಕ ಬಹುತೇಕ ಭಾಗಗಳಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಭಾರೀ ಮೇ ಜತೆಗೆ ಗಾಳಿಯೂ ಬೀಸುತ್ತಿದೆ. ಕೆಲವು ಭಾಗಗಳಲ್ಲಿ ಬಿರುಗಾಳಿಯೂ ಬರುತ್ತಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಗೆ ಮರಗಳೂ ಉರುಳು ಬಿದ್ದಿವೆ. ಇನ್ನೂ ಕೆಲವು ಕಡೆ ಮರಗಳು ಮುರಿದು ಬೀಳುವ ಸನ್ನಿವೇಶದಲ್ಲೂ ಇವೆ. ಟೊಂಗೆಗಳು ರಸ್ತೆಗೆ ಬಾಗಿ ಅನಾಹುತ ಒಡ್ಡುತ್ತಿವೆ. ಜನರ ಮೇಲೆ ದುಷ್ಪರಿಣಾಮ ಇನ್ನಷ್ಟು ದುಷ್ಪರಿಣಾಮ ಬೀರುವ ಮುನ್ನ ಬೆಂಗಳೂರು ಮಹಾನಗರ ಪಾಲಿಕೆ( BBMP) ಯೂ ಎಚ್ಚೆತ್ತುಕೊಂಡಿದೆ.
ಬೆಂಗಳೂರಿನ ಯಾವುದೇ ಭಾಗದಲ್ಲಿ ಮಳೆ/ ಗಾಳಿಯಿಂದ ಮರ ಬಿದ್ದಿದ್ದರೆ ಇಲ್ಲವೇ ಮಳೆ ಬರುವ ಸನ್ನಿವೇಶ ಇದ್ದರೆ ಸಂಬಂಧಿತ ಪಾಲಿಕೆ ವಲಯ ಕಚೇರಿಗೆ ಕರೆ ಮಾಡಬಹುದು. ಇಲ್ಲವೇ ಮರ ಬಿದ್ದಿರುವ ಮಾಹಿತಿಯನ್ನು ವಾಟ್ಸ್ ಆಪ್ ಮೂಲಕವೂ ಕಳುಹಿಸಬಹುದು.
ಸಂಬಂಧಪಟ್ಟ ವಲಯದ ಅಧಿಕಾರಿಗಳು ತುರ್ತು ನಿಗಾ ತಂಡದೊಂದಿಗೆ ಸಂಪರ್ಕಿಸಿ ಆದಷ್ಟು ಬೇಗನೇ ಅದನ್ನು ತೆಗೆಸಲು ಸಹಕರಿಸಲಿದೆ.
ಇಂತಹ ವಿಷಯದಲ್ಲಿ ಜನರ ಸಹಕಾರವಿಲ್ಲದೇ ಬಿಬಿಎಂಪಿ ಏನನ್ನು ಮಾಡಲು ಆಗದು. ಮಳೆಯಿಂದ ಆಗುವ ಅನಾಹುತ ತಪ್ಪಿಸಲು ನಾವು ಕ್ರಮ ಕೈಗೊಳ್ಳಬಹುದು. ಇದಕ್ಕೆ ಜನರ ಸಹಕಾರವೇ ಅತ್ಯಗತ್ಯ. ನಿಮ್ಮ ಭಾಗದಲ್ಲಿರುವ ಅಪಾಯಕಾರಿ ಮರಗಳ ನಿಖರ ಮಾಹಿತಿಯನ್ನು ಸೂಕ್ತ ಮಾಹಿತಿ ಹಾಗೂ ವಿಳಾಸದೊಂದಿಗೆ ಕಳುಹಿಸಿಕೊಡಬೇಕು ಎಂಬುದು ಬಿಬಿಎಂಪಿ ಮನವಿ.
ಕಳೆದ ಒಂದು ವಾರದಲ್ಲಿಯೇ ಸುರಿದಿರುವ ಮಳೆಯಿಂದ ಬೆಂಗಳೂರಿನಲ್ಲಿ ಅಂದಾಜು 200 ಮರಗಳು ಬಿದ್ದಿರುವ ಮಾಹಿತಿಯಿದೆ. ಸಣ್ಣಪುಟ್ಟ ಸಮಸ್ಯೆಯಾಗಿರುವುದು ಬಿಟ್ಟರೆ ಭಾರೀ ಅನಾಹುತವೇನೂ ಆಗಿಲ್ಲ. ಕೆಲವು ಕಡೆ ಕಾರು ಇಲ್ಲವೇ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಸಂಚಾರ ಅಡಚಣೆಯಾಗಿದ್ದು ಅದನ್ನೂ ಸರಿಪಡಿಸಲಾಗಿದೆ ಎನ್ನುವುದು ಬಿಬಿಎಂಪಿ ವಿವರಣೆ.
ಜೂನ್ ನಲ್ಲಿ ಮುಂಗಾರು ಆರಂಭಗೊಂಡು ನಾಲ್ಕೈದು ತಿಂಗಳು ಮಳೆ ಇರಲಿದೆ. ಈ ಕಾರಣದಿಂದಲೇ ಈ ಅವಧಿಯಲ್ಲಿ ಅಡಚಣೆ ಆಗುವುದನ್ನು ತಡೆಯಲು ಬೆಂಗಳೂರಿನಲ್ಲಿ ಮಾಹಿತಿ ಜಾಲ ಬಲಪಡಿಸಲಾಗುತ್ತಿದೆ. ಜನ ಸಹಕಾರ ನೀಡಬೇಕು ಎಂದು ಕೋರಲಾಗಿದೆ.
ಕರೆ ಮಾಡಬೇಕಾದ ಸಂಖ್ಯೆಗಳು
ಬೆಂಗಳೂರು ಪೂರ್ವ 9380090027
ಬೆಂಗಳೂರು ಪಶ್ಚಿಮ 9449659252
ಬೆಂಗಳೂರು ದಕ್ಷಿಣ 9480685039
ಬೊಮ್ಮೇನಹಳ್ಳಿ 9580685399
ದಾಸರಹಳ್ಳಿ 9164042566
ಆರ್‌ಆರ್‌ನಗರ 7760553545/ 9880516322
ಮಹದೇವಪುರ 8147276414/9480685541
ಯಲಹಂಕ 9164042566/9483139438
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.