ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ; ಏಪ್ರಿಲ್ ತಿಂಗಳಲ್ಲಿ ದಶಕದ ದಾಖಲೆ, ಜನ ಹೈರಾಣ -Bangalore Weather
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ; ಏಪ್ರಿಲ್ ತಿಂಗಳಲ್ಲಿ ದಶಕದ ದಾಖಲೆ, ಜನ ಹೈರಾಣ -Bangalore Weather

ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ; ಏಪ್ರಿಲ್ ತಿಂಗಳಲ್ಲಿ ದಶಕದ ದಾಖಲೆ, ಜನ ಹೈರಾಣ -Bangalore Weather

ಬೆಂಗಳೂರಿನಲ್ಲಿ ರಾತ್ರಿಯ ವೇಳೆ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಏಪ್ರಿಲ್‌ನಲ್ಲಿ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 2.5 ಡಿಗ್ರಿ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ ಏಪ್ರಿಲ್ ತಿಂಗಳಲ್ಲಿ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಿಸಿಗೆ ಜನ ಹೈರಾಣವಾಗಿದ್ದಾರೆ.
ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ ಏಪ್ರಿಲ್ ತಿಂಗಳಲ್ಲಿ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಿಸಿಗೆ ಜನ ಹೈರಾಣವಾಗಿದ್ದಾರೆ. (AFP)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಬಿಸಿಲು ಸಿಟಿಯಾಗಿ ಬದಲಾಗುತ್ತಿದೆ. ಮಳೆಯ ಅಭಾವ ಈ ಬಾರಿಯ ರಣ ಬಿಸಿಲಿಗೆ (Sunlight) ಸಾಕ್ಷಿಯಾಗಿದೆ. ಏಪ್ರಿಲ್‌ನಲ್ಲಿ ಬೆಂಗಳೂರಿನ (Bangalore Weather) ಬಿಸಿಲು ಹಗಲಿನಲ್ಲಿ ಮಾತ್ರವಲ್ಲದೆ, ರಾತ್ರಿಯಲ್ಲೂ ಹೆಚ್ಚಾಗಿದೆ. ನಗರದಲ್ಲಿನ ತಾಪಮಾನ ರಾತ್ರಿ ವೇಳೆ (Bengaluru Night Temperature) ಹೆಚ್ಚಾಗಿದೆ. ಏಪ್ರಿಲ್ 28 ಮತ್ತು 29 ರಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಳೆದ ದಶಕದಲ್ಲಿ ಏಪ್ರಿಲ್ ತಿಂಗಳ ರಾತ್ರಿ ವೇಳೆಯಲ್ಲಿನ ಗರಿಷ್ಠ ತಾಪಮಾನವಾಗಿದೆ ವರದಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾತ್ರಿಯ ಸಮಯದಲ್ಲಿ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಸಾಮಾನ್ಯ ತಾಪಮಾನಕ್ಕಿಂತ 2.5 ಡಿಗ್ರಿ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ ಹಾಗೂ ಮೇ 3 (ಶುಕ್ರವಾರ) ರವರೆಗೆ ರಾತ್ರಿಯ ಸಮಯದಲ್ಲೂ ಬಿಸಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ಆಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಏಪ್ರಿಲ್ 28 ರಂದು ಬೆಂಗಳೂರಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಳೆದ ಐದು ದಶಕಗಳಲ್ಲಿ ಎರಡನೇ ಅತಿ ಹೆಚ್ಚು ತಾಪಮಾನ ಎಂದು ಹೇಳಲಾಗುತ್ತದೆ. 2016 ರ ಏಪ್ರಿಲ್ 25 ರಂದು ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇದು ವೀಕ್ಷಣಾಲಯದಲ್ಲಿ ದಾಖಲಾಗಿರುವ ಇಲ್ಲಿಯವರೆಗೆ ನಗರದ ಅತಿ ಹೆಚ್ಚು ತಾಪಮಾನ ಎಂದು ಹೇಳಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಶೂನ್ಯ ಮಳೆ

ಏಪ್ರಿಲ್‌ ತಿಂಗಳಲ್ಲಿ ಬೆಂಗಳೂರು ರಣ ಬಿಸಿಲಿನ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಜೊತೆಗೆ ನಗರದಲ್ಲಿ 4 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಲ್ಲಿ ನಗರದಲ್ಲಿ ಶೂನ್ಯ ಮಳೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಏಪ್ರಿಲ್ ಅನ್ನು ಅತ್ಯಂತ ಶುಷ್ಕ ಏಪ್ರಿಲ್ ಎಂದು ಗುರುತಿಸಲಾಗಿದೆ. ನಗರದಲ್ಲಿ ಕೊನೆಯ ಬಾರಿಗೆ ಏಪ್ರಿಲ್ ನಲ್ಲಿ ಶೂನ್ಯ ಮಳೆ ದಾಖಲಾಗಿದ್ದು 1983 ರಲ್ಲಿ ಎಂದು ಐಎಂಡಿ ಮಾಹಿತಿ ನೀಡಿದೆ.

ಜಾಗತಿಕ ತಾಪಮಾನ ಏರಿಕೆ, ಜನಸಂಖ್ಯೆಯ ಹೆಚ್ಚಳ, ಮರಗಳನ್ನು ಕಡಿಯುವುದು, ಹಸಿರು ಹೊದಿಕೆ ಕಡಿಮೆಯಾಗುವುದು ಹಾಗೂ ಎಲ್ ನಿನೊ ಐಟಿ ಬಿಟಿ ರಾಜಧಾನಿಯಲ್ಲಿ ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಕಾರಣಗಳಾಗಿವೆ. ಮೇ ಮೊದಲ ವಾರದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಲಘು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಂದು (ಮೇ 2, ಗುರುವಾರ) ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಏಪ್ರಿಲ್ 30 ರಿಂದ ಮೇ 5 ರವರೆಗೆ ರಾಜ್ಯದಾದ್ಯಂತ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ. ರಾಯಚೂರಿನಲ್ಲಿ 43.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮೇ 3 ರವರೆಗೆ ಶಾಖ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಪ್ರಮುಖ ಪರಿಹಾರವಾಗಿ, ಮೇ 6 ರಂದು ಮಳೆ ಕಾಣಿಸಿಕೊಳ್ಳಬಹುದು ಎಂದು ಐಎಂಡಿ ಗಮನಿಸಿದೆ. ಮೇ 6 ರಂದು ಮಂಡ್ಯ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Whats_app_banner