ಕನ್ನಡ ಸುದ್ದಿ  /  ಕರ್ನಾಟಕ  /  Online Game: ಆನ್‌ ಲೈನ್‌ ಗೇಮ್‌ ಹುಚ್ಚಾಟಕ್ಕೆ ಬಲಿಯಾಗಿ ಜೀವ ಕಳೆದುಕೊಂಡ ಬೆಂಗಳೂರು ಕಾಲೇಜು ವಿದ್ಯಾರ್ಥಿನಿ

Online Game: ಆನ್‌ ಲೈನ್‌ ಗೇಮ್‌ ಹುಚ್ಚಾಟಕ್ಕೆ ಬಲಿಯಾಗಿ ಜೀವ ಕಳೆದುಕೊಂಡ ಬೆಂಗಳೂರು ಕಾಲೇಜು ವಿದ್ಯಾರ್ಥಿನಿ

Bangalore News ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೋಲಾರ ಮೂಲದ ವಿದ್ಯಾರ್ಥಿನಿ ಆನ್‌ಲೈನ್‌ ಗೇಮ್‌ ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆವರದಿ: ಎಚ್.ಮಾರುತಿ. ಬೆಂಗಳೂರು

ಆನ್‌ ಲೈನ್‌ ಗೇಮ್‌ ಹುಚ್ಚಿಗೆ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಬಲಿಯಾಗಿದ್ದಾಳೆ
ಆನ್‌ ಲೈನ್‌ ಗೇಮ್‌ ಹುಚ್ಚಿಗೆ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಬಲಿಯಾಗಿದ್ದಾಳೆ

ಬೆಂಗಳೂರು: ಆನ್‌ ಲೈನ್‌ ಗೇಮ್‌ ಗಳ ( Online games) ಹುಚ್ಚು ತರುವ ಅವಾಂತರಗಳು ಒಂದೆರಡಲ್ಲ. ಕೇವಲ ಸಮಯ ಮಾತ್ರ ವ್ಯರ್ಥ ಮಾಡುವುದಿಲ್ಲ, ಹಣ ಮತ್ತು ಜೀವಕ್ಕೂ ಕುತ್ತು ತರುತ್ತಲೇ ಇವೆ. ಶಾಲಾ ಕಾಳೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ, ಗೃಹಿಣಿಯರು, ಉದ್ಯಮಿಗಳೂ ಹಣ ಮತ್ತು ಜೀವವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಆದರೂ ಎಚ್ಚೆತ್ತುಕೊಳ್ಳುವುದಕ್ಕೆ ಬದಲಾಗಿ ಈ ವಂಚನೆಯ ಬಲೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ತಂಗಿದ್ದ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದ 19 ವರ್ಷದ ವಿದ್ಯಾರ್ಥಿನಿ ಪಾವನಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪೊಲೀಸರು ಅಸಹಜ ಸಾವು ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾವನಾ ಆನ್‌ ಗೇಮ್‌ ಚಟವನ್ನು ಹತ್ತಿಸಿಕೊಂಡಿದ್ದರು. ಓದಿಗಿಂತ ಹೆಚ್ಚಿನ ಸಮಯವನ್ನು ಆನ್‌ ಗೇಮ್‌ ಆಡುವುದರಲ್ಲೇ ಕಳೆಯುತ್ತಿದ್ದರು ಪೋಷಕರು ನೀಡಿದ್ದ ಕಾಲೇಜು ಶುಲ್ಕವನ್ನು ಆನ್‌ ಲೈನ್‌ ಗೇಮ್‌ ಜೂಜಾಟದಲ್ಲಿ ಕಳೆದುಕೊಂಡಿದ್ದರು. ಕಾಲೇಜು ಶುಲ್ಕವನ್ನು ಹೊಂದಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರುಶಂಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದಲ್ಲಿ ಪಾವನಾ ಮೊದಲ ವರ್ಷದ ಬಿಎಸ್‌ ಸಿ ವ್ಯಾಸಂಗ ಮಾಡುತ್ತಿದ್ದಾರೆ. ಮೂರು ದಿನಗಳ ಸತತ ರಜೆ ಇದ್ದ ಕಾರಣ ಸಹಪಾಠಿಗಳೆಲ್ಲಾಊರುಗಳಿಗೆ ತೆರಳಿದ್ದರು. ಹಾಸ್ಟೆಲ್‌ ನಲ್ಲಿ ಪಾವನಾ ಒಬ್ಬರೇ ಉಳಿದುಕೊಂಡಿದ್ದರು. ಅಗ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪಾವನಾ ಇದ್ದ ಕೊಠಡಿಯಲ್ಲಿ

ಡೆತ್‌ ನೋಟ್‌ ಪತ್ತೆಯಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷದೆ ನಡೆಸಿ ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ.

ಕಾಲೇಜು ಶುಲ್ಕ ಪಾವತಿಸಲು ಪೋಷಕರು 15 ಸಾವಿರ ರೂಪಾಯಿ ನೀಡಿದ್ದರು. ಆದರೆ ಪಾವನಾ ಈ ಹಣವನ್ನು ಆನ್‌ಲೈನ್‌ ಗೇಮ್‌ ಆಡಲು ಬಳಸಿಕೊಂಡಿದ್ದರು. ಕೊನೆಗೆ ಕಾಲೇಜು ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗಿದೆ.

ಆನ್‌ಲೈನ್‌ ಚಟುವಟಿಕೆಯಲ್ಲಿ ಭಾಗಿಯಾಗಿ ಹಣ ಕಳೆದುಕೊಂಡಿರುವುದು ಆನಂತರ ಮನೆಯವರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ವಿಚಾರಣೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಮಾಹಿತಿ ಹಂಚುತ್ತಿದ್ದ ಯೂಟ್ಯೂಬರ್‌ ವಿರುದ್ದ ಬೆಸ್ಕಾಂ ದೂರು

ರಾಜ್ಯ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಯೂಟ್ಯೂಬ್‌ ನಲ್ಲಿ ಸುಳ್ಳಿ ಮಾಹಿತಿ ಹರಡುತ್ತಿದ್ದ ಯೂಟ್ಯೂಬರ್‌ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಬೆಸ್ಕಾಂ ದೂರು ದಾಖಲಿಸಿದೆ. ಯೂ ಟ್ಯೂಬರ್‌ ಶೋಭಾ ಪ್ರಭಾಕರ್‌ ಎಂಬುವರ ವಿರುದ್ಧ ಬೆಸ್ಕಾಂ ದೂರು ಸಲ್ಲಿಸಿದೆ. ಶೋಭಾ ಪ್ರೈಮ್‌ ಟ್ಯೂಬ್‌ ಎಂಬ ಯೂ ಟ್ಯೂಬ್‌ ಚಾನೆಲ್‌ ಹೆಸರಿನಲ್ಲಿ ಇಂಧನ ಇಲಾಖೆಗೆ ಸಂಬಂಧಿಸದಂತೆ ಸುಮಾರು 5 ನಿಮಿಷಗಳ ಕಾಲ ಅಪಪ್ರಚಾರ ಮಾಡಿದ್ದಾರೆ.

ರೈತರು ತಮ್ಮ ಜಮೀನನಲ್ಲಿ ವಿದ್ಯುತ ಕಂಬ ಅಥವಾ ಟ್ರಾನ್ಸ್‌ ಫಾರ್ಮರ್‌ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ ರೂ.50 ಪರಿಹಾರ ನೀಡಲಿದೆ. ಗೃಬಳಕೆದಾರರು

ಪ್ರತಿನಿತ್ಯ 2000 ದಿಂದ 5000 ಯೂನಿಟ್ ವಿದ್ಯುತ್‌ ಬಳಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಸರ್ಕಾರ 5000 ರೂ. ಸಹಾಯಧನ ನೀಡುತ್ತದೆ ಎಂದು ಯೂಟ್ಯೂಬ್‌ ನಲ್ಲಿ ಎಂದು ಸುಳ್ಳು ಹರಡುತ್ತಿದ್ದರು. ಯೂಟ್ಯೂಬ್‌ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ನಿಜ ಎಂದು ನಂಬುವ ಪರಿಸ್ಥಿತಿ ಉಂಟಾಗಿತ್ತು. ಸಾರ್ವಜನಿಕರು ಇಂತಹ ಕಪೋಲಕಲ್ಪಿತ ಸುದ್ದಿಗಳನ್ನು ನಂಬಬಾರದು ಎಂದು ಬೆಸ್ಕಾಂ ತಿಳಿಸಿದೆ.

ವರದಿ: ಎಚ್.ಮಾರುತಿ, ಬೆಂಗಳೂರು