Bangalore News: ಡೈವೋರ್ಸ್ ಕೇಳಿದ್ದ ಪತ್ನಿಯನ್ನು ಕಾಲ್ ಗರ್ಲ್ ಎಂದು ಬಿಂಬಿಸಿದ್ದವನ ವಿರುದ್ದ ಬೆಂಗಳೂರಲ್ಲಿ ದೂರು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಡೈವೋರ್ಸ್ ಕೇಳಿದ್ದ ಪತ್ನಿಯನ್ನು ಕಾಲ್ ಗರ್ಲ್ ಎಂದು ಬಿಂಬಿಸಿದ್ದವನ ವಿರುದ್ದ ಬೆಂಗಳೂರಲ್ಲಿ ದೂರು

Bangalore News: ಡೈವೋರ್ಸ್ ಕೇಳಿದ್ದ ಪತ್ನಿಯನ್ನು ಕಾಲ್ ಗರ್ಲ್ ಎಂದು ಬಿಂಬಿಸಿದ್ದವನ ವಿರುದ್ದ ಬೆಂಗಳೂರಲ್ಲಿ ದೂರು

Crime News ಬೆಂಗಳೂರಿನಲ್ಲಿ ಪತ್ನಿಯ ವಿರುದ್ದವೇ ಹೀನಾಯವಾಗಿ ಪೋಸ್ಟ್‌ ಮಾಡಿದ್ದ ಪತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಪತ್ನಿಯನ್ನು ಕಾಲ್‌ ಗರ್ಲ್‌ ಎಂದು ಬಿಂಬಿಸಿ ಪೋಸ್ಟ್‌ ಮಾಡಿದ ವ್ಯಕ್ತಿ ವಿರುದ್ದ ಪ್ರಕರಣ ದಾಖಲಸಿಕೊಳ್ಳಲಾಗಿದೆ.
ಪತ್ನಿಯನ್ನು ಕಾಲ್‌ ಗರ್ಲ್‌ ಎಂದು ಬಿಂಬಿಸಿ ಪೋಸ್ಟ್‌ ಮಾಡಿದ ವ್ಯಕ್ತಿ ವಿರುದ್ದ ಪ್ರಕರಣ ದಾಖಲಸಿಕೊಳ್ಳಲಾಗಿದೆ.

ಬೆಂಗಳೂರು: ವಿಚ್ಛೇದನ ಪಡೆಯಲು ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೋ ಮತ್ತು ಮೊಬೈಲ್‌ ನಂಬರನ್ನುಪೋಸ್ಟ್ ಮಾಡಿ ಕಾಲ್ ಗರ್ಲ್ ಬೇಕೇ ? ಕರೆ ಮಾಡಿ ಎಂದು ಪೋಸ್ಟ್‌ ಹಾಕಿ ಪತಿರಾಯ ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಪತ್ನಿ ದೂರು ನೀಡಿದ್ದಾರೆ. ಇದೊಂದು ವೈಯಕ್ತಿಕ ವಿಚಾರವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಇವರು 2019ರಲ್ಲಿ ವಿವಾಹವಾಗಿದ್ದಾರೆ. ಒಂದು ವರ್ಷದ ಹಿಂದೆ ಬೇರೆ ಬೇರೆ ವಾಸಿಸುತ್ತಿದ್ದಾರೆ. ದಾಂಪತ್ಯ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎಂದು ಪೊಲೀಸ್‌ ವಿಚಾರಣೆ ವೇಳೆ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ ಸತ್ಯನಾರಾಯಣ ರೆಡ್ಡಿ ಕಲಾಶಶಿ ಎಂಬ ಹೆಸರಿನಲ್ಲಿ ಪತ್ನಿಯ ಫೋಟೊ ಮತ್ತು ಮೊಬೈಲ್ ನಂಬರ್ ನಮೂದಿಸಿ ಕಾಲ್‌ಗರ್ಲ್ ಬೇಕಾದರೆ ಸಂಪರ್ಕಿಸಿ ಎಂದು ಪತ್ನಿ, ಆಕೆಯ ಸಹೋದರಿ ಹಾಗೂ ಸಹೋದರನ ನಂಬರ್ ನಮೂದಿಸಿದ್ದ. ಈ ನಂಬರ್ ಗಳಿಗೆ ಅನೇಕ ಕರೆಗಳು ಬರಲಾರಂಭಿಸಿದ್ದವು. ಈ ಕಿರುಕುಳದಿಂದ ಬೇಸತ್ತ ಆಕೆ ದೂರು ನೀಡಿದ್ದರು. ಆಕೆಯ ಪತಿ ವಿದೇಶಕ್ಕೆ ಪರಾರಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ನನ್ನ ಸಹೋದರಿಯನ್ನು ವಿವಾಹವಾಗಿದ್ದ ವ್ಯಕ್ತಿ ವೈಯಕ್ತಿಕ ಕಾರಣಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದ್ದಾಗಿ ಪೋಸ್ಟ್‌ ಮಾಡಿದ್ದಾನೆ. ಈ ಸಂಬಂಧ ದೂರು ನೀಡಿದ್ದೇವೆ. ಪೊಲೀಸರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಆಕೆಯ ಸಹೋದರ ತಿಳಿಸಿದ್ದಾರೆ.

ಸೈಬರ್‌ ಕಾಯಿದೆ ಪ್ರಕಾರ ಯಾರ ವಿರುದ್ದವೂ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡುವಂತಿಲ್ಲ. ಅದು ಪತಿ, ಪತ್ನಿ, ಕುಟುಂಬದವರೇ ಆಗಿರಬಹುದು. ಸ್ನೇಹಿತರೇ ಇರಬಹುದು. ಖಾಸಗಿ ವಿಚಾರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದಾಗ ಅದು ಮತ್ತೊಬ್ಬರಿಗೆ ನೋವು, ಖಾಸಗಿತನಕ್ಕೆ ಧಕ್ಕೆ ಆಗಿದೆ ಎಂದಾಗ ಅಪರಾಧವಾಗುತ್ತದೆ. ದೂರು ಬಂದಾಗ ಸೈಬರ್‌ ಅಪರಾಧದಡಿಯೇ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಇದೇ ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಪಿಐ ಕ್ಯೂಆರ್‌ ಕೋಡ್ ಹೆಸರಿನಲ್ಲಿ ಹೋಟೆಲ್ ಮಾಲೀಕರಿಗೆ ವಂಚನೆ

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಕ್ಯೂಆರ್‌ ಕೋಡ್ ಅಪ್‌ಡೇಟ್‌ ಹೆಸರಿನಲ್ಲಿ ಬೆಂಗಳೂರಿನ ಹೋಟೆಲ್‌ವೊಂದರ ಮಾಲೀಕನಿಗೆ ಅಪರಿಚಿತನೊಬ್ಬ ವಂಚಿಸಿದ್ದಾನೆ.

ಈ ಸಂಬಂಧ ಕಲ್ಯಾಣನಗರದ ಹೋಟೆಲ್ ಮಾಲೀಕರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪೋಲಿಸರು ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಹೋಟೆಲ್‌ಗೆ ಆಗಮಿಸಿದ್ದ ಆರೋಪಿ ತಾನು ಕಂಪನಿಯೊಂದರ ಪ್ರತಿನಿಧಿ ಎಂದು ಹೇಳಿಕೊಂಡಿದ್ದ. ಯುಪಿಐ ಕ್ಯೂಆರ್‌ ಕೋಡ್ ಅವಧಿ ಮುಗಿದಿದ್ದು, ಅಪ್‌ಡೇಟ್‌ ಮಾಡಿಕೊಳ್ಳಲು ಹೋಟೆಲ್ ಮಾಲೀಕರ ಮೊಬೈಲ್ ಪಡೆದುಕೊಂಡಿದ್ದ. ಈತನ ಮಾತನ್ನು ನಂಬಿದ್ದ ಹೋಟೆಲ್ ಮಾಲೀಕ ಮೊಬೈಲ್ ಕೊಟ್ಟಿದ್ದ. ನಂತರ ಆರೋಪಿ ಯುಪಿಐ ಮೂಲಕ ತನ್ನ ಖಾತೆಗೆ 1 ರೂ. ವರ್ಗಾವಣೆ ಮಾಡಿಕೊಂಡಿದ್ದ. ನಂತರ ಮೊಬೈಲ್ ಮರಳಿಸಿ ಹೊರಟು ಹೋಗಿದ್ದ.

ಕೆಲವು ನಿಮಿಷಗಳ ನಂತರ ಹೋಟೆಲ್ ಮಾಲೀಕರ ಎರಡು ಬ್ಯಾಂಕ್‌ ಖಾತೆಗಳಲ್ಲಿದ್ದ 48 ಸಾವಿರ ರೂಪಾಯಿ ಕಡಿತವಾಗಿತ್ತು. ಆರೋಪಿಯು ಯುಪಿಐ ಕ್ಯೂಆರ್‌ ಕೋಡ್ ಹೆಸರಿನಲ್ಲಿ ಮೋಸ ಮಾಡಿರುವುದು ಖಚಿತವಾಗಿದೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

Whats_app_banner