Bangalore Rain: ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆ ಬಿದ್ದದ್ದು ಯಾವ ಬಡಾವಣೆಗಳಲ್ಲಿ
Summer Shower ಬೆಂಗಳೂರು ನಗರದಲ್ಲಿ ಐದು ತಿಂಗಳ ಬಳಿಕ ಸುರಿದ ಮಳೆಗೆ ಜನ ಖುಷಿಯಾಗಿದ್ದಾರೆ. ಯಾವ ಬಡಾವಣೆಯಲ್ಲಿ ಮಳೆಯಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ಸಂಜೆಯಿಂದ ಸುಮಾರು ಮೂರು ಗಂಟೆ ಕಾಲ ಮಳೆಯಾಗಿದೆ.ಕೆಲವು ಕಡೆ ಅರ್ಧ ಗಂಟೆ, ಮತ್ತೆ ಕೆಲವು ಭಾಗದಲ್ಲಿ ಒಂದು ಗಂಟೆ ಕಾಲ ಮಳೆ ಸುರಿದಿದೆ.ಸಂಜೆಯಿಂದಲೇ ಮೋಡ ಕವಿದ ವಾತಾವರಣವಿದ್ದು. ಆನಂತರ ಗಾಳಿಯೂ ಜೋರಾಗಿ ಕಾಣಿಸಿಕೊಂಡಿತು. ರಾತ್ರಿ 9ರವರೆಗೂ ಮಳೆ ಬರುತ್ತಲೇ ಇತ್ತು. ಇನ್ನು ಕೆಲವು ಕಡೆ ರಾತ್ರಿಯೂ ಮಳೆ ಬಂದಿದೆ. ಆದರೆ ಎಲ್ಲಿಯೂ ಅನಾಹುತವಾದ, ನೀರು ನಿಂತುಕೊಂಡ ವರದಿಯಾಗಿಲ್ಲ. ಬದಲಿಗೆ ಮಳೆಯಿಂದ ಜನ ಖುಷಿ ಪಟ್ಟ ಸನ್ನಿವೇಶ ಕಂಡು ಬಂದಿದೆ. ಸತತವಾಗಿ ಮಳೆಯೇ ಬಾರದೇ ಇದ್ದುದರಿಂದ ಬಿಸಿಲ ಬೇಗೆಗೆ ಜನ ಬಳಲಿ ಹೋಗಿದ್ದರು. ಬೆಂಗಳೂರಿನ ಬಹುತೇಕ ಎಲ್ಲಾ ಭಾಗಗಳಲ್ಲಿ ಮಳೆಯಾಗಿರುವ ಮಾಹಿತಿಯಂತೂ ಲಭಿಸಿದೆ. ಪದ್ಮನಾಭ ನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ರಾಮಮೂರ್ತಿ ನಗರ, ಮಡಿವಾಳ, ವಸಂತನಗರ ಸಹಿತ ಕೆಲವು ಕಡೆ ಉತ್ತಮ ಮಳೆಯಾಗಿದೆ.
ಮಳೆಯಾಗಿರುವ ಕುರಿತು ನಮ್ಮ ಕರ್ನಾಟಕ ವೆದರ್ ಹ್ಯಾಂಡಲ್ ಮೂಲಕ ಬೆಂಗಳೂರಿನಲ್ಲಿ ಮಳೆಯಾಗಿರುವ ಪ್ರದೇಶದ ವಿವರವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಹಲವರು ತಮ್ಮ ಬಡಾವಣೆಯಲ್ಲಿ ಮಳೆಯಾಗಿರುವ ಮಾಹಿತಿ ನೀಡಿದ್ದಾರೆ. ಇನ್ನು ಕೆಲವರು ಮಳೆಯ ಚಿತ್ರ, ವಿಡಿಯೋಗಳನ್ನೂ ಕೂಡ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಹುದಿನಗಳ ನಂತರ ಮಳೆಯಾಗಿರುವುದಕ್ಕೆ ಹಲವರು ಸಂತಸವನ್ನಂತೂ ವ್ಯಕ್ತಪಡಿಸಿದ್ದಾರೆ.
ಉತ್ತಮ ಮಳೆಯಾದ ಪ್ರದೇಶ
- ಪದ್ಮನಾಭನಗರ
- ವಸಂತ ನಗರ
ಸಾಧಾರಣ ಮಳೆ ಬಿದ್ದ ಪ್ರದೇಶ
- ಕಂಟೋನ್ಮೆಂಟ್ ಪ್ರದೇಶ
- ಕುಮಾರಸ್ವಾಮಿ ಲೇಔಟ್
- ಅಂಜನಾಪುರ
- ನಾಯಂಡಹಳ್ಳಿ
ಲಘುವಾಗಿ ಮಳೆ ಬಿದ್ದ ಪ್ರದೇಶ
- ದೊಮ್ಮಲೂರು
- ಇಂದಿರಾನಗರ
- ಶಿವಾಜಿನಗರ
- ಹಲಸೂರು
- ಕೃಷ್ಣರಾಜಪುರಂ
- ವೈಟ್‌ಫೀಲ್ಡ್
- ಕಲ್ಯಾಣ್ ನಗರ
- ಪೀಣ್ಯ
- ವಿದ್ಯಾರಣ್ಯಪುರ
- ಬೊಮ್ಮಸಂದ್ರ
- ಎಲೆಕ್ಟ್ರಾನಿಕ್ ಸಿಟಿ
- HSR ಲೇಔಟ್
- ಕೋರಮಂಗಲ
- ಬನಶಂಕರಿ
- ಬಸವನಗುಡಿ
- ಜೆ.ಪಿ.ನಗರ
- ಜಯನಗರ
- ಉತ್ತರಹಳ್ಳಿ
- ಅರೆಕೆರೆ
- ಬೇಗೂರ್
- ಗೊಟ್ಟಿಗೆರೆ
- ಹುಳಿಮಾವು
- ಕೊತ್ನೂರು
- ವಿಜಯನಗರ
ಮಳೆ ಕಡಿಮೆ
- ಮಲ್ಲೇಶ್ವರಂ
- ಸದಾಶಿವನಗರ
- ಶೇಷಾದ್ರಿಪುರಂ
- ಕೆಂಗೇರಿ
- ರಾಜರಾಜೇಶ್ವರಿ ನಗರ
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
