Rajya Sabha Elections 2024: ಸುರಕ್ಷಿತವಾಗಿ ಗೆದ್ದ ಕಾಂಗ್ರೆಸ್‌, ಬಿಜೆಪಿಗೆ ಏಟು, 2ನೇ ಬಾರಿ ಸೋತ ಕುಪೇಂದ್ರ ರೆಡ್ಡಿ-bangalore news rajya sabha elections 2024 congress safe trouble in bjp jds supported kupendra reddy lost 2nd time kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Rajya Sabha Elections 2024: ಸುರಕ್ಷಿತವಾಗಿ ಗೆದ್ದ ಕಾಂಗ್ರೆಸ್‌, ಬಿಜೆಪಿಗೆ ಏಟು, 2ನೇ ಬಾರಿ ಸೋತ ಕುಪೇಂದ್ರ ರೆಡ್ಡಿ

Rajya Sabha Elections 2024: ಸುರಕ್ಷಿತವಾಗಿ ಗೆದ್ದ ಕಾಂಗ್ರೆಸ್‌, ಬಿಜೆಪಿಗೆ ಏಟು, 2ನೇ ಬಾರಿ ಸೋತ ಕುಪೇಂದ್ರ ರೆಡ್ಡಿ

Karnataka Politics ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತಂತ್ರ ಫಲಿಸಿದೆ. ಬಿಜೆಪಿ ಜೆಡಿಎಸ್‌ಗೆ ಹಿನ್ನಡೆಯಾಗಿದ್ದು, ಬಿಜೆಪಿ ಇಬ್ಬರು ಸದಸ್ಯರು ಕೈಕೊಟ್ಟರೆ, ಸಮ್ಮಿಶ್ರ ಅಭ್ಯರ್ಥಿ ಸೋತಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಗೆದ್ದ ಕಾಂಗ್ರೆಸ್‌ ಮೂರು, ಬಿಜೆಪಿ ಒಬ್ಬ ಅಭ್ಯರ್ಥಿ. ಮೈತ್ರಿ ಅಭ್ಯರ್ಥಿಗೆ ಸೋಲು
ರಾಜ್ಯಸಭೆ ಚುನಾವಣೆಗೆ ಗೆದ್ದ ಕಾಂಗ್ರೆಸ್‌ ಮೂರು, ಬಿಜೆಪಿ ಒಬ್ಬ ಅಭ್ಯರ್ಥಿ. ಮೈತ್ರಿ ಅಭ್ಯರ್ಥಿಗೆ ಸೋಲು

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದ್ದು. ಕಾಂಗ್ರೆಸ್‌ ಗೆದ್ದಿದೆ. ಸುರಕ್ಷಿತ ಆಟವಾಡಿದ ಬಿಜೆಪಿ ಕೂಡ ಗೆದ್ದಿದೆ. ಆದರೆ ಸಮ್ಮಿಶ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಕುಪೇಂದ್ರ ರೆಡ್ಡಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿಗಳಾದ ಕೇಂದ್ರದ ಮಾಜಿ ಸಚಿವ ಅಜಯ್‌ ಮಕಾನ್‌, ಹಾಲಿ ಸದಸ್ಯರಾಗಿರುವ ಜಿ.ಸಿ.ಚಂದ್ರಶೇಖರ್‌ ಹಾಗೂ ಸೈಯದ್‌ ನಾಸಿರ್‌ ಹುಸೇನ್‌ ಸುರಕ್ಷಿತ ಗೆಲುವು ದಾಖಲಿಸಿದ್ಧಾರೆ. ಬಿಜೆಪಿಯಿಂದ ಕಣಕ್ಕಿಳಿಸಿದ್ದ ಬಾಗಲಕೋಟೆ ಮೂಲದವರಾದ ವಿಧಾನಪರಿಷತ್‌ ಮಾಜಿ ಸದಸ್ಯ ನಾರಾಯಣ ಭಾಂಡಗೆ ಕೂಡ ಗೆದ್ದಿದ್ದಾರೆ.

ಒಟ್ಟು 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ ನಿಧನದಿಂದ ಸದಸ್ಯ ಸಂಖ್ಯೆ 223ಕ್ಕೆ ಇಳಿದಿದೆ. ಇದರಲ್ಲಿ ಒಟ್ಟು 222 ಸದಸ್ಯರು ಮತ ಹಾಕಿದ್ದರು. ಬಿಜೆಪಿಯ ಶಾಸಕ ಶಿವರಾಂ ಹೆಬ್ಬಾರ್‌ ಗೈರು ಹಾಜರಾಗಿದ್ದರು.

ಅಜಯ್‌ ಮಾಕನ್‌, ನಾಸೀರ್‌ ಹುಸೇನ್‌ ಮತ್ತು ನಾರಾಯಣ ಸಾ ಭಾಂಡಗೆ ತಲಾ 47 ಮತಗಳನ್ನು ಪಡೆದರೆ, ಜಿ.ಸಿ. ಚಂದ್ರಶೇಖರ್‌ ಅವರಿಗೆ 45 ಮತ ಲಭಿಸಿವೆ. ಪಕ್ಷೇತರ ಸದಸ್ಯ ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆದು ಸೋತಿದ್ದಾರೆ. ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದ ಕುಪೇಂದ್ರ ರೆಡ್ಡಿ ಕಳೆದ ಬಾರಿ ಇದೇ ರೀತಿ ಸೋತಿದ್ದರು. ಆಗಲೂ ಅವರನ್ನು ಜೆಡಿಎಸ್‌ ಬೆಂಬಲಿಸಿತ್ತು. ಪಕ್ಷೇತರರಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ( ಗಂಗಾವತಿ) ಕೂಡ ಕಾಂಗ್ರೆಸ್‌ ಅನ್ನೇ ಬೆಂಬಲಿಸಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ( ಮೇಲುಕೋಟೆ) ಕೂಡ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಪಕ್ಷೇತರರಾದ ಲತಾ ಮಲ್ಲಿಕಾರ್ಜುನ( ಹರಪನಹಳ್ಳಿ), ಕೆ.ಎಚ್‌. ಪುಟ್ಟಸ್ವಾಮಿ ಗೌಡ( ಗೌರಿಬಿದನೂರು) ಅವರ ಮತವೂ ಕಾಂಗ್ರೆಸ್‌ಗೆ ಬಂದಿದೆ.

ಕಾಂಗ್ರೆಸ್‌ ಬಿಜೆಪಿ ಸುರಕ್ಷಿತ ಆಟ

ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸುರಕ್ಷಿತ ಆಟವಾಡಿರುವುದು ಮತಗಳ ಲೆಕ್ಕದಿಂದಲೇ ತಿಳಿಯುತ್ತದೆ. ಕಾಂಗ್ರೆಸ್‌ ಹೈಕಮಾಂಡ್‌ ನ ಅಭ್ಯರ್ಥಿಗಳಾದ ಅಜಯ್‌ ಮಕಾನ್‌ ಹಾಗೂ ನಾಸಿರ್‌ ಹುಸೇನ್‌ ಅವರಿಗೆ ತಲಾ 47 ಮತ ಲಭಿಸಿದೆ. ಅದೇ ರೀತಿಯ ಬಿಜೆಪಿ ಅಭ್ಯರ್ಥಿಗೂ 47 ಮತಗಳನ್ನೇ ನಿಗದಿಪಡಿಸಿ ಎರಡು ಹೆಚ್ಚುವರಿ ಮತ ಹಾಕಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಅಜಯ್‌ ಹರಿಯಾಣ ರಾಜ್ಯದಿಂದ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಕಾರಣದಿಂದ ಮುತುವರ್ತಿ ವಹಿಸುವಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಸೂಚಿಸಲಾಗಿತ್ತು.

ಜೆಡಿಎಸ್‌ನಲ್ಲಿ ಇಲ್ಲ ಅಡ್ಡ ಮತದಾನ

ಜೆಡಿಎಸ್‌ನಲ್ಲಿ ಇಬ್ಬರು ಶಾಸಕರು ಅಡ್ಡಮತದಾನ ಮಾಡುವ ಗುಮಾನಿ ಇತ್ತು. ಶರಣಗೌಡ ಕಂದಕೂರ( ಗುರುಮಿಠ್ಕಲ್‌), ಕರೆಮ್ಮ ನಾಯಕ(ದೇವದುರ್ಗ) ಇಬ್ಬರು ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಿರುವುದು ಪಕ್ಕಾ ಆಗಿದೆ. ಆದರೆ ಅಭ್ಯರ್ಥಿ ಗೆಲ್ಲಲು ಆಗಲಿಲ್ಲ. ಎರಡನೇ ಬಾರಿಗೆ ಕುಪೇಂದ್ರ ರೆಡ್ಡಿಗೆ ಸೋಲಾಯಿತು.

ಬಿಜೆಪಿಯಲ್ಲೇ ಸರಿಯಲ್ಲ

ಕರ್ನಾಟಕ ಬಿಜೆಪಿ ಎಲ್ಲವೂ ಇನ್ನೂ ಸರಿ ಹೋಗಿಲ್ಲ ಎನ್ನುವುದನ್ನು ಈ ಚುನಾವಣೆ ತೋರಿಸಿದೆ. ಒಬ್ಬಶಾಸಕ ಎಸ್.ಟಿ.ಸೋಮಶೇಖರ್(‌ ಯಶವಂತಪುರ) ಅವರು ಕಾಂಗ್ರೆಸ್‌ಗೆ ಮತ ಹಾಕಿದ್ದರೆ, ಮತ್ತೊಬ್ಬ ಶಾಸಕ ಅರಬೈಲ್‌ ಶಿವರಾಂ ಹೆಬ್ಬಾರ್(‌ ಯಲ್ಲಾಪುರ) ಗೈರು ಹಾಜರಾಗಿದ್ದಾರೆ. ಅಭ್ಯರ್ಥಿ ಸುರಕ್ಷಿತವಾಗಿ ಗೆದ್ದರೂ ಮತ ಆಚೀಚೆ ಹೋಗಿರುವುದು ಬಿಜೆಪಿಗೆ ಬಿಸಿ ಮುಟ್ಟಿಸಿದೆ.

mysore-dasara_Entry_Point