Bangalore News: 5 ವರ್ಷಗಳಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆಯಲ್ಲಿ ಶೇ. 57ರಷ್ಟು ಏರಿಕೆ, ಮಧ್ಯಮವರ್ಗದವರಿಗೆ ಶಾಕ್
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: 5 ವರ್ಷಗಳಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆಯಲ್ಲಿ ಶೇ. 57ರಷ್ಟು ಏರಿಕೆ, ಮಧ್ಯಮವರ್ಗದವರಿಗೆ ಶಾಕ್

Bangalore News: 5 ವರ್ಷಗಳಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆಯಲ್ಲಿ ಶೇ. 57ರಷ್ಟು ಏರಿಕೆ, ಮಧ್ಯಮವರ್ಗದವರಿಗೆ ಶಾಕ್

ದೇಶದ ಸಿಲಿಕಾನ್ ವ್ಯಾಲಿ, ಐಟಿ-ಬಿಟಿ ಸಿಟಿ ಎಂದೇ ಖ್ಯಾತಿ ಪಡೆದಿರುವ ಉದ್ಯಾನನಗರಿ ಬೆಂಗಳೂರು ಕಾಸ್ಟ್ಲಿಯೆಸ್ಟ್ ಸಿಟಿಯಾಗುವತ್ತ ದಾಪುಗಾಲು ಇಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ನಗರದ ವಸತಿ ಕಟ್ಟಡಗಳ ಸರಾಸರಿ ಬೆಲೆ ಶೇ. 57ರಷ್ಟು ಏರಿಕೆ ಕಂಡಿದೆ ಎಂದು ವರದಿಯೊಂದು ಉಲ್ಲೇಖಿಸಿದೆ.ವರದಿ: ಪ್ರಿಯಾಂಕಗೌಡ,ಬೆಂಗಳೂರು

ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಬೂಮ್‌ ಜೋರಾಗಿಯೇ ಇದೆ.
ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಬೂಮ್‌ ಜೋರಾಗಿಯೇ ಇದೆ.

ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿ ಖರೀದಿಸಬೇಕು ಎನ್ನುವವವರಿಗೂ ಇದು ನಿರಾಶೆಯ ವಿಚಾರವೇ. ಏಕೆಂದರೆ ಬೆಂಗಳೂರಿನ ಆಸ್ತಿ ಮೌಲ್ಯದ ಬೆಲೆ ಗಗನಮುಖಿಯಾಗಿದೆ. ಅದೂ ಐದು ವರ್ಷದಲ್ಲಿ ಬೆಂಗಳೂರಿನ ಆಸ್ತಿ ದರವಂತೂ ವಿಪರೀತ ಏರಿಕೆ ಕಂಡಿದೆ. ಚಿನ್ನದ ಬೆಲೆ ಹಾಗೂ ಭೂಮಿ ಬೆಲೆ ಗಗನಕ್ಕೇರುತ್ತಲೇ ಇದೆ. ಬೆಂಗಳೂರಿಗೆ ಬಂದು ನೆಲೆಸಿರುವ ಅಸಂಖ್ಯಾತ ಮಧ್ಯಮವರ್ಗಕ್ಕೆ ಸ್ವಂತ ಸೂರು ಕಟ್ಟಬೇಕೆಂಬ ಕನಸಿರುತ್ತದೆ. ಆದರೆ, ಆಸ್ತಿ ಮೌಲ್ಯ ಏರುತ್ತಲೇ ಇದ್ದು, ಮಧ್ಯಮ ವರ್ಗಕ್ಕೆ ಶಾಕ್ ನೀಡಿದೆ. ಕಳೆದ ಐದು ವರ್ಷಗಳಲ್ಲಿ ನಗರದ ವಸತಿ ಕಟ್ಟಡಗಳ ಸರಾಸರಿ ಬೆಲೆ ಶೇ. 57ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.ಅನಾರಾಕ್ ಬಿಡುಗಡೆ ಮಾಡಿರುವ 'ಬೆಂಗಳೂರಿನ ರಿಯಲ್ ಎಸ್ಟೇಟ್ - ಯುವರ್ ಗೇಟ್‌ವೇ ಟು ಆಪರ್ಚುನಿಟಿ' ವರದಿಯ ಪ್ರಕಾರ, ಕಳೆದ 5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಸತಿ ಕಟ್ಟಡಗಳ ಬೆಲೆಯು ಶೇಕಡಾ 57 ರಷ್ಟು ಜಿಗಿದಿವೆ ಎಂದು ತಿಳಿಸಲಾಗಿದೆ. ಸರಾಸರಿ ಬಂಡವಾಳ ಮೌಲ್ಯವು ಶೇಕಡಾ 10ರಷ್ಟು ಮಧ್ಯಮ ಪ್ರಮಾಣದ ಏರಿಕೆಯಾಗುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ವಸತಿ ಮಾರಾಟವು 2024 ರ ಮೊದಲಾರ್ಧದಲ್ಲಿ ಸುಮಾರು 34,100 ವಸತಿ ಕಟ್ಟಡಗಳನ್ನು ಮಾರಾಟ ಮಾಡುವುದರೊಂದಿಗೆ ಹೊಸ ದಾಖಲೆ ಬರೆದಿದೆ. ಅಂದರೆ 2023ಕ್ಕಿಂತ ಶೇ. 11 ರಷ್ಟು ಹೆಚ್ಚಾಗಿದೆ. ಸಿಲಿಕಾನ್ ವ್ಯಾಲಿ ಬೆಂಗಳೂರು 2020 ರಿಂದ ಕಚೇರಿ ಸ್ಥಳಾವಕಾಶದ ಬೇಡಿಕೆಯಲ್ಲಿ ಏರಿಕೆ ಕಂಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಗರದ ಆಕರ್ಷಣೆ ಮತ್ತು ವ್ಯಾಪಾರ ಬೆಳವಣಿಗೆ ಪಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸರಾಸರಿ ಕಚೇರಿ ಬಾಡಿಗೆಗಳು ವಾರ್ಷಿಕವಾಗಿ ಶೇಕಡಾ 4 ರಿಂದ 8 ರಷ್ಟು ಬೆಳವಣಿಗೆಯನ್ನು ಕಂಡಿವೆ. ಐಟಿಬಿಟಿ ವಲಯದ ಪ್ರಾಬಲ್ಯವು ವರ್ಷದಿಂದ ವರ್ಷಕ್ಕೆ ಸ್ವಲ್ಪಮಟ್ಟಿಗೆ ಕಡಿಮೆಯಾದರೂ, ಪೂರೈಕೆದಾರರು ಮತ್ತು ಉತ್ಪಾದನೆ/ಕೈಗಾರಿಕೆಗಳು ತಮ್ಮ ಅಸ್ತಿತ್ವವನ್ನು ಕ್ರಮವಾಗಿ 3 ಪ್ರತಿಶತ ಮತ್ತು 2 ಪ್ರತಿಶತದಷ್ಟು ವಿಸ್ತರಿಸಿದ್ದಾರೆ. ಇದು ನಗರದ ಆಕರ್ಷಣೆ ಮತ್ತು ವ್ಯಾಪಾರದ ಬೆಳವಣಿಗೆಯನ್ನು ಚಿತ್ರಿಸುತ್ತದೆ.

2024ರ ಮೊದಲಾರ್ಧದಲ್ಲಿ ನಗರದ ವಸತಿ ಸ್ಥಳಗಳಲ್ಲಿ ಸರಾಸರಿ ಬೆಲೆಯು ಏರಿಕೆ ಕಂಡಿದೆ. ವರದಿಯ ಪ್ರಕಾರ, 2024ರ ಮೊದಲಾರ್ಧದಲ್ಲಿ ಸರಾಸರಿ ಬೆಲೆಯು ಪ್ರತಿ ಚದರ 7,800 ರೂ.ಗಳಿವೆ, 2019ರ ಅಂತ್ಯದ ವೇಳೆಗೆ ಇದ್ದಿದ್ದು 4,960 ರೂಪಾಯಿ. 2019ರಿಂದ ನಗರದಲ್ಲಿ ಹೊಸ ಪೂರೈಕೆಯನ್ನು ಸೇರಿಸಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 32ರಷ್ಟು ಹೆಚ್ಚಳವಾಗಿದೆ.

ಅಲ್ಲದೆ, ಇದು ಇಳಿಮುಖವಾಗುತ್ತಿರುವ ಸ್ಟಾಕ್ ಅಂತ್ಯದ ಸಕಾರಾತ್ಮಕ ಸಂಕೇತವಾಗಿದೆ. 2024ರ ಮೊದಲಾರ್ಧದಲ್ಲಿ ಬೆಂಗಳೂರಿನ ಪ್ರೀಮಿಯಂ ಮತ್ತು ಐಷಾರಾಮಿ ವಿಭಾಗಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣವು ಹೆಚ್ಚಾಗಿದೆ. ಹೀಗಾಗಿ ಸರಾಸರಿ ಬೆಲೆಗಳ ಏರಿಕೆಗೆ ಕಾರಣವಾಗಿದೆ. 2024ರ ಮೊದಲಾರ್ಧದ ಅಂತ್ಯದ ವೇಳೆಗೆ, ಬೆಂಗಳೂರಿನಲ್ಲಿ ಲಭ್ಯವಿರುವ ವಸತಿ ಕಟ್ಟಡಗಳ ಸ್ಟಾಕ್ ಸಂಖ್ಯೆ ಸುಮಾರು 45,420 ಯುನಿಟ್ಗಳಷ್ಟಿತ್ತು ಎಂದು ವರದಿ ತಿಳಿಸಿದೆ.

2024 ರ ಮೊದಲಾರ್ಧದಲ್ಲಿ ನಗರವು ಸರಿಸುಮಾರು 32,500 ಹೊಸ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಇದು ಶೇ. 30ರಷ್ಟು ಹೆಚ್ಚಾಗಿದೆ. 2024 ರಲ್ಲಿ ಪ್ರೀಮಿಯಂ ವಿಭಾಗವು ಪ್ರಾಬಲ್ಯ ಹೊಂದಿದ್ದು, ಒಟ್ಟು ವಸತಿ ಸ್ವತ್ತುಗಳ ಷೇರುಗಳಲ್ಲಿ ಶೇ. 39 ರಷ್ಟು ಪಾಲನ್ನು ಹೊಂದಿದ್ದರೆ. ಐಷಾರಾಮಿ ವಿಭಾಗವು ಶೇ.36 ರಷ್ಟು ಪಾಲನ್ನು ಹೊಂದಿದೆ.

(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)

Whats_app_banner