ಕನ್ನಡ ಸುದ್ದಿ  /  Karnataka  /  Bangalore News Sanathkumar Belagali Cgmanjula Ashokaram Bmbasheer Shastrimut Gets Kuwj Endowment Awards Kub

Kuwj Awards: ಹಿರಿಯ ಪತ್ರಕರ್ತರಾದ ಬೆಳಗಲಿ, ಮಂಜುಳಾ, ಅಶೋಕರಾಂ,ಬಶೀರ್‌, ಶಾಸ್ತ್ರಿಮಠ್‌ ರಿಗೆ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿಗಳಿಗೆ ಹಲವು ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.

ಕೆಯು ಡಬ್ಲುಜೆ ದತ್ತಿ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಾದ ಸನತ್‌ ಕುಮಾರ್‌ ಬೆಳಗಲಿ, ಸಿ.ಜಿ.ಮಂಜುಳಾ, ಡಿ.ಆರ್‌.ಅಶೋಕರಾಂ, ಬಿ.ಎಂ.ಬಶೀರ್‌, ಪ್ರಭುದೇವ ಶಾಸ್ತ್ರಿಮಠ.
ಕೆಯು ಡಬ್ಲುಜೆ ದತ್ತಿ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರಾದ ಸನತ್‌ ಕುಮಾರ್‌ ಬೆಳಗಲಿ, ಸಿ.ಜಿ.ಮಂಜುಳಾ, ಡಿ.ಆರ್‌.ಅಶೋಕರಾಂ, ಬಿ.ಎಂ.ಬಶೀರ್‌, ಪ್ರಭುದೇವ ಶಾಸ್ತ್ರಿಮಠ.

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ( KUWJ) ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಹಿರಿಯ ಪತ್ರಕರ್ತರಾದ ಸನತ್‌ ಕುಮಾರ್‌ ಬೆಳಗಲಿ, ಸಿ.ಜಿ.ಮಂಜುಳಾ,ಡಿ.ಆರ್‌.ಅಶೋಕರಾಂ, ಪ್ರಭುದೇವ ಶಾಸ್ತ್ರೀಮಠ, ಮೋಹನ ಹೆಗಡೆ , ಚಿಕ್ಕಪ್ಪನಹಳ್ಳಿ ಷಣ್ಮುಖ, ಸಿ.ಕೆ.ಮಹೇಂದ್ರ ಸಹಿತ 25ಕ್ಕೂ ಮಂದಿಯನ್ನು ಪ್ರಮುಖ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಗಳನ್ನು ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ಪ್ರದಾನ ಮಾಡುವರು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ .

ಪ್ರಶಸ್ತಿಗಳ ವಿವರ:

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ:

ಬಿ.ಎಂ.ಬಶೀರ್, ಮಂಗಳೂರು.

ಗೊಮ್ಮಟ ಮಾಧ್ಯಮ ಪ್ರಶಸ್ತಿ:

ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ

ಡಿವಿಜಿ ಪ್ರಶಸ್ತಿ:

ವಿ.ವೆಂಕಟೇಶ್, ಬೆಂಗಳೂರು

ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ:

ಸಿ.ಜಿ.ಮಂಜುಳ, ಬೆಂಗಳೂರು

ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ:

ಮಲ್ಲಿಗೆ ಮಾಚಮ್ಮ, ಮೈಸೂರು.

ಎಸ್.ವಿ.ಜಯಶೀಲರಾವ್ ಪ್ರಶಸ್ತಿ:

ಮೋಹನ ಹೆಗಡೆ, ಹುಬ್ಬಳ್ಳಿ

ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:

ಸನತ್ ಕುಮಾರ್ ಬೆಳಗಲಿ

ಕಿಡಿ ಶೇಷಪ್ಪ ಪ್ರಶಸ್ತಿ:

ಬಿ.ಎಂ.ನಂದೀಶ್, ಹಾಸನ.

ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ:

ಆರ್.ಜಯಕುಮಾರ್, ಬೆಂಗಳೂರು.

ಪಿ.ಆರ್.ರಾಮಯ್ಯ ಪ್ರಶಸ್ತಿ:

ಸಿ.ಕೆ.ಮಹೇಂದ್ರ, ಮೈಸೂರು.

ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ:

ಡಿ.ಆರ್. ಅಶೋಕ್ ರಾಮ್, ರಾಮನಗರ.

ರಾಜಶೇಖರಕೋಟಿ ಪ್ರಶಸ್ತಿ:

ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ

ಪಿ.ರಾಮಯ್ಯ ಪ್ರಶಸ್ತಿ:

ಮನೋಹರ ಮಲ್ಲಾಡದ, ರಾಣೆಬೆನ್ನೂರು

ಮ.ರಾಮಮೂರ್ತಿ ಪ್ರಶಸ್ತಿ:

ಎಚ್.ಕೆ.ಬಸವರಾಜು, ಬೆಂಗಳೂರು.

ಗರುಡನಗಿರಿ ನಾಗರಾಜ್ ಪ್ರಶಸ್ತಿ:

ಪ್ರಭುದೇವ ಶಾಸ್ತ್ರಿಮಠ, ಬೆಂಗಳೂರು

ಮಹದೇವ ಪ್ರಕಾಶ್ ಪ್ರಶಸ್ತಿ:

ವಿಜಯಕುಮಾರ್ ವಾರದ, ಕಲಬುರಗಿ

ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ‌:

ಎನ್.ಬಾಬು, ಭದ್ರಾವತಿ.

ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ:

ನಾಮದೇವ ವಾಟ್ಕರ್, ಯಾದಗಿರಿ

ಎಂ.ನಾಗೇಂದ್ರರಾವ್ ಪ್ರಶಸ್ತಿ:

ರವಿ ಆರ್, ದಾವಣಗೆರೆ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ:

ಕೆ.ಗೋಪಿಕಾ ಮಲ್ಲೇಶ್, ಕೋಲಾರ.

ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ:

ಆರ್.ಸಿ.ಪುಟ್ಟರಾಜು, ಚಾಮರಾಜನಗರ

ವಿಶೇಷ ಪ್ರಶಸ್ತಿ:

ಚಿಕ್ಕಪ್ಪನಳ್ಳಿ ಷಣ್ಮುಖ, ಚಿತ್ರದುರ್ಗ

ಎಸ್.ಬಿ.ರವಿಕುಮಾರ್,

ಶ.ಮಂಜುನಾಥ್,

ರವಿ ಮಲ್ಲಾಪುರ.

IPL_Entry_Point

ವಿಭಾಗ