Indian Railways: ಬೆಂಗಳೂರು ಮಾರ್ಗವಾಗಿ ಮೈಸೂರು-ಭುವನೇಶ್ವರ ನಡುವೆ ವಿಶೇಷ ರೈಲು, ಸಂಚಾರ ಯಾವಾಗ
ಬೇಸಿಗೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ನೈರುತ್ಯ ರೈಲ್ವೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಭುವನೇಶ್ವರಕ್ಕೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಒಡಿಶಾದ ರಾಜಧಾನಿ ಭುವನೇಶ್ವರವರೆಗೂ ವಿಶೇಷ ರೈಲು ಓಡಿಸಲು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಿಭಾಗವು ಮುಂದಾಗಿದೆ. ಬೇಸಿಗೆಯಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತೆರವುಗೊಳಿಸಲು ಬೇಡಿಕೆಯ ಮೇರೆಗೆ ಮೈಸೂರು-ಭುವನೇಶ್ವರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಾಗುವುದು ಎಂದು ಭಾರತೀಯ ರೈಲ್ವೆಯ ನೈರುತ್ಯ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ. ಈ ರೈಲು ಯಾವಾಗ ಸಂಚರಿಸಲಿದೆ. ಯಾವ ಮಾರ್ಗದಲ್ಲಿ ತೆರಳಲಿದೆ. ಎಷ್ಟು ಬೋಗಿಗಳು ಇರಲಿವೆ ಎನ್ನುವ ಕುರಿತು ವಿವರಗಳನ್ನು ರೈಲ್ವೆ ವಿಭಾಗವು ಬಿಡುಗಡೆ ಮಾಡಿದೆ. ಅವುಗಳ ಮಾಹಿತಿ ಹೀಗಿದೆ.
1. ಏಪ್ರಿಲ್ 9 ರಂದು ರೈಲು ಸಂಖ್ಯೆ 06215 ಮೈಸೂರು-ಭುವನೇಶ್ವರ ವಿಶೇಷ ಎಕ್ಸ್ ಪ್ರೆಸ್ ರೈಲು ಮೈಸೂರಿನಿಂದ ಬೆಳಿಗ್ಗೆ 4:15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 10:40 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.
2. ಏಪ್ರಿಲ್ 10 ರಂದು ರೈಲು ಸಂಖ್ಯೆ 06216 ಭುವನೇಶ್ವರ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಭುವನೇಶ್ವರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಸಂಜೆ 07:15 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.
ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ವೈಟ್ ಫೀಲ್ಡ್, ಬಂಗಾರಪೇಟೆ, ಜೋಲಾರಪೆಟ್ಟೈ , ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ತೆನಾಲಿ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮಲಕೋಟೆ, ದುವ್ವಾಡ, ಕೊಟ್ಟವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ, ಪಾಲಸಾ, ಬ್ರಹ್ಮಪುರ ಮತ್ತು ಖುರ್ದಾ ರೋಡ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಇದೇ ಮಾರ್ಗದಲ್ಲಿಯೇ ಮರು ದಿನ ರೈಲು ವಾಪಾಸ್ ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸಲಿದೆ. ನಿಲುಗಡೆಗಳು ಮೇಲಿನಂತೆಯೇ ಇರಲಿವೆ ಎಂದು ತಿಳಿಸಲಾಗಿದೆ.
ಈ ವಿಶೇಷ ರೈಲು ಎಸಿ ಟು ಟೈಯರ್ ಬೋಗಿ-1, ಎಸಿ ತ್ರಿ ಟೈಯರ್-3, ಸ್ಲೀಪರ್ ಕ್ಲಾಸ್ ಬೋಗಿಗಳು-9, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು-3 ಮತ್ತು ಎಸ್ಎಲ್ಆರ್ / ಡಿ -2 ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ. ಎಸಿ ಬೋಗಿಗಳಲ್ಲಿ ಬೆಡ್ ಶೀಟು ಮತ್ತು ಹೊದಿಕೆಯ ಸೌಲಭ್ಯ ಒದಗಿಸಲಾಗುವುದಿಲ್ಲ.ತಾವೇ ಬೆಡ್ಸೀಟ್ ಇಲ್ಲವೇ ಇತರೆ ಹೊದಿಕೆಯನ್ನು ತರಬಹುದು ಎಂದು ತಿಳಿಸಲಾಗಿದೆ.