ಟೊಮೆಟೊ ಬೆಳೆಯಿಂದ ನಷ್ಟ, ಕೆಲಸ ಕೊಟ್ಟ ಕಂಪನಿಯಲ್ಲೇ 57 ಲ್ಯಾಪ್‌ ಟಾಪ್ ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್;ಸಿನಿಮೀಯ ರೀತಿಯಲ್ಲೇ ಸೆರೆ-bangalore news techie in whitefield company theft 57 laptops after loss in tomato cultivation held in chennai mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಟೊಮೆಟೊ ಬೆಳೆಯಿಂದ ನಷ್ಟ, ಕೆಲಸ ಕೊಟ್ಟ ಕಂಪನಿಯಲ್ಲೇ 57 ಲ್ಯಾಪ್‌ ಟಾಪ್ ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್;ಸಿನಿಮೀಯ ರೀತಿಯಲ್ಲೇ ಸೆರೆ

ಟೊಮೆಟೊ ಬೆಳೆಯಿಂದ ನಷ್ಟ, ಕೆಲಸ ಕೊಟ್ಟ ಕಂಪನಿಯಲ್ಲೇ 57 ಲ್ಯಾಪ್‌ ಟಾಪ್ ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್;ಸಿನಿಮೀಯ ರೀತಿಯಲ್ಲೇ ಸೆರೆ

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿಯೇ ಲ್ಯಾಪ್‌ ಟಾಪ್‌ ಕಳ್ಳತನ ಮಾಡಿದ್ದ ಎಂಜಿನಿಯರ್‌ ಒಬ್ಬರನ್ನು ಬೆಂಗಳೂರು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.ವರದಿ: ಎಚ್. ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಲ್ಯಾಪ್‌ ಟಾಪ್‌ಗಳನ್ನು ತಮ್ಮ ಕಂಪೆನಿಯಲ್ಲಿಯೇ ಕಳ್ಳತನ ಮಾಡಿದ್ದ ಎಂಜಿನಿಯರ್‌ ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಲ್ಯಾಪ್‌ ಟಾಪ್‌ಗಳನ್ನು ತಮ್ಮ ಕಂಪೆನಿಯಲ್ಲಿಯೇ ಕಳ್ಳತನ ಮಾಡಿದ್ದ ಎಂಜಿನಿಯರ್‌ ಬಂಧಿಸಲಾಗಿದೆ.

ಬೆಂಗಳೂರು: ಟೊಮೆಟೊ ಬೆಳೆದು ನಷ್ಟ ಅನುಭವಿಸಿ ಸಾಲ ತೀರಿಸಲು ಕೆಲಸ ಕೊಟ್ಟ ಕಂಪನಿಯಲ್ಲಿ 57 ಲ್ಯಾಪ್‌ ಟಾಪ್ ಗಳನ್ನು ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೈಟ್ ಫೀಲ್ಡ್ ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೇ ಅದೇ ಕಂಪನಿಯಲ್ಲಿ 57 ಲ್ಯಾಪ್‌ ಟಾಪ್ ಗಳನ್ನು ಕಳವು ಮಾಡಿದ್ದ ಈ ಸಾಫ್ಟ್ ವೇರ್ ಇಂಜಿನಿಯರ್. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ ತೋರಪಲ್ಲಿ ಗ್ರಾಮದ ಮುರುಗೇಶ್ಎಂಬಾತನೇ ಕಳವು ಮಾಡುತ್ತಿದ್ದ ಇಂಜಿನಿಯರ್.

ಈತನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 22 ಲಕ್ಷ ಮೌಲ್ಯದ 50 ಲ್ಯಾಪ್‌ಟಾಪ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಲ್ಯಾವಿಗೇಟರ್ ಕಟ್ಟಡದಲ್ಲಿರುವ ಟೆಲಿಕಲರ್ ಇಂಡಿಯಾ ಎಂಬ ಕಂಪನಿಯ ವ್ಯವಸ್ಥಾಪಕ ಅತುಲ್ ಹ್ಯಾವೆಲ್ ಅವರು ಲ್ಯಾಪ್ ಟಾಪ್ ಕಳವಾಗಿರುವ ಬಗ್ಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಟೆಲಿಕಲರ್ ಇಂಡಿಯಾದಲ್ಲಿ ಕಳೆದ 8 ತಿಂಗಳಿನಿಂದ ಸಿಸ್ಟಂ ಅಡ್ಮಿನ್ ಹುದ್ದೆಯಲ್ಲಿ ಆರೋಪಿ ಮುರುಗೇಶ್ ಕೆಲಸ ಮಾಡುತ್ತಿದ್ದರು. ಕಂಪನಿಗೆ ಸೇರಿದ ಲ್ಯಾಪ್‌ ಟಾಪ್‌ಗಳನ್ನು ಇಡುತ್ತಿದ್ದ ಸ್ಥಳ ಆರೋಪಿಗೆ ತಿಳಿದಿತ್ತು. ಪ್ರತಿದಿನ ಕೆಲಸಕ್ಕೆ ಬರುತ್ತಿದ್ದ ಆರೋಪಿ ದಿನಕ್ಕೆ ಒಂದರಂತೆ ಒಂದೊಂದೇ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ. ಹೀಗೆ 57 ಲ್ಯಾಪ್‌ಟಾಪ್ ಗಳನ್ನು ಕದ್ದು ಕೆಲಸಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರು ದಾಖಲಾದ ನಂತರ ಕಂಪನಿಯ ಸುತ್ತಮುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಯಾರು ಎನ್ನುವುದು ಪತ್ತೆಯಾಗಿತ್ತು.

ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಲ್ಯಾಟ್‌ಟಾಪ್ ಕಳವು ಮಾಡುತ್ತಿದ್ದ ಎನ್ನುವುದು ಪತ್ತೆಯಾಗಿತ್ತು.

ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದಲ್ಲಿ ಆರೋಪಿ ಸಿನಿಮಾ ನೋಡುತ್ತಿದ್ದ. ಅಲ್ಲಿಗೆ ತೆರಳಿದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ಆರೋಪಿ ಕುಳಿತಿದ್ದ ಆಸನದಿಂದ ಸ್ವಲ್ಪ ದೂರದಲ್ಲಿ ಕುಳಿತು ಅವರೂ ಸಿನಿಮಾ ನೋಡುವ ಹಾಗೆ ನಟಿಸುತ್ತಿದ್ದರು. ಸಿನಿಮಾ ಮುಗಿದ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ವಿಚಾರಣೆಗೆ ಒಳಪಡಿಸಿದಾಗ ಲ್ಯಾಪ್‌ಟಾಪ್ ಕಳವು ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋವಿಡ್ ಅವಧಿಯಲ್ಲಿ ಆರೋಪಿ ಮುರುಗೇಶ್ ಆರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದ. ಆದರೆ ಟೊಮೆಟೊ ಬೆಳೆಯಿಂದ 25 ಲಕ್ಷ ರೂಪಾಯಿ ನಷ್ಟವಾಗಿತ್ತು. ಆದ್ದರಿಂದ ಸಾಲ ತೀರಿಸಲು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹೊಸೂರಿನಲ್ಲಿರುವ ಲ್ಯಾಪ್‌ ಟಾಪ್ ಶೋ ರೂಂಗೆ 45 ಲ್ಯಾಪ್‌ ಟಾಪ್‌ಗಳನ್ನು ಮಾರಾಟ ಮಾಡಿದ್ದ. ಮತ್ತೊಬ್ಬರಿಗೆ 5 ಲ್ಯಾಪ್‌ ಟಾಪ್ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್, ಆಯುಧಗಳ ಪತ್ತೆ; ಚುರುಕುಗೊಂಡ ತನಿಖೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳ ಬಳಿ ಮೊಬೈಲ್, ಇಯರ್ ಫೋನ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಚಾಕು ಮೊದಲಾದ ಆಯುಧಗಳು ಪತ್ತೆಯಾಗಿರುವುದನ್ನು ಕುರಿತು ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಜೈಲಿನ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಸಂಬಂಧಪಟ್ಟ ಬ್ಯಾರಕ್‌ ನಲ್ಲಿರುವ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ಚಿತ್ರನಟ ದರ್ಶನ್ ಮತ್ತಿತರರಿಗೆ ವಿಶೇಷ ಆತಿಥ್ಯ ನೀಡಿರುವ ಫೋಟೋ ಬಹಿರಂಗಗೊಂಡ ನಂತರ ಕಾರಾಗೃಹದ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದರು. ವಿಲ್ಸನ್ ನಾಗ ಮತ್ತಿತರ ಬಳಿ ಪತ್ತೆಯಾಗಿದ್ದ ಮೊಬೈಲ್ ಗಳನ್ನೂ ಜಪ್ತಿ ಮಾಡಲಾಗಿತ್ತು.

ಡೆಲಿವರಿ ಬಾಯ್ ಗಳ ಸುಲಿಗೆ ಮಾಡುತ್ತಿದ್ದ ಸಹೋದರರ ಬಂಧನ

ಡೆಲಿವರಿ ಬಾಯ್ ಗಳು ಹಾಗೂ ಪಾದಾಚಾರಿಗಳನ್ನು ಅಡ್ಡಗಟ್ಟಿ ಹಣ ಮತ್ತು ಮೊಬೈಲ್ ಗಳನ್ನು ಸುಲಿಗೆ ಮಾಡುತ್ತಿದ್ದ ಅಣ್ಣ ತಮ್ಮನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಜಿಗಣಿ ನಿವಾಸಿಗಳಾದ ಆನಂದ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಇವರಿಂದ ಬಂಧಿತರಿಂದ ರೂ. 4.17 ಲಕ್ಷ ಮೌಲ್ಯದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟಲಕ್ಷ್ಮಿ ಲೇಔಟ್‌ ನಿವಾಸಿಯಾಗಿರುವ ಸ್ವಿಗ್ಗಿ ಡೆಲಿವರಿ ಬಾಯ್ ವೊಬ್ಬ ನೀಡಿದ ದೂರು ಆಧರಿಸಿ, ಸಹೋದರ ಸುಲಿಗೇಕೋರರನ್ನು ಬಂಧಿಸಲಾಗಿದೆ. ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಲು ಲೊಕೇಶನ್ ಹುಡುಕಾಡುತ್ತಿದ್ದಾಗೆ ಆರೋಪಿಗಳು ಮೊಬೈಲ್ ಕಸಿದು ಪರಾರಿ ಆಗಿದ್ದರು. ಈ ಮಧ್ಯೆ ಆರೋಪಿ ಸಹೋದರರು ಡಕಾಯಿತಿ ನಡೆಸಿದ್ದರು. ಇಬ್ಬರನ್ನೂ ಬನ್ನೇರುಘಟ್ಟ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಇವರೇ ಮೊಬೈಲ್ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿತ್ತು. ಡಕಾಯಿತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಫೋನ್ ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಎಚ್. ಮಾರುತಿ. ಬೆಂಗಳೂರು

mysore-dasara_Entry_Point