Indian Railway: ಬೆಂಗಳೂರಿನಿಂದ ಹೊರಡುವ ಕೇರಳ, ತಮಿಳುನಾಡು ಕೆಲ ರೈಲು ಸಂಚಾರದಲ್ಲಿ 4 ದಿನ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Indian Railway: ಬೆಂಗಳೂರಿನಿಂದ ಹೊರಡುವ ಕೇರಳ, ತಮಿಳುನಾಡು ಕೆಲ ರೈಲು ಸಂಚಾರದಲ್ಲಿ 4 ದಿನ ವ್ಯತ್ಯಯ

Indian Railway: ಬೆಂಗಳೂರಿನಿಂದ ಹೊರಡುವ ಕೇರಳ, ತಮಿಳುನಾಡು ಕೆಲ ರೈಲು ಸಂಚಾರದಲ್ಲಿ 4 ದಿನ ವ್ಯತ್ಯಯ

ಕರ್ನಾಟಕದಿಂದ ಕೇರಳ, ತಮಿಳುನಾಡು ಕಡೆ ಹೋಗುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಗಮನಹರಿಸುವಂತೆ ಕೋರಲಾಗಿದೆ.

ಕರ್ನಾಟಕದಿಂದ ಹೊರಡು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಕರ್ನಾಟಕದಿಂದ ಹೊರಡು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ಕರ್ನಾಟಕದಿಂದ ಕೇರಳ,ತಮಿಳುನಾಡು ಕಡೆ ತೆರಳುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ತಿರುವನಂತಪುರಂ ವಿಭಾಗದ ವ್ಯಾಪ್ತಿಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯಲಿರುವ ಸಲುವಾಗಿ ಕೆಲ ರೈಲುಗಳನ್ನು ನಿಯಂತ್ರಣ ಮತ್ತು ತಡವಾಗಿ ಪ್ರಾರಂಭಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. . ಅದರಲ್ಲೂ ಮೈಸೂರು ಹಾಗೂ ಬೆಂಗಳೂರಿನಿಂದ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮಾರ್ಚ್‌ 15ರಿಂದ ನಾಲ್ಕು ದಿನ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆಗಳಾಗಲಿದ್ದು, ಪ್ರಯಾಣಿಕರು ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1. ಮಾರ್ಚ್ 18 ಮತ್ತು 19, 2024 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16315 ಮೈಸೂರು-ಕೊಚುವೇಲಿ ಡೈಲಿ ಎಕ್ಸ್ ಪ್ರೆಸ್ ರೈಲು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

2. ಮಾರ್ಚ್ 15 ಮತ್ತು 16, 2024 ರಂದು ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್ ಪ್ರೆಸ್ ರೈಲು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

3. ಮಾರ್ಚ್ 15, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16320 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕೊಚುವೇಲಿ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ 135 ನಿಮಿಷ ಕಾಲ ತಡವಾಗಿ ಹೊರಡಲಿದೆ.

ume

Whats_app_banner