Bangalore Power Cut: ಬೆಂಗಳೂರಿನ ಜನರೇ ಗಮನಿಸಿ: ನಗರದ ಈ ಪ್ರದೇಶದಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯ
ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ, ಸಮಯ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ವಿದ್ಯುತ್ ಸ್ಟೇಷನ್ ಗಳ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಬೇಕಾದ ಕಾರಣದಿಂದ ಕೆಲವು ಪ್ರದೇಶಗಳಲ್ಲಿ ಇಂದು (ಜನವರಿ 21, ಮಂಗಳವಾರ) ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂನಿಂದ ಎಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿವೆ, ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳು ಹಾಗೂ ಸಮಯದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂದು (ಜನವರಿ 21, ಮಂಗಳವಾರ) ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 03:30 ಗಂಟೆಯವರೆಗೆ 66/11ಕೆವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಹಳೆಹಳ್ಳಿ, ಮಾರ್ಗೊಂಡಣ ಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ವಿದ್ಯಾನಗರ, ಕೆ.ಆರ್.ಸಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡ ರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್ಮೆಂಟ್, ಕಲ್ಕೆರೆ ರೋಡ್, ಪೂರ್ಣ ಪ್ರಜ್ನಾ, ಮಾರಗೊಂಡನಹಳ್ಳಿ, ಗವಿಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶ.
66/11 ಕೆವಿ ಆಸ್ಟಿನ್ ಟೌನ್ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಇಂದು ಬೆಳಗ್ಗೆ (ಜನವರಿ 21, ಮಂಗಳವಾರ) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆಸ್ಟಿನ್ ಟೌನ್ ಸ್ಟೇಷನ್ ನಲ್ಲಿ ತುರ್ತು ನಿರ್ವಹಣೆ ಕೆಲಸದಿಂದ ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಬ್ರೆಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿಐ ಬ್ಯಾಂಕ್, ರಾಯಭಾರ ಕಚೇರಿ, ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ್ ನಗರ, ಗರುಡಮಾಲ್, ಏರ್ ಫೋರ್ಸ್ ಆಸ್ಪತ್ರೆ, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈಜಿ ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರಸ್ತೆ, ವನ್ನೆರ್ಪೇಟ್, ಲೈಫ್ ಸ್ಟೈಲ್, ಎಂ.ಜಿ ರಸ್ತೆ, ಹೇಯ್ಸ್ ರಸ್ತೆ, ಕಾನ್ವೆಂಟ್ ರಸ್ತೆ, ಎಸ್ ಎಲ್ ಅಪಾರ್ಟ್‌ಮೆಂಟ್, ರಿಚ್ಮಂಡ್ ಟೌನ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಂಜಪ್ಪ ವೃತ್ತ, ಸ್ಟೇನ್ ಗಾರ್ಡನ್, ರಿಚ್‌ಮಂಡ್ ಪಾರ್ಕ್, ಲಾಂಗ್‌ಫೋರ್ಡ್ ರಸ್ತೆ, ಬ್ರೈಟ್ ಸ್ಟ್ರೀಟ್, ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರುಕಟ್ಟೆ, ಬಿಎಸ್ ಡಬ್ಲ್ಯೂಎಸ್ಎಸ್ ಬಿ ನೀರು ಸರಬರಾಜು, ಲಾಂಗ್‌ಫೋರ್ಡ್ ರಸ್ತೆ, ಶಾಪರ್ ಸ್ಟಾಪ್, ಮಾರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ರಿಚ್ಮಂಡ್ ವೃತ್ತ, ವಿಟ್ಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ ಹಾಗೂ ಬಿಎಂಸಿಆರ್ ಎಲ್. ಇಷ್ಟು ಪ್ರದೇಶದಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
