ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದಿನಿಂದ ಶುರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದಿನಿಂದ ಶುರು

ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದಿನಿಂದ ಶುರು

ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ - ಬೆಂಗಳೂರು ಟೂರ್ ಪ್ಯಾಕೇಜ್ ಅನ್ನು ಕೆಎಸ್‌ಆರ್‌ಟಿಸಿ ಆಯೋಜಿಸಿದೆ. ಇದು ಮೇ 31 ರಿಂದ ಪ್ರತಿ ಶನಿವಾರ, ಭಾನುವಾರ (ವಾರಾಂತ್ಯದ ದಿನಗಳಲ್ಲಿ) ಇರಲಿದ್ದು, ಇದರ ದರ ವಿವರ ಮತ್ತು ಇತರೆ ಮಾಹಿತಿ ಇಲ್ಲಿದೆ.

ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದು ಶುರುವಾಗುತ್ತಿದೆ. (ಸಂಗ್ರಹ ಚಿತ್ರ)
ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ಯಾಕೇಜ್ ಟೂರ್, ಇಂದು ಶುರುವಾಗುತ್ತಿದೆ. (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಸಾರ್ವಜನಿಕರ ಅನುಕೂಲಕ್ಕಾಗಿ “ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ” ಮಾರ್ಗದಲ್ಲಿ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದಂದು ಪ್ಯಾಕೇಜ್ ಟೂರ್‌ ಆಯೋಜಿಸಲು ತೀರ್ಮಾನಿಸಿದೆ. ಇದು ಇಂದು (ಮೇ 31) ಶುರುವಾಗಿದೆ.

ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ ಪ್ಯಾಕೇಜ್ ಟೂರ್ ಶುಲ್ಕ ವಿವರ

ಪ್ಯಾಕೇಜ್ ಟೂರ್‌ ಶುಲ್ಕದಲ್ಲಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ /ರಾತ್ರಿ ಊಟ ಹಾಗೂ ಪ್ರವೇಶ ಶುಲ್ಕಗಳನ್ನು ಹೊರತುಪಡಿಸಿ ವಯಸ್ಕ ಪ್ರಯಾಣಿಕರಿಗೆ ಕರ್ನಾಟಕ ಸಾರಿಗೆ ಪ್ರಯಾಣದರ ಮುಂಗಡ ಬುಕಿಂಗ್ ಸೇರಿ670 ರೂಪಾಯಿ, 6 ರಿಂದ 12 ವರ್ಷದ ಮಕ್ಕಳಿಗೆ 500 ರೂಪಾಯಿ ನಿಗದಿಪಡಿಸಲಾಗಿದೆ.

ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ ಪ್ಯಾಕೇಜ್ ಟೂರ್‌ನಲ್ಲಿ ಏನೇನು

ಕೆಎಸ್‍ಆರ್‌ಟಿಸಿ ಬಸ್ ಬೆಂಗಳೂರಿನಿಂದ ಬೆಳಿಗ್ಗೆ 6.30 ಗಂಟೆಗೆ ನಿರ್ಗಮಿಸಿ 8.30 ಗಂಟೆಗೆ ನಿಮಿಷಾಂಬ ದೇವಸ್ಥಾನ ತಲುಪುವುದು. ನಿಮಿಷಾಂಬ ದೇವಸ್ಥಾನ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಅದಾಗಿ ಉಪಹಾರ ಮುಗಿಸಿ ನಿಮಿಷಾಂಬದಿಂದ ಶ್ರೀರಂಗಪಟ್ಟಣಕ್ಕೆ ಪ್ರಯಾಣ ಇರಲಿದೆ. ಶ್ರೀರಂಗನಾಥ (ಆದಿರಂಗ) ದೇವಸ್ಥಾನ ವೀಕ್ಷಣೆಯ ನಂತರ ಅಲ್ಲಿಂದ ಹೊರಟು ಕಲ್ಲಹಳ್ಳಿಯ ಭೂ ವರಾಹ ಸ್ವಾಮಿ ದೇವಾಲಯಕ್ಕೆ ಪ್ರಯಾಣ. ಅಲ್ಲಿ ದೇವಾಲಯ ವೀಕ್ಷಣೆ ನಂತರ ಊಟ ಮುಗಿಸಿ ಮಧ್ಯಾಹ್ನ 2.30 ಗಂಟೆಗೆ ಮೇಲುಕೋಟೆಗೆ ಬಸ್ ತಲುಪುತ್ತದೆ. ಅಲ್ಲಿ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನ, ತಂಗಿ ಕೊಳ, ಅಕ್ಕ ಕೊಳ, ರಾಯಗೋಪುರಂ ವೀಕ್ಷಣೆ ಮುಗಿಸಿ ಸಂಜೆ 5.00 ಗಂಟೆಗೆ ಮೇಲುಕೋಟೆಯಿಂದ ಹೊರಟು ರಾತ್ರಿ 8.15 ಗಂಟೆಗೆ ಬೆಂಗಳೂರು ತಲುಪುತ್ತದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಸಾರ್ವಜನಿಕ ಪ್ರಯಾಣಿಕರು ಈ ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯದ ಟಿಕೆಟ್‍ನ್ನು ಜಾಲತಾಣ www.ksrtc.in ಅಥವಾ www.ksrtc.karnataka.gov.in ರ ಮೂಲಕ ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080-26252625 / 7760990100 / 7760990560 / 7760990287 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.