ಮೇ15ರ ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್; ಕುಂದುಕೊರತೆ, ಅಹವಾಲುಗಳಿದ್ರೆ ಸಲ್ಲಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೇ15ರ ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್; ಕುಂದುಕೊರತೆ, ಅಹವಾಲುಗಳಿದ್ರೆ ಸಲ್ಲಿಸಿ

ಮೇ15ರ ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್; ಕುಂದುಕೊರತೆ, ಅಹವಾಲುಗಳಿದ್ರೆ ಸಲ್ಲಿಸಿ

ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರದ ವಿವಿಧೆಡೆ ಇಂದು (ಮೇ15) ಬೆಳಿಗ್ಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆ ಪರಿಹರಿಸುವ ನೀರಿನ ಅದಾಲತ್ ನಡೆಯಲಿದೆ.

ಮೇ 15 ರಂದು ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ (ಸಾಂಕೇತಿಕ ಚಿತ್ರ)
ಮೇ 15 ರಂದು ಬೆಳಿಗ್ಗೆ ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ (ಸಾಂಕೇತಿಕ ಚಿತ್ರ)

ಬೆಂಗಳೂರು ನೀರಿನ ಅದಾಲತ್: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ವಿವಿಧೆಡೆ ಇಂದು ಗುರುವಾರ (ಮೇ 15) ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮೇ 15 ರಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ನೀರಿನ ಅದಾಲತ್‍ನ್ನು ನಡೆಸುವುದಾಗಿ ತಿಳಿಸಿದೆ.

ಬೆಂಗಳೂರು ನೀರಿನ ಅದಾಲತ್ ಎಲ್ಲೆಲ್ಲಿ

ಬೆಂಗಳೂರು ಜಲ ಮಂಡಳಿಯ ವಾಯವ್ಯ-2, ವಾಯವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2–2, ನೈಋತ್ಯ -2, ನೈಋತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನಾಳೆ (ಮೇ 15) ಬೆಳಿಗ್ಗೆ 9.30 ರಿಂದ 11 ಗಂಟೆ ತನಕ ನೀರಿನ ಅದಾಲತ್ ನಡೆಯಲಿದೆ.

ನೀರಿನ ಅದಾಲತ್ ಸೇವಾಠಾಣೆಗಳು ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳಿ, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಫ್ರೇಜರ್‍ಟೌನ್, ಮಚಲಿಬೆಟ್ಟ, ಪಿಳ್ಳಣ್ಣಗಾರ್ಡನ್ 1&2, ಕೆಂಪೇಗೌಡ ಟವರ್, ಕುಮಾರ ಪಾರ್ಕ್, ಜಯಮಹಲ್, ಸಂಜಯನಗರ, ನ್ಯೂ ಬಿ.ಇ.ಎಲ್. ರಸ್ತೆ, ಆರ್.ಟಿ.ನಗರ ಕಾವಲ್ ಬೈರಸಂದ್ರ, ಗಂಗಾನಗರ, ಆನಂದನಗರ, ಮನೋರಾಯನಪಾಳ್ಯ, ಸಿಂಗಾಪುರ, ವಿದ್ಯಾರಣ್ಯಪುರ, ಸಹಕಾರನಗರ, ಹೆಚ್.ಎಸ್.ಆರ್-1, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಬೇಗೂರು, ವಿ.ವಿ.ಪುರಂ, ಸುಧಾಮನಗರ-2, ಕೆಂಪೇಗೌಡ ನಗರ, ಜಗಜೀವನರಾಮ್ ನಗರ, ಚಾಮರಾಜಪೇಟೆ, ಬನಗಿರಿನಗರ, ಬಿ.ಎಸ್.ಕೆ-1 &2, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಪೂರ್ಣ ಪ್ರಜ್ಞಾ ಲೇಔಟ್, ಪೂರ್ವ ವಿಲೇಜ್-2-1,& 2-2, ಕಾಡುಗೋಡಿ ವರ್ತೂರು, ಐ.ಎಸ್.ಪಿ.ಎಸ್. ಹೊರಮಾವು, ರಾಜಾಕೆನಲ್ ವ್ಯಾಪ್ತಿಯಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಕುಂದುಕೊರತೆ, ಮಾಹಿತಿಗೆ ಬೆಂಗಳೂರು ಜಲ ಮಂಡಳಿ ಸಹಾಯವಾಣಿ

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಜಲ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್ಆಪ್‌ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.