Bangalore Rains: ಬೆಂಗಳೂರಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ, ಆರೆಂಜ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Rains: ಬೆಂಗಳೂರಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ, ಆರೆಂಜ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ

Bangalore Rains: ಬೆಂಗಳೂರಲ್ಲಿ ಇಂದೂ ಭಾರೀ ಮಳೆ ಮುನ್ಸೂಚನೆ, ಆರೆಂಜ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ

ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ . ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.ಮುಂದಿನ ಮೂರು ಗಂಟೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು,. ಹಲವು ಬಡಾವಣೆಗಳಲ್ಲಿ ರಸ್ತೆಗಳೇ ಚರಂಡಿಗಳಾಗಿ ಮಾರ್ಪಟ್ಟಿವೆ.
ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು,. ಹಲವು ಬಡಾವಣೆಗಳಲ್ಲಿ ರಸ್ತೆಗಳೇ ಚರಂಡಿಗಳಾಗಿ ಮಾರ್ಪಟ್ಟಿವೆ.

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಸದ್ಯಕ್ಕೆ ನಿಲ್ಲುವ ಮುನ್ಸೂಚನೆಯಿಲ್ಲ. ಸತತವಾಗಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಭಾರೀ ಮಳೆಯಾಗಿದ್ದರೆ, ಕೆಲವು ಕಡ ಹಗುರದಿಂದ ಸಾಧಾರಣ ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನ ಮಳೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಈಗಾಗಲೇ ಪ್ರಕಟಿಸಿದೆ. ಭಾರೀ ಮಳೆಯ ಪರಿಣಾಮವಾಗಿ ಅಲ್ಲಲ್ಲಿ ನೀರು ನಿಂತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಭಾನುವಾರ ರಜೆ ಇದ್ದುದರಿಂದ ಅಷ್ಟಾಗಿ ಸಂಚಾರ ಸಮಸ್ಯೆಯಾಗಿರಲಿಲ್ಲ.ಸೋಮವಾರ ಕಚೇರಿಗಳು ಆರಂಭವಾಗುವುದರಿಂದ ಮಳೆಯಿಂದಾಗಿ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆಯೂ ಆಗುವ ಸಾಧ್ಯತೆಯಿದೆ. ಈ ನಡುವೆ ಮಳೆ ಕಾರಣದಿಂದ ಬೆಂಗಳೂರು ನಗರದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆಯನ್ನು ಜಿಲ್ಲಾಡಳಿತ ಘೋಷಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಐಎಂಡಿ ಸೂಚನೆ

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಆರೆಂಜ್‌ ಅಲರ್ಟ್‌ ಅನ್ನು ಇಲಾಖೆಯು ಘೋಷಿಸಿದೆ. ಕೆಲವು ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯವೂ ಆಗಲಿದೆ. ನೀರು ಹರಿಯುವಿಕೆಯ ಸಮಸ್ಯೆಯಿಂದ ಸಂಚಾರಕ್ಕೂ ಅಡಣೆಯಾಗಬಹುದು. ಮರಗಳು ಅಲ್ಲಲ್ಲಿ ಬೀಳುವ ಸೂಚನೆಯೂ ಇರುವುದರಿಂದ ಸವಾರರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಸೋಮವಾರ ಮೋಡ ಕವಿದ ವಾತಾವರಣವೇ ಬಹುತೇಕ ಕಂಡು ಬರಲಿದೆ. ಕೆಲವೊಮ್ಮೆ ಸಾಧಾರಣ, ಕೆಲವೊಮ್ಮೆ ಜೋರಾದ ಮಳೆಯೂ ಆಗುವುದರಿಂದ ಜನತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.

ಶಾಲೆಗಳಿಗೆ ರಜೆ

ಬೆಂಗಳೂರು ನಗರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ಸರ್ಕಾರಿ/ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿ ಬೆಂಗಳೂರು ನಗರ ಡಿಸಿ ಜಗದೀಶ ಜಿ ಆದೇಶ ಹೊರಡಿಸಿದ್ದಾರೆ. ಶಾಲೆಯ ರಜೆಯನ್ನು ಸರಿದೂಗಿಸಲು ಶನಿವಾರ ಅಥವಾ ಭಾನುವಾರ ತರಗತಿಗಳನ್ನು ನಡೆಸುವಂತೆ ಶಾಲೆಗಳಿಗೆ ತಿಳಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ

ಬೆಂಗಳೂರಿನ ಹಲವು ಭಾಗಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.

ವನ್ನಾರಪೇಟೆ 70 ಮಿ.ಮೀ.

ನಾಗಾಪುರ 69 ಮಿ.ಮೀ

ಹಂಪಿನಗರ 62 ಮಿ.ಮೀ

ಬಾಗಲಗುಂಟೆ 57 ಮಿ.ಮೀ

ನಂದಿನಿ ಲೇಔಟ್‌ 53.50 ಮಿ.ಮೀ

ಸಂಪಂಗಿರಾಮನಗರ 49ಮಿ.ಮೀ

ಬಸವೇಶ್ವರನಗರ 48ಮಿ.ಮೀ

ಶೆಟ್ಟಹಳ್ಳಿ 47.50ಮಿ.ಮೀ

ರಾಜರಾಜೇಶ್ವರಿ ನಗರ 47ಮಿ.ಮೀ

ಮಾರುತಿ ಮಂದಿರ 47ಮಿ.ಮೀ

ವಿಶ್ವೇಶ್ವರ ಪುರಂ 46.50 ಮಿ.ಮೀ ಮಳೆಯಾಗಿದೆ.

ಹಲವೆಡೆ ಸಮಸ್ಯೆ

ರಾಜರಾಜೇಶ್ವರಿ ನಗರ, ಕೆಂಗೇರಿ, ಹೆಬ್ಬಾಳ ಜಂಕ್ಷನ್, ನಾಗವಾರ, ಹೊರಮಾವು, ಹೆಣ್ಣೂರು, ಕಸ್ತೂರಿ ನಗರ, ರಾಮಮೂರ್ತಿ ನಗರ, ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್-ಮೆಹಕ್ರಿ ಸರ್ಕಲ್ ಮತ್ತು ಹೊರವರ್ತುಲ ರಸ್ತೆಯಂತಹ ಪ್ರದೇಶಗಳು ತೀವ್ರ ತೊಂದರೆಗೊಳಗಾಗಿದ್ದು, ಪ್ರಮುಖ ಟ್ರಾಫಿಕ್ ದಟ್ಟಣೆಯನ್ನು ಅನುಭವಿಸಿತು. ಸೋಮವಾರವೂ ಹಲವು ಭಾಗಗಳಲ್ಲಿ ಇಂತಹ ಅನುಭವಾಗುವುದರಿಂದ ಸವಾರರು ಗಮನಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಅನೇಕರು ಪ್ರವಾಹದ ತೀವ್ರತೆಯ ಬಗ್ಗೆ ತಮ್ಮ ಅನುಭವವನ್ನು ಎಕ್ಸ್‌ ಮೂಲಕ ಹಂಚಿಕೊಂಡರು, "ಬೆಂಗಳೂರಿನ ಶೇಕಡಾ 50 ರಷ್ಟು ಯಾವುದೇ ಸಂದೇಹವಿಲ್ಲದೆ ಇಂದು ನೀರಿನ ಅಡಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ" ಎನ್ನುವುದು ಒಬ್ಬರ ಅಭಿಪ್ರಾಯ. ಮತ್ತೊಬ್ಬ X ಬಳಕೆದಾರನು, " ಸಮತಟ್ಟಾದ, ಕಪ್ಪು ಮೋಡಗಳಿಂದ ತುಂಬಿದ ಆಕಾಶದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಸೂರ್ಯನು ಮತ್ತೆ ಬೆಳಗುತ್ತದೆಯೇ ಎಂದು ಜನರು ಆಶ್ಚರ್ಯ ಪಡುವಂತೆ ಮಾಡಿತು ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರಲ್ಲಿ ಮುಂದಿನ ಮೂರು ಗಂಟೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರಲ್ಲಿ ಮುಂದಿನ ಮೂರು ಗಂಟೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Whats_app_banner