ಬೆಂಗಳೂರಿನ ಮ್ಯಾನ್‌ಹೋಲ್ ಸ್ವಚ್ಚತೆಗೆ 'ಬ್ಯಾಂಡಿಕೂಟ್' ರೋಬೋಟ್ ಬಳಕೆಗೆ ಬಿಬಿಎಂಪಿ ನಿರ್ಧಾರ; ದೇಶಾದ್ಯಂತ ಬಳಕೆಯಲ್ಲಿರುವ ಯಂತ್ರ
ಬೃಹತ್ ಬೆಂಗಳೂರು ನಗರ ಪಾಲಿಕೆಯು ಸ್ವಚ್ಛತೆ ವಿಚಾರದಲ್ಲಿ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಇದಕ್ಕಾಗಿ ರೋಬೋಟ್ ತಂತ್ರಜ್ಞಾನದ ಬ್ಯಾಂಡಿಕೂಟ್ ಖರೀದಿಸುತ್ತಿದೆ.ವರದಿ: ಎಚ್.ಮಾರುತಿ,ಬೆಂಗಳೂರು

ಬೆಂಗಳೂರು: ಮುಚ್ಚಿಹೋಗಿರುವ ಚರಂಡಿಗಳು ಮತ್ತು ಮ್ಯಾನ್ ಹೋಲ್ ಗಳನ್ನುಸ್ವಚ್ಚಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಬ್ಯಾಂಡಿಕೂಟ್' ರೋಬೋಟ್ ಎಂಬ ಯಂತ್ರಗಳನ್ನು ಬಳಸಲು ನಿರ್ಧರಿಸಿದೆ. ಈ ಆಧುನಿಕ ತಂತ್ರಜ್ಞಾನದ ರೋಬೋಟ್ ಗಳು ಈಗಾಗಲೇ ಚೆನ್ನೈ ತಿರುವನಂತಪುರಂ ಮೊದಲಾದ ನಗರಗಳಲ್ಲಿ ಬಳಸಲಾಗುತ್ತಿದೆ. ಮೂಲಕ ಚರಂಡಿಗಳನ್ನು ಸ್ವಚ್ಚಗೊಳಿಸಲು ಮಾನವರ ಬಳಕೆ ಕಡಿಮೆ ಮಾಡುವುದರ ಜತೆಗೆ ಚರಂಡಿಗಳ ಸ್ವಚ್ಚತೆಯೂ ಸುಧಾರಿಸುತ್ತದೆ.
ಇತ್ತೀಚೆಗೆ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಎಂ.ಮಹೇಶ್ವರ್ ರಾವ್ ಅವರು ನಾಗರೀಕ ಯೋಜನೆಗಳ ಪರಾಮರ್ಶೆ ಸಭೆಯನ್ನು ನಡೆಸಿದ ನಂತರ ಈ ವಿಷಯ ತಿಳಿಸಿದರು. ಒಳಚರಂಡಿಗಳನ್ನು ಸ್ವಚ್ಚಗೊಳಿಸಲು 'ಬ್ಯಾಂಡಿಕೂಟ್' ರೋಬೋಟ್ ಗಳನ್ನು ಬಳಸಲು ನಿರ್ಧರಿಸಲಾಗಿದೆ. ಈ ರೋಬೋಟ್ ಗಳನ್ನು ಈಗಾಗಲೇ ಚೆನ್ನೈ ನಗರದಲ್ಲಿ ಬಳಕೆ ಮಾಡಲಾಗುತ್ತಿದ್ದು, ಫಲಿತಾಂಶ ಉತ್ತಮವಾಗಿದೆ ಎಂದರು.
ಈ ಸೆಮಿ ಸ್ವಯಂಚಾಲಿತ ರೋಬೋಟ್ ಗಳು ನೇರವಾದ ಚರಂಡಿಗಳನ್ನು ಸ್ವಚ್ಚಗೊಳಿಸುತ್ತವೆ.ಚರಂಡಿಯಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೀರಿಕೊಳ್ಳುತ್ತದೆ. ಈ ನಿಟ್ಟಿನಲ್ಲಿಬಿಬಿಎಂಪಿ ಈ ರೋಬೋಟ್ ಗಳ ಕಾರ್ಯವೈಖರಿ ಮತ್ತು ತಂತ್ರಜ್ಞಾನವನ್ನುಪರಿಶೀಲಿಸುತ್ತಿದೆ. ಡ್ರೋಣ್ ಮಾದರಿಯಲ್ಲಿ ರೋಬೋಟ್ ಗಳನ್ನು ನಿಭಾಯಿಸಬಹುದಾಗಿದೆ.
ಬೆಂಗಳೂರಿನಲ್ಲಿ ಈಗಾಲೇ ಏಪ್ರಿಲ್ 22ರಿಂದಲೇ ಸ್ಚಚ್ಚತಾ ಅಭಿಯಾನ ನಡೆಯುತ್ತಿದ್ದು, ಇನ್ನೂ ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. ಮುಖ್ಯವಾಗಿ ಬಸ್ ನಿಲ್ದಾಣ, ರೈಲ್ವೇ ಲ್ದಾಣ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರೆಯಲಿದೆ ಇದುವರೆಗೂ ಶೇ.90 ರಷ್ಟು ಸ್ವಚ್ಚತೆ ಪೂರ್ಣಗೊಂಡಿದ್ದು, ನಗರದ ಸೌಂದರ್ಯ ಕಾಪಾಡಲು ಬಿಬಿಎಂಪಿ ನಿರಂತರವಾಗಿ ಶ್ರಮಿಸಲಿದೆ.
'ಬ್ಯಾಂಡಿಕೂಟ್' ಹೇಗೆ ಕಾರ್ಯ ನಿರ್ವಹಿಸಲಿದೆ?
'ಬ್ಯಾಂಡಿಕೂಟ್' ರೋಬೋಟ್ ಯಂತ್ರವು ಮುಚ್ಚಿಹೋಗಿರುವ ಚರಂಡಿಗಳು ಮತ್ತುಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸುವಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದೇ ಹೇಳಬಹುದು. ಕೇರಳ ಮೂಲದ ಪ್ರಮುಖ ಪ್ರಶಸ್ತಿ ವಿಜೇತ ಸ್ಟಾರ್ಟ್ ಅಪ್ ಆಗಿರುವ ಜೆನ್ ರೋಬೋಟಿಕ್ ಇನ್ನೋವೇಶನ್ಸ್, 'ಬ್ಯಾಂಡಿಕೂಟ್ ರೋಬೋಟ್ ಅನ್ನು ಆವಿಷ್ಕಾರಗೊಳಿಸಿದೆ. ದೇಶದ ವಿವಿಧ ಪಾಲಿಕೆಗಳು ಈ ಸಂಸ್ಥೆಯಿಂದ ರೋಬೋಟ್ ಗಳನ್ನು ಖರೀದಿಸಿದೆ.
ಬ್ಯಾಂಡಿಕೂಟ್ 50 ಕೆಜಿ ತೂಗುತ್ತದೆ. ರೋಬೋಟಿಕ್ ಸ್ಕ್ಯಾವೆಂಜರ್ ಅನ್ನು ಸುಗಮವಾಗಿಸಾಗಿಸಲು ನಾಲ್ಕು ರೋಬೋಟಿಕ್ ಕಾಲುಗಳನ್ನು ಹೊಂದಿದೆ. ಇದು 360-ಡಿಗ್ರಿ ಚಲನೆಯನ್ನು ಹೊಂದಿರುವ ರೋಬೋಟಿಕ್ ತೋಳನ್ನು ಹೊಂದಿದ್ದು, ಇದು ಮ್ಯಾನ್‌ಹೋಲ್ ಮೂಲೆ ಮೂಲೆಗಳಿಂದ ಘನ ತ್ಯಾಜ್ಯವನ್ನು ಹೊರತೆಗೆದು ಬಕೆಟ್‌ನಲ್ಲಿ ಸಂಗ್ರಹಿಸುತ್ತದೆ.
'ಬ್ಯಾಂಡಿಕೂಟ್ ಬೆಲೆ ಎಷ್ಟು?
ಬ್ಯಾಂಡಿಕೂಟ್ ಗಳ ಬೆಲೆ ರೂ.15 ಲಕ್ಷ ದಿಂದ ರೂ. 45 ಲಕ್ಷ ವರೆಗೆ ಸಾಮರ್ಥ್ಯದ ಮೇಲೆ ನಿಗದಿಯಾಗಿದೆ. ಒಂದು ಬೃಹತ್ ಮತ್ತೊಂದು ಮಿನಿ ಆವೃತ್ತಿಯಲ್ಲಿ ಲಭ್ಯವಿದೆ. ಬ್ಯಾಂಡಿಕೂಟ್ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸಲಿದೆ. ಎರಡು ಲಿಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು ವೇಗವಾಗಿ ಅಂದರೆ 15 ನಿಮಿಷಗಳಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ. ಕನಿಷ್ಠ 15 ನಿಮಿಷಗಳ ಚಾರ್ಜಿಂಗ್ ಮಾಡಿದರೆ ಸುಮಾರು 3 ಗಂಟೆ ಕಾಲ ಕಾರ್ಯನಿರ್ವಹಿಸಬಹುದು. ಬ್ಯಾಟರಿ ಜತೆಗೆ ಸೌರಶಕ್ತಿಯೊಂದಿಗೂ ಕಾರ್ಯ ನಿರ್ವಹಿಸಲಿದೆ. ಇದನ್ನು 24/7 ಬಳಸಬಹುದಾಗಿದೆ.
ವರದಿ: ಎಚ್.ಮಾರುತಿ,ಬೆಂಗಳೂರು