Bangalore power cut: ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ನವೆಂಬರ್ 27, 28ರಂದು ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಕರೆಂಟ್ ಇರೋಲ್ಲ
Bangalore Power Cut: ಬೆಂಗಳೂರು ನಗರದ ಹಲವು ಭಾಗಗಳಲ್ಲಿ 2024 ನವೆಂಬರ್ 27 ಮತ್ತು 28ರ ಬುಧವಾರ ಹಾಗೂ ಗುರುವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಲೀಲಾ ವೆಂಚ್ಯೂರ್ ಸ್ಟೇಷನ್ ನ ಈ ಕೆಳಕಂಡ ಪ್ರದೇಶಗಳಲ್ಲಿ ಬುಧವಾರ (27.11.2024) ಮತ್ತು ಗುರುವಾರ (28.11.2024) ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ಕಡಿತದ ವೇಳೆ ಜನತೆ ಸಹಕರಿಸಬೇಕು ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಮನವಿ ಮಾಡಿದ್ಧಾರೆ.
ಏರ್ ರ್ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯ ರಸ್ತೆ, ಎಚ್ಎಎಲ್ 2ನೇ ಹಂತ, ಕಾಲ್ಪನ್ ಟವರ್ಸ್, ಎನ್ಎಎಲ್ ಕಾಂಪೌಂಡ್, ಕೋಡಿಹಳ್ಳಿ, ರಾಮಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿ, ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17,18ನೇ ಮತ್ತು 19ನೇ ಅಡಿ ಮುಖ್ಯ ರಸಸ್ತೆ, ಸರ್ವೀಸ್ ರಸ್ತೆ100, 13ನೇ ಎಸ್, 12ನೇ ಮುಖ್ಯ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೈನ್ಸ್ ಕಾಲೋನಿ, 80 ಅಡಿ ರಸ್ತೆ, 11ಮುಖ್ಯ ರಸ್ತೆ, ಹಳೆ ತಪ್ಪಸಂದ್ರ, ಹೊಸ ತಪ್ಪಸಂದ್ರ ಭಾಗದಲ್ಲೂ ವಿದ್ಯುತ್ ವ್ಯತ್ಯಯ ಆಗಲಿದೆ.
ಎಂ.ಜಿ.ರಸ್ತೆ, ಚರ್ಚರಸ್ತೆ, ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರ್ಬಾ ರಸ್ತೆ, ವಾಲ್ಪನ್ ರಸ್ತೆ, ಡಿಕನ್ಸನ್ ರಸ್ತೆ, ಆಶೋಕ ನಗರ, ಪ್ರೈಮ್ ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್, ಎಚ್ಎಎಲ್ 3ನೇ ಹಂತ, ಹೊಸ ತಿಪ್ಪಸಂದ್ರ ಮುಖ್ಯ ರಸ್ತೆಯಲ್ಲೂ ವಿದ್ಯುತ್ ಇರೋಲ್ಲ.
ಸೀತಪನಹಳ್ಳಿ ಕಾಲೋನಿ, ಎಡಿಇ ಕಾಂಪೌಂಡ್, ಬಿಇಎಂಎಲ್ ಔ, ಗಣೇಶ ದೇವಸ್ಥಾನ, ಪ್ರಿಸ್ಟಿನ್ ಪಾರ್ಕ್, ಎಚ್ ಎ ಎಲ್ 2ನೇ ಹಂತ, ಡಿಫೈನ್ಸ್ ಕಾಲೋನಿ, ಮೋಟ್ಟಪನಪಾಳ್ಯ, ಟಪ್ಪಾರೆಡ್ಡಿ ಪಾಳ್ಯ ಕ್ವಾರ್ಟರ್ಸ್, ಇಎಸ್ಐ ಆಸ್ಪತ್ರೆ , ದೂರವಾಣಿ ಯಕ್ಚೇಂಜ್ ಪ್ರದೇಶ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಪೂಜಾ ಅಪಾರ್ರ್ಟ್ ಮೆಂಟ್ ಹಳೆ ತಿಪ್ಪಸಂದ್ರ, 6ನೇ ಮುಖ್ಯ, ಹುಲ್ಲೇರಿ, ಜಿ.ಜಿ. ರಸ್ತೆ 9ನೇ ಮತ್ತು 4ನೇ ಮುಖ್ಯ ಎಚ್ಎಎಲ್ 3ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವರದಿ:ಎಚ್.ಮಾರುತಿ, ಬೆಂಗಳೂರು