Bangalore Power cut: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Power Cut: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ

Bangalore Power cut: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ

Bangalore Power cut: ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 15ರ ಶನಿವಾರ ಹಾಗೂ ಫೆಬ್ರವರಿ 16ರ ಭಾನುವಾರ ವಿದ್ಯುತ್‌ ನಿಲುಗಡೆಯಾಗಲಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರು ನಗರದ ವಿವಿಧೆಡೆ ಶನಿವಾರ, ಭಾನುವಾರ ವಿದ್ಯುತ್‌ ವ್ಯತ್ಯಯವಾಗಲಿದೆ.
ಬೆಂಗಳೂರು ನಗರದ ವಿವಿಧೆಡೆ ಶನಿವಾರ, ಭಾನುವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

Bangalore Power cut:ಬೆಂಗಳೂರು ವಿವಿಧ ಬಡಾವಣೆಯಲ್ಲಿ ಎರಡು ದಿನಗಳ ಕಾಲ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ತಿಳಿಸಿದೆ. 2025ರ ಫೆಬ್ರವರಿ 15 (ಶನಿವಾರ) ರಂದು ಬೆಳಿಗ್ಗೆ 09:00 ಗಂಟೆಯಿಂದ 2025ರ ಫೆಬ್ರವರಿ 16ರ (ರವಿವಾರ) ಸಂಜೆ 5:00 ಗಂಟೆಯವರೆಗೆ ‘66/11ಕೆ.ವಿ ಬಾಗಮನೆ ಡಬ್ಲೂ. ಟಿ. ಸಿ’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರು ನಗರದ ಹಲವು ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಈ ಭಾಗದ ವಿದ್ಯುತ್‌ ಗ್ರಾಹಕರು ಸಹಕಾರ ನೀಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಬಾಗಮನೆ, ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಲ್ಯಾಬ್, ಬಾಗಮನೆ ಡಬ್ಲ್ಯೂಟಿಸಿ, ಬಾಗಮನೆ ಎಮರಾಲ್ಡ್ ಬಿಲ್ಡಿಂಗ್, ಬಾಗಮನೆ ಎಡಬ್ಲ್ಯುಟಿಸಿ, ಬಾಗಮನೆ ಅಕ್ವಾ ಮರಿನ್ ಪೆರಿಡಾಟ್ ಬಿಲ್ಡಿಂಗ್, ವೆಂಕಟೇಶ್ವರನಗರ, ವೆಂಕಟೇಶ್ವರಪುರ ಲೇಔಟ್, ಕನ್ಯಾ ಕಟ್ಟಡ, ದೊಡ್ಡನೆಕ್ಕುಂಡಿ ರೈಲ್ವೇ ಬ್ರಿಡ್ಜ್, ಕರೀನಾ ಪೂರ್ವ ಕಟ್ಟಡ, ಗಾರ್ನೆಟ್ ಕಟ್ಟಡ, ಡಬ್ಲುಟಿಸಿ ಬಾಗಮನೆ ಕರೀನಾ ಪಶ್ಚಿಮ, ಡಬ್ಲುಟಿಸಿ ಬಾಗಮನೆ ಯುಟಿಲಿಟಿ ಬ್ಲಾಕ್, ಡಬ್ಲುಟಿಸಿ ಬಾಗಮನೆ ರಿಯೋ ಆಫೀಸ್ ಬ್ಲಾಕ್ ಪೂರ್ವ ಪಾರ್ಕ್ ವಿಲ್ಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್‌ ರಿಂಗ್ ರೋಡ್, ರಾಮಕೃಷ್ಣ ರೆಡ್ಡಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯವಾಗಲಿದೆ.

ಶನಿವಾರ ವ್ಯತ್ಯಯ ಎಲ್ಲೆಲ್ಲಿ

ಫೆಬ್ರವರಿ 15ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆಬಸವನಗುಡಿ, ಬನಶಂಕರಿ 3ನೇ ಹಂತ, ನಿಮ್ಹಾನ್ಸ್, ಕಿದ್ವಾಯ್, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂದಿರಾಗಾಂಧಿ, ಜಯನಗರ-1ನೇ, 2ನೇ, 3ನೇ, 4ನೇ, 9ನೇ ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್‌ನಲ್ಲೂ ವಿದ್ಯುತ್‌ ವ್ಯತ್ಯಯ ಆಗಲಿದೆ.

ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ವೃತ್ತ, ವಿದ್ಯಾಪೀಠ ವೃತ್ತ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಅವಲಹಳ್ಳಿ, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ ಎಲೆಕ್ಟ್ರಾನಿಕ್ಸ್‌ ಸಿಟಿ ಫೇಸ್ -2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್‌ ಮಹಿಂದ್ರ, ಇ.ಹೆಚ್.ಟಿ.ಟಾಟಾ ಬಿ.ಪಿ.ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಇರೋಲ್ಲ.

ಶನಿವಾರ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾಡುಗೋಡಿ, ಶಂಕ್ರಪುರ, ಸಿದ್ದಾರ್ಥ ಲೇಔಟ್, ಸಾಯಿ ಆಶ್ರಮ, ಎಚ್‌ಡಿಎಫ್‌ಸಿ ಬ್ಯಾಂಕ್, ಅಲಂಬಿಕ್ ಅಪಾರ್ಟ್‌ಮೆಂಟ್ , ಮಾರ್ವೆಲ್ ಅಪಾರ್ಟ್‌ಮೆಂಟ್ , ಮಾರ್ವೆಲ್ ಡಿಐಎಂಐಟಿ. ಲೇಔಟ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಳತ್ತೂರು, ಅಯಪ್ಪ ದೇವಸ್ಥಾನ, ಕುಂಬೆನ ಅಗ್ರಹಾರ, ಪಟಾಲಮ್ಮ ಲೇಔಟ್, ವಿಎಸ್‌ಆರ್ ಲೇಔಟ್, ಕಾಡುಗೋಡಿ, ಚನ್ನಸಂದ್ರ, ಎಫ್‌ಸಿಐ ಗೋಡೌನ್, ಸಫಲ್, ವಿಎಸ್‌ಆರ್ ಲೇಔಟ್, ದಿನ್ನೂರು ಪೊಲೀಸ್ ಠಾಣೆ, ಮೈತ್ರಿ ಲೇಔಟ್‌ನಲ್ಲೂ ಅಡಚಣೆಯಾಗಲಿದೆ.

ಭೈರಪ್ಪ ಲೇಔಟ್, ವಿನಾಯಕ ಲೇಔಟ್. ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಪ್ರೆಸ್ಟೀಜ್ ಮೇಬೆರಿ ಅಪಾರ್ಟ್‌ಮೆಂಟ್, ಆದರ್ಶ ಫಾರ್ಮ್ ಮೆಡೋಸ್, ಬೋರ್‌ವೆಲ್ ರಸ್ತೆ, ಬ್ರೋಕ್ ಸ್ಟ್ರೀಟ್, ಔಟರ್ ಸ್ಟ್ರೀಟ್ ಹಗದೂರು, ವಿನಾಯಕನಗರ, ಬ್ರಿಗೇಡ್ ಕಾಸ್ಪೊಲೀಸ್ ಅಪಾರ್ಟ್‌ಮೆಂಟ್, ಪ್ರಶಾಂತ್ ಲೇಔಟ್, ರಸ್ತೆ, ಒಳ ವೃತ್ತ, ಕರುಮಾರಿಯಮ್ಮ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಸರ್ಕಾರಿ ಪಾಲಿಟೆಕ್ನಿಕ್, ಚನ್ನಸಂದ್ರ ಮುಖ್ಯ ರಸ್ತೆ ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೊಮ್ಮರ ಪಾಳ್ಯ, ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಇಸಿಸಿ ರಸ್ತೆ,
ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯರಸ್ತೆ, ನಾಗರಾಜ್ ಲೇಔಟ್, ದೊಬರಪಾಳ್ಯ, ಇಮ್ಮಡಿಹಳ್ಳಿ, ಸುಮಧುರ ಅಪಾರ್ಟ್‌ಮೆಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಮಸ್ಯೆಯಾಗಲಿದೆ.

ವರದಿ: ಎಚ್‌.ಮಾರುತಿ.ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner