ಬೆಂಗಳೂರಿನಲ್ಲಿ ಗರ್ಭಿಣಿಯರಲ್ಲಿ ಹೆಚ್ಚಿದ ಶೀತ ಜ್ವರ ಪ್ರಕರಣ; ಆಸ್ಪತ್ರೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಬೆಂಗಳೂರಿನಲ್ಲಿ ಮೂರು ತಿಂಗಳಿನಿಂದ ಚಳಿ ಹಾಗೂ ಗಾಳಿಯ ಪರಿಣಾಮ ಗರ್ಭಿಣಿಯರ ಮೇಲೂ ಆಗಿದೆ. ಶೀತ ಜ್ವರದಿಂದ ಬಳಲುತ್ತಿರುವ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸುತ್ತಿರುವುದು ಕಂಡು ಬಂದಿದೆ.
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಶೀತ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮೂರು ತಿಂಗಳಲ್ಲಿ ಈ ಪ್ರಕರಣ ಹೆಚ್ಚಿದ್ದರೂ, ಡಿಸೆಂಬರ್ ನಂತರ ಕೊಂಚ ಹೆಚ್ಚಳವೇ ಆಗಿದೆ. ಅದರಲ್ಲೂ ಗರ್ಭಿಣಿಯರು ಹೆಚ್ಚು ಸಂಖ್ಯೆಯಲ್ಲಿ ಶೀತ ಜ್ವರದಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಶೀತ ಜ್ವರದ ಕಾರಣದಿಂದಲೇ ನಿತ್ಯ ಹೆಚ್ಚಿನ ಪ್ರಕರಣಗಳು ಬರುತ್ತಿವೆ. ಗರ್ಭಿಣಿಯರು ಉಸಿರಾಟದ ಸಮಸ್ಯೆಯನ್ನು ಎದುರಿಸಿಕೊಂಡು ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳು ಗರ್ಭಿಣಿಯರಲ್ಲಿ ಜ್ವರ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಾಣುತ್ತಿರುವುದು ಕಂಡು ಬಂದಿದ್ದು, ಆರು ವಾರಗಳಲ್ಲಿ ಪ್ರತಿದಿನ ಕನಿಷ್ಠ ಇಬ್ಬರು ಗರ್ಭಿಣಿ ತಾಯಂದಿರು ಶೀತ ಜ್ವರ ರೋಗಲಕ್ಷಣಗಳಿಂದ ಬಳಲುತ್ತಿರುವುದು, ಆಸ್ಪತ್ರೆಗೆ ಆಗಮಿಸುತ್ತಿರುವುದು ಕಂಡು ಬರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಿನಿಂದ ಚಳಿ ಶುರುವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ಕುಸಿದು ಚಳಿ ಪ್ರಮಾಣದಲ್ಲಿ ಭಾರೀ ಏರಿಳಿತವೇ ಕಂಡುಬಂದಿದೆ. ಡಿಸೆಂಬರ್‌ನಲ್ಲಿಯೂ ಚಳಿ ಅಧಿಕವಾಗಿತ್ತು. ಈಗ ಎರಡು ದಿನದಿಂದ ಚಳಿ ಪ್ರಮಾಣದಲ್ಲಿ ಏರಿಕೆಯಾಗಿ ಶೀತಗಾಳಿಯೂ ಉಂಟಾಗಿ ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಚಳಿ ಹಾಗೂ ಶೀತಗಾಳಿಯ ಪರಿಣಾಮವಾಗುತ್ತಿದೆ. ಚಳಿಯಿಂದ ಶೀತ ಜ್ವರದ ಪ್ರಮಾಣ ಹೆಚ್ಚಾಗಿದೆ ಎಂದು ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಾರಣವಾದರೂ ಏನು?
ಚಳಿಗಾಲ ಶುರುವಾದಾಗಿನಿಂದಲೂ ಗರ್ಭಿಣಿಯರು ಶೀತಜ್ವರದಿಂದ ಬಳಲುತ್ತಿರುವ, ಚಿಕಿತ್ಸೆಗೆ ಬರುತ್ತಿದ್ದಾರೆ. ಈಗಂತೂ ಶೀತಗಾಳಿಯಿಂದ ಜ್ವರದ ಪ್ರಮಾಣ ಹೆಚ್ಚಾಗಿ ಉಸಿರಾಟದ ಸಮಸ್ಯೆಯಿಂದಲೂ ಹಲವು ಗರ್ಭಿಣಿಯರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಸದ್ಯ ಪ್ರತಿದಿನ, ನಾವು ನಮ್ಮ ಒಪಿಡಿಗಳಲ್ಲಿ ಕನಿಷ್ಠ 2 ಗರ್ಭಿಣಿಯರನ್ನು ನೋಡುತ್ತಿದ್ದೇವೆ. ಶೀತ ಜ್ವರದ ಜತೆಗೆ ಉಸಿರಾಟದ ಸಮಸ್ಯೆಯಿಂದಲೂ ಹಲವರು ಬಳಲುತ್ತಿರುತ್ತಾರೆ. ಇಂತಹವರು ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರೆ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದು ಎಂದು ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಪ್ರಿಯಾ ಎಸ್ಪಿ ಪಾಟೀಲ್ ಹೇಳುತ್ತಾರೆ.
ವೈದ್ಯರ ಸಲಹೆ ಹೇಗಿದೆ
ಗರ್ಭಿಣಿ ಮತ್ತು ಪ್ರಸವಾನಂತರದ ಮಹಿಳೆಯರು, ವಿಶೇಷವಾಗಿ ಹೆರಿಗೆಯ ನಂತರದ ಎರಡು ವಾರಗಳಲ್ಲಿ, ಗರ್ಭಾವಸ್ಥೆಯಲ್ಲಿ ಗಮನಾರ್ಹವಾದ ಪ್ರತಿರಕ್ಷಣಾ ವ್ಯವಸ್ಥೆಯ ಬದಲಾವಣೆಗಳಿಂದಾಗಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಅದೂ ಶೀತಜ್ವರದಿಂದ ಉಸಿರಾಟದ ಸಮಸ್ಯೆಯನ್ನು ತಂದೊಡ್ಡಬಹುದು. ಗರ್ಭಾವಸ್ಥೆಯು ಮುಂದುವರೆದಂತೆ, ರೋಗಲಕ್ಷಣದ ತೀವ್ರತೆಯು ಹೆಚ್ಚಾಗುತ್ತದೆ, ನಂತರದ ಹಂತಗಳಲ್ಲಿ ಮಹಿಳೆಯರನ್ನು ಇನ್ನಷ್ಟು ಹೆಚ್ಚಿನ ಅಪಾಯಕ್ಕೆ ದೂಡಬಹುದು. ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಅಥವಾ ಎಚ್‌ಐವಿ ಹೊಂದಿರುವ ಮಹಿಳೆಯರು ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆ. ಅಂತವರು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಮಾತ್ರವಲ್ಲ, ಆಗ ಕಾಣಿಸಿಕೊಳ್ಳುವ ನಿರ್ಜಲೀಕರಣ, ಉಸಿರಾಟದ ತೊಂದರೆ ಮತ್ತು ಅಧಿಕ ಜ್ವರದಂತಹ ತೀವ್ರವಾದ ರೋಗಲಕ್ಷಣಗಳಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ ಎಂದು ಸಲಹೆ ನೀಡುತ್ತಾರೆ.
ನಾವು ವಾರಕ್ಕೆ 10 ಕ್ಕಿಂತ ಹೆಚ್ಚು ಗರ್ಭಿಣಿಯರು ಬರೀ ಶೀತಜ್ವರಕ್ಕೆ ಒಳಗಾಗಿ ಆಸ್ಪತ್ರೆಗೆ ಆಗಮಿಸುವುದನ್ನು ನೋಡುತ್ತಿದ್ದೇವೆ. ಹವಾಮಾನದ ಕಾರಣವೂ ಒಂದು ಕಡೆಯಾದರೂ ಗರ್ಭಿಣಿಯರು ಈ ಕಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಶೀತಜ್ವರದಿಂದಾಗಿ ಗರ್ಭಾವಸ್ಥೆಯ ಹಾರ್ಮೋನುಗಳು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದು ಉಸಿರಾಡಲು ಕಷ್ಟವಾಗುತ್ತದೆ ಎನ್ನುತ್ತಾರೆ ರೊಬೊಟಿಕ್ ಸರ್ಜನ್ ಡಾ ಉಷಾ ಬಿ ಆರ್.
ಹೀಗಿರಲಿ ನಿತ್ಯ ಜೀವನ ಕ್ರಮ
ರಜಾದಿನದ ಚಟುವಟಿಕೆಗಳಾದ ವಲಸೆ, ಕಿಕ್ಕಿರಿದು ತುಂಬಿದ ಜನಸಂದಣಿಯೊಂದಿಗಿನ ಕಾರ್ಯಕ್ರಮಗಳು, ಪ್ರಯಾಣವು ವೈರಸ್‌ಗಳ ಹರಡುವಿಕೆಗೆ ದಾರಿ ಮಾಡಿಕೊಡಬಬಹುದು. ತಮ್ಮ ಊರುಗಳಿಗೆ ಭೇಟಿ ನೀಡಿದ ನಂತರ ನಗರಕ್ಕೆ ಹಿಂದಿರುಗುವ ಜನರು ತಿಳಿಯದೇ ಸೋಂಕುಗಳ ಉಲ್ಬಣಕ್ಕೆ ಕಾರಣರಾಗಿದ್ದಾರೆ. ಹವಾಮಾನದ ಪ್ರಭಾವವು ಕೆಲವು ರೋಗಕಾರಕಗಳ ಹೆಚ್ಚುತ್ತಿರುವ ಹರಡುವಿಕೆಯಿಂದ ಕೂಡಿದೆ. ಮುಖಗವಸುಗಳನ್ನು ಧರಿಸುವುದು, ಕಿಕ್ಕಿರಿದ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವುದು. ಆದಷ್ಟು ಬೆಚ್ಚಗಿರುವುದು ಇದಕ್ಕೆ ಪರಿಹಾರ ಎನ್ನುವುದು ವೈದ್ಯರು ನೀಡುವ ಸಲಹೆ.