SBI Clerk Prelims: ಎಸ್‌ಬಿಐ ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶ ಯಾವಾಗ; ಸ್ಕೋರ್‌ಕಾರ್ಡ್, ಕಟ್‌ಆಫ್ ನೋಡುವುದು ಹೇಗೆ; ಇಲ್ಲಿದೆ ವಿವರ
SBI Clerk Prelims: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ಪ್ರಿಲಿಮ್ಸ್ 2025ರ ಫಲಿತಾಂಶವನ್ನು ಮಾರ್ಚ್ 31ರ ಒಳಗೆ ಪ್ರಕಟಿಸುವ ನಿರೀಕ್ಷೆ ಇದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ. ಸ್ಕೋರ್‌ಕಾರ್ಡ್, ಕಟ್‌ಆಫ್ ಇತ್ಯಾದಿ ವಿವರಗಳ ಮಾಹಿತಿ ಇಲ್ಲಿದೆ.

SBI Clerk Prelims: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೀಘ್ರದಲ್ಲೇ ಕ್ಲರ್ಕ್ ಪ್ರಿಲಿಮ್ಸ್ 2025 ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ರಾಜ್ಯವಾರು ಹಾಗೂ ವರ್ಗವಾರು ಅಂಕಗಳೊಂದಿಗೆ ಮಾರ್ಚ್ 31ರ ಒಳಗೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಈ ನೇಮಕಾತಿ ಅಭಿಯಾನವು ಭಾರತದ ವಿವಿಧ ಶಾಖೆಗಳಲ್ಲಿ 8,773 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ.
SBI ಕ್ಲರ್ಕ್ ಪರೀಕ್ಷೆ 2025
ಎಸ್‌ಬಿಐ ಇತ್ತೀಚೆಗೆ ಕ್ಲರ್ಕ್/ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆನ್‌ಲೈನ್ ಪರೀಕ್ಷೆಯನ್ನು ನಡೆಸಿತ್ತು. ಪೂರ್ವಭಾವಿ ಪರೀಕ್ಷೆಗಳು ಫೆಬ್ರವರಿ 22, 27, 28 ಮತ್ತು ಮಾರ್ಚ್ 1 ರಂದು ದೇಶದಾದ್ಯಂತ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದವು. ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣರಾಗಿ ಮೇನ್ಸ್‌ಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯ ಅಧಿಕೃತ ದಿನಾಂಕ ಇನ್ನೂ ನಿಗದಿಯಾಗಿಲ್ಲ.
SBI ಕ್ಲರ್ಕ್ ಪ್ರಿಲಿಮ್ಸ್ 2025ರ ಫಲಿತಾಂಶ ನೋಡುವುದು ಹೇಗೆ
ಫಲಿತಾಂಶ ಪ್ರಕಟವಾದ ನಂತರ ಅಭ್ಯರ್ಥಿಗಳು ಅಂಕ ಪರಿಶೀಲನೆಗೆ ಈ ಕೆಲವು ಹಂತಗಳನ್ನು ಅನುಸರಿಸಬಹುದು.
- ಮೊದಲು ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ.
- ಅಲ್ಲಿ Careers ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- 'ಜೂನಿಯರ್ ಅಸೋಸಿಯೇಟ್ಸ್ ನೇಮಕಾತಿ (ಗ್ರಾಹಕ ಬೆಂಬಲ ಮತ್ತು ಮಾರಾಟ) ಫಲಿತಾಂಶ ಈ ವಿಭಾಗವನ್ನು ಗುರುತಿಸಿ.
- ನಂತರ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯವಿರುವ ವಿವರಗಳನ್ನು ನಮೂದಿಸಿ.
- ನಂತರ ರಿಸಲ್ಟ್ ಪ್ರತಿಯನ್ನು ಭವಿಷ್ಯಕ್ಕಾಗಿ ಪ್ರಿಂಟ್ ಔಟ್ ತೆಗೆದು ಇರಿಸಿಕೊಳ್ಳಿ.
SBI ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ 2025: ಪ್ರಿಲಿಮ್ಸ್ ನಂತರದ ಮುಂದಿನ ಹಂತಗಳು
ಪ್ರಿಲಿಮ್ಸ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆ ಬರೆಯಬೇಕಾಗುತ್ತದೆ. ಸಾಮಾನ್ಯ ಅರಿವು, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ವಿಷಯಗಳನ್ನು ಒಳಗೊಂಡಿರುತ್ತದೆ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳನ್ನು ಹೊಂದಿರುತ್ತದೆ ಮತ್ತು 2 ಗಂಟೆ 40 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅಭ್ಯರ್ಥಿಗಳು ಅಂತಿಮ ಆಯ್ಕೆಗೆ ಮೊದಲು ಸ್ಥಳೀಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

ವಿಭಾಗ