ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ, ಅರ್ಜಿ ಸಲ್ಲಿಸುವುದಕ್ಕೆ 5 ಸರಳ ಹಂತಗಳಿವು

ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ, ಅರ್ಜಿ ಸಲ್ಲಿಸುವುದಕ್ಕೆ 5 ಸರಳ ಹಂತಗಳಿವು

ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಚೇರಿ ಸಹಾಯಕರು (ವಿವಿಧೋದ್ಧೇಶ) 200 ಹುದ್ದೆಗಳು, ಆಫೀಸರ್‌ ಸ್ಕೇಲ್ 1ರ 386 ಹುದ್ದೆಗಳು ಸೇರಿ ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ಇದು ಪದವೀಧರರಿಗೆ ಉದ್ಯೋಗಾವಕಾಶವಾಗಿದ್ದು, ವಿದ್ಯಾರ್ಹತೆ ಮತ್ತು ಇತರೆ ವಿವರ ಇಲ್ಲಿದೆ.

ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ. ಅರ್ಜಿ ಸಲ್ಲಿಕೆ ಶುರುವಾಗಿದೆ.
ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ. ಅರ್ಜಿ ಸಲ್ಲಿಕೆ ಶುರುವಾಗಿದೆ.

ಬೆಂಗಳೂರು: ಕರ್ನಾಟಕದ ಎರಡು ಪ್ರಮುಖ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 586 ಹುದ್ದೆಗಳ ಭರ್ತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌- Institute of Banking Personnel Selection) ಯು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯಲ್ಲಿ ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಶ್ರೇಣಿಯ 9900ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ವಿವರಗಳಿವೆ.

ಟ್ರೆಂಡಿಂಗ್​ ಸುದ್ದಿ

ಈ ಹುದ್ದೆಗಳ ಪೈಕಿ ಕಚೇರಿ ಸಹಾಯಕ (ವಿವಿಧೋದ್ದೇಶ), ಆಫೀಸರ್ ಸ್ಕೇಲ್ I, ಆಫೀಸರ್ ಸ್ಕೇಲ್ II, ಆಫೀಸರ್ ಸ್ಕೇಲ್ III ಹುದ್ದೆಗಳಿವೆ. ಈ ಸಾಮಾನ್ಯ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬ್ಯಾಂಕ್‌ ಹುದ್ದೆ ಪಡೆಯಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಐಬಿಪಿಎಸ್‌ ಅರ್ಜಿ ಆಹ್ವಾನಿಸಿದೆ. ಆರ್‌ಆರ್‌ಬಿಗಳಲ್ಲಿರುವ ಈ ಹುದ್ದೆಗಳಿಗೆ ಆಗಸ್ಟ್‌ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಪ್ರಿಲಿಮ್ಸ್‌, ಮೇನ್ಸ್‌ ಪರೀಕ್ಷೆ, ಸ್ಕಿಲ್‌ ಟೆಸ್ಟ್‌, ಸಂದರ್ಶನ ಪ್ರಕ್ರಿಯೆಗಳು ನಡೆಯಲಿವೆ. ಅರ್ಜಿ ಸಲ್ಲಿಕೆಗೆ ಇಂದು (ಜೂನ್ 7) ಶುರುವಾಗಿದ್ದು, ಜೂನ್ 27 ಕೊನೆಯ ದಿನಾಂಕವಾಗಿದೆ.

ಕರ್ನಾಟಕದಲ್ಲಿ ಗ್ರಾಮೀಣ ಬ್ಯಾಂಕುಗಳಲ್ಲಿ 586 ಹುದ್ದೆ, ಪದವೀಧರರಿಗೆ ಉದ್ಯೋಗಾವಕಾಶ

ಐಬಿಪಿಎಸ್‌ ಅಧಿಸೂಚನೆಯಲ್ಲಿರುವ ಹುದ್ದೆಗಳ ಪೈಕಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕಚೇರಿ ಸಹಾಯಕರು (ವಿವಿಧೋದ್ಧೇಶ) 200 ಹುದ್ದೆಗಳು, ಆಫೀಸರ್‌ ಸ್ಕೇಲ್ 1ರ 386 ಹುದ್ದೆಗಳನ್ನು ಭರ್ತಿ ಮಾಡಲು ಐಬಿಪಿಎಸ್‌ ಪರೀಕ್ಷೆ ಮತ್ತು ಸಂದರ್ಶನಗಳನ್ನು ನಡೆಸಲಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್

1) ಕಚೇರಿ ಸಹಾಯಕ (ವಿವಿಧೋದ್ದೇಶ) ಒಟ್ಟು ಹುದ್ದೆ - 100

ಎಸ್‌ಸಿ ಮೀಸಲು ಹುದ್ದೆ - 16

ಎಸ್‌ಟಿ ಮೀಸಲು ಹುದ್ದೆ - 7

ಒಬಿಸಿ ಮೀಸಲು ಹುದ್ದೆ - 27

ಇಡಬ್ಲ್ಯುಎಸ್ ಮೀಸಲು ಹುದ್ದೆ - 10

ಜನರಲ್ ಕೆಟಗರಿ - 40

2) ಆಫೀಸರ್ ಸ್ಕೇಲ್ - I ಒಟ್ಟು ಹುದ್ದೆ 286

ಎಸ್‌ಸಿ ಮೀಸಲು ಹುದ್ದೆ - 43

ಎಸ್‌ಟಿ ಮೀಸಲು ಹುದ್ದೆ - 21

ಒಬಿಸಿ ಮೀಸಲು ಹುದ್ದೆ - 77

ಇಡಬ್ಲ್ಯುಎಸ್ ಮೀಸಲು ಹುದ್ದೆ - 29

ಜನರಲ್ ಕೆಟಗರಿ - 116

ವಿದ್ಯಾರ್ಹತೆ ವಿವರ

ಕಚೇರಿ ಸಹಾಯಕ (‌ವಿವಿಧೋದ್ದೇಶ) : ಪದವಿ

ಆಫೀಸರ್ ಸ್ಕೇಲ್ I (AM) : ಪದವಿ

ವಯೋಮಿತಿ

ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ

ಕಚೇರಿ ಸಹಾಯಕ (ವಿವಿಧೋದ್ದೇಶ) : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

1) ಕಚೇರಿ ಸಹಾಯಕ (ವಿವಿಧೋದ್ದೇಶ) ಒಟ್ಟು ಹುದ್ದೆ- 100

ಎಸ್‌ಸಿ ಮೀಸಲು ಹುದ್ದೆ - 16

ಎಸ್‌ಟಿ ಮೀಸಲು ಹುದ್ದೆ - 7

ಒಬಿಸಿ ಮೀಸಲು ಹುದ್ದೆ - 27

ಇಡಬ್ಲ್ಯುಎಸ್ ಮೀಸಲು ಹುದ್ದೆ - 10

ಜನರಲ್ ಕೆಟಗರಿ - 40

2) ಆಫೀಸರ್ ಸ್ಕೇಲ್ - I ಒಟ್ಟು ಹುದ್ದೆ 100

ಎಸ್‌ಸಿ ಮೀಸಲು ಹುದ್ದೆ - 15

ಎಸ್‌ಟಿ ಮೀಸಲು ಹುದ್ದೆ - 07

ಒಬಿಸಿ ಮೀಸಲು ಹುದ್ದೆ - 27

ಇಡಬ್ಲ್ಯುಎಸ್ ಮೀಸಲು ಹುದ್ದೆ - 10

ಜನರಲ್ ಕೆಟಗರಿ - 41

ವಿದ್ಯಾರ್ಹತೆ ವಿವರ

ಕಚೇರಿ ಸಹಾಯಕ (‌ವಿವಿಧೋದ್ದೇಶ) : ಪದವಿ

ಆಫೀಸರ್ ಸ್ಕೇಲ್ I (AM) : ಪದವಿ

ಐಬಿಪಿಎಸ್ ನೇಮಕಾತಿ 2024; ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆ ಶುರು ಜೂನ್ 7

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೇ ದಿನ ಜೂನ್ 27

ಪರೀಕ್ಷೆ ಪೂರ್ವಭಾವಿ ತರಬೇತಿ - ಜುಲೈ 22 -27

ಪೂರ್ವಭಾವಿ ಪರೀಕ್ಷೆ - ಆಗಸ್ಟ್‌ (ದಿನಾಂಕ ಪ್ರಕಟವಾಗಿಲ್ಲ)

ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ಫಲಿತಾಂಶ - ಆಗಸ್ಟ್‌ / ಸೆಪ್ಟೆಂಬರ್

ಮುಖ್ಯ ಪರೀಕ್ಷೆ- ಸೆಪ್ಟೆಂಬರ್ / ಅಕ್ಟೋಬರ್

ಮುಖ್ಯ ಪರೀಕ್ಷೆ ಫಲಿತಾಂಶ ಅಕ್ಟೋಬರ್

ಸಂದರ್ಶನ ದಿನಾಂಕ (ಆಫೀಸರ್ ಸ್ಕೇಲ್‌ I, II, III) ನವೆಂಬರ್

ತಾತ್ಕಾಲಿಕ ಪಟ್ಟಿ ಬಿಡುಗಡೆ - 2025ರ ಜನವರಿ

ಕರ್ನಾಟಕದ ಗ್ರಾಮೀಣ ಬ್ಯಾಂಕುಗಳ ಖಾಲಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ

- ಐಬಿಪಿಸ್‌ ಅಧಿಕೃತ ವೆಬ್‌ಸೈಟ್‌ ibps.in ಗೆ ಭೇಟಿ ನೀಡಿ.

- 'CRP FOR RRBs' ಗೆ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ.

- ಅದಾಗಿ ಹೊಸ ವೆಬ್‌ಪುಟ ತೆರೆಯುತ್ತದೆ.

- ಈ ವೆಬ್‌ಪೇಜ್‌ನಲ್ಲಿ 'Click Here To Apply Online For CRP -RRBs Officers (Scale-I, II, III) / Office Assistants (Multipurpost)' ಗೆ ಸಂಬಂಧಿತ ಪ್ರತ್ಯೇಕ ಲಿಂಕ್‌ಗಳನ್ನು ಕ್ಲಿಕ್ ಮಾಡಿ.

- ವಿದ್ಯಾರ್ಹತೆ, ಕಾರ್ಯಾನುಭವಗಳಿಗೆ ಅನುಗುಣವಾಗಿ, ಸೂಕ್ತ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

- ಪ್ರಾಥಮಿಕ ಮಾಹಿತಿಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಅದಾಗಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ - ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024