Bangalore News: ಬೆಂಗಳೂರಿನಲ್ಲಿ ಕನ್ನಡ ಫಲಕ ಹಾಕಿಲ್ಲವೇ, ವಾಣಿಜ್ಯ ಮಳಿಗೆದಾರರಿಗೆ ಫೆಬ್ರವರಿ 1ರಿಂದ ದಂಡ ಬೀಳಲಿದೆ ಹುಷಾರು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಕನ್ನಡ ಫಲಕ ಹಾಕಿಲ್ಲವೇ, ವಾಣಿಜ್ಯ ಮಳಿಗೆದಾರರಿಗೆ ಫೆಬ್ರವರಿ 1ರಿಂದ ದಂಡ ಬೀಳಲಿದೆ ಹುಷಾರು

Bangalore News: ಬೆಂಗಳೂರಿನಲ್ಲಿ ಕನ್ನಡ ಫಲಕ ಹಾಕಿಲ್ಲವೇ, ವಾಣಿಜ್ಯ ಮಳಿಗೆದಾರರಿಗೆ ಫೆಬ್ರವರಿ 1ರಿಂದ ದಂಡ ಬೀಳಲಿದೆ ಹುಷಾರು

ಬೆಂಗಳೂರಿನಲ್ಲಿ ವಾಣಿಜ್ಯ ಮಳಿಗೆಗಳವರು ಅಳವಡಿಸುವ ಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶವಿದ್ದರೂ ಇನ್ನೂ ಪೂರ್ಣಗೊಳಿಸದವರ ವಿರುದ್ದ ದಂಡ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನಲ್ಲಿ ಫಲಕಗಳಲ್ಲಿ ಕನ್ನಡ ಕಡ್ಡಾಯ ಇರದೇ ಇದ್ದರೆ ದಂಡ ಬೀಳಬಹುದು.
ಬೆಂಗಳೂರಿನಲ್ಲಿ ಫಲಕಗಳಲ್ಲಿ ಕನ್ನಡ ಕಡ್ಡಾಯ ಇರದೇ ಇದ್ದರೆ ದಂಡ ಬೀಳಬಹುದು. (Deccan Herald)

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳೂ ಕನ್ನಡ ಇರುವ ನಾಮಫಲಕ ಬಳಸುವುದನ್ನು ಬೃಹತ್‌ ಬೆಂಗಳೂರು ನಗರಪಾಲಿಕೆ ಕಡ್ಡಾಯ ಮಾಡಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಆಗಾಗ ವಿಚಕ್ಷಣೆ ಮಾಡುತ್ತದೆ. ದಿಢೀರ್‌ ದಾಳಿ ಮಾಡಿ ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದೆ. ಹೀಗಿದ್ದರೂ ಬೆಂಗಳೂರಿನ ಹಲವು ಕಡೆಗಳಲ್ಲಿ ವ್ಯಾಪಾರಸ್ಥರು ಫಲಕಗಳಲ್ಲಿ ಕನ್ನಡ ಬಳಸದೇ ಇರುವುದು ಕಂಡು ಬಂದಿದೆ. ಅದರಲ್ಲೂ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಇರಲೇಬೇಕು. ಉಳಿಕೆ ಪ್ರಮಾಣದಲ್ಲಿ ಇತರೆ ಭಾಷೆ ಹಾಕಿಕೊಳ್ಳಲು ಅವಕಾಶವಿದೆ. ಆದರೆ ಕನ್ನಡ ಹಾಕದೇ ಇದ್ದರೆ ಫೆಬ್ರವರಿ 1ರಿಂದಲೇ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಸೂಚನೆಗಳನ್ನು ನೀಡಿರುವುದರಿಂದ ಕೆಲವರು ಕನ್ನಡ ಫಲಕ ತಯಾರಿಸಲು ಮುಗಿ ಬೀಳುವುದು ಕಂಡು ಬಂದಿದೆ.

ಬೆಂಗಳೂರಿನಲ್ಲಿ ಕನ್ನಡವನ್ನು ನಾಮಫಲಕಗಳಲ್ಲಿ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸರ್ಕಾರ ಈ ಹಿಂದೆಯೇ ಆದೇಶ ಮಾಡಿದೆ. ಇದಕ್ಕಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಸೂಚನೆಗಳನ್ನು ನೀಡಿ ಜಾಗೃತಿ ಮೂಡಿಸಿದೆ. ಬೃಹತ್‌ ಬೆಂಗಳೂರು ನಗರ ಪಾಲಿಕೆಯು ವಹಿವಾಟು ಲೈಸೆನ್ಸ್‌ ನವೀಕರಣ ಮಾಡುವುದರಿಂದ ಅವರಿಂದಲೇ ದಂಡ ಪ್ರಯೋಗ ನಡೆದಿದೆ. ಈಗ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸುವ ಕುರಿತು ಚರ್ಚೆ ಮರುಕಳಿಸಿದ್ದು, ಫೆಬ್ರವರಿ 1ರೊಳಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ಟ್ರೇಡ್ ಲೈಸೆನ್ಸ್ ನವೀಕರಿಸಿಕೊಳ್ಳುವಾಗ ಕನ್ನಡ ನಾಮಫಲಕ ಇದೆಯೋ ಇಲ್ಲವೋ ಎನ್ನುವುದನ್ನು ದೃಢೀಕರಿಸಿಕೊಳ್ಳಲಾಗುತ್ತಿದ್ದು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ದೇಶನ ನೀಡಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಟ್ರೇಡ್ ಲೈಸೆನ್ಸ್‌ಗಳನ್ನು ಸಾಮಾನ್ಯವಾಗಿ ಐದು ಹಣಕಾಸು ವರ್ಷಗಳವರೆಗೆ (ಏಪ್ರಿಲ್‌ನಿಂದ ಮಾರ್ಚ್‌ವರೆಗೆ) ನವೀಕರಿಸಲಾಗುತ್ತಿದ್ದರೆ, ನಾಮಫಲಕಗಳಲ್ಲಿ ಸರ್ಕಾರವು ಕಡ್ಡಾಯಗೊಳಿಸಿದ ಶೇಕಡಾ 60 ರಷ್ಟು ಕನ್ನಡ ನಿಯಮವನ್ನು ಅನುಸರಿಸಲು ವಿಫಲವಾದ ವ್ಯವಹಾರಗಳಿಗೆ ಪರವಾನಗಿಗಳನ್ನು ತಡೆಹಿಡಿಯಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

ಬಿಬಿಎಂಪಿಯ ಗಡುವನ್ನು ಮೀರಿರುವ ಸಂಸ್ಥೆಗಳು ದಂಡವನ್ನು ಎದುರಿಸಬೇಕಾಗುತ್ತದೆ, ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಜೊತೆಗಿನ ಸಭೆಯಲ್ಲಿ, ಕನ್ನಡವನ್ನು ಆಡಳಿತ ಭಾಷೆಯಾಗಿ ಉತ್ತೇಜಿಸಲು ಕನ್ನಡ ಅನುಷ್ಠಾನ ಕೋಶವನ್ನು ಸ್ಥಾಪಿಸಲು ಬಿಬಿಎಂಪಿ ವಾಗ್ದಾನ ಮಾಡಿತು. ಕೆಡಿಎ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಮಳಿಗೆಗಳ ಫಲಕಗಳಲ್ಲಿ ಶೇ 60ರಷ್ಟು ನಾಮಫಲಕ ಕನ್ನಡದಲ್ಲಿರಬೇಕು. ಉಳಿದ ಶೇ 40 ಮಾಲೀಕರ ಆಯ್ಕೆಯ ಯಾವುದೇ ಭಾಷೆಯಲ್ಲಿರಬಹುದು.

ಹೆಚ್ಚಿನ ವ್ಯಾಪಾರಸ್ಥರು ನಿಯಮವನ್ನು ಅನುಸರಿಸಿದ್ದಾರೆ. ಆದರೆ, ಒಂದು ಲಕ್ಷಕ್ಕೂ ಹೆಚ್ಚು ಅಂಗಡಿಗಳ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ನಾಮಫಲಕಗಳನ್ನು ತೆಗೆದುಹಾಕಲು ಬಿಬಿಎಂಪಿಗೆ ಕಾನೂನು ಅಧಿಕಾರವಿಲ್ಲ, ಆದರೆ ಆದೇಶಗಳನ್ನು ಜಾರಿಗೊಳಿಸಲು ವಿಫಲವಾದರೂ, ದಂಡ ವಿಧಿಸುವ ಅಥವಾ ರದ್ದುಗೊಳಿಸುವ ಮೊದಲು ವ್ಯಾಪಾರ ಮಾಲೀಕರ ಮನವೊಲಿಸಲು ಕೆಡಿಎ ಬಿಬಿಎಂಪಿಗೆ ಸೂಚಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳುತ್ತಾರೆ

ನವೀಕರಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುವ ಕಾರಣ, ಭವಿಷ್ಯದ ಜಾರಿಗಾಗಿ ಅಧಿಕಾರಿಗಳು ಆದೇಶ ಪಾಲಿಸದ ನಾಮಫಲಕಗಳ ಛಾಯಾಚಿತ್ರ ಸಾಕ್ಷ್ಯವನ್ನು ಸಂಗ್ರಹಿಸಬಹುದು ಎಂದು ಬಿಳಿಮಲೆ ಸಲಹೆ ನೀಡಿದ್ದಾರೆ.

ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ಮತ್ತು ಕನ್ನಡ ಅನುಷ್ಠಾನ ಕೋಶ ಪ್ರತ್ಯೇಕ ಉಪಕ್ರಮಗಳು ಎಂದು ಬಿಬಿಎಂಪಿ ಉಪ ಆಯುಕ್ತ (ಆಡಳಿತ) ಬಿ.ಎಸ್.ಮಂಜುನಾಥಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಟ್ರೇಡ್ ಲೈಸೆನ್ಸ್‌ಗಳು ಬಿಬಿಎಂಪಿಯ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುತ್ತವೆ. ಆದರೆ ಕನ್ನಡ ಅನುಷ್ಠಾನ ಕೋಶವು ಎಂಟು ವಲಯಗಳಲ್ಲಿ ವ್ಯಾಪಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಗಮನಹರಿಸುತ್ತದೆ. ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ನಡೆಸಲು ಬಿಬಿಎಂಪಿ ಯೋಜಿಸಿದೆ ಎನ್ನುತ್ತಾರೆ ಮಂಜುನಾಥಸ್ವಾಮಿ.

ಏತನ್ಮಧ್ಯೆ, ಫಲಕ ಕಡ್ಡಾಯ ಹಾಗೂ ದಂಡ ಪ್ರಯೋಗದ ಬಳಿಕ ನಾಮಫಲಕ ತಯಾರಕರಿಗೆ ಬೇಡಿಕೆಯಲ್ಲಿ ಏರಿಕೆ ಕಂಡು ಬಂದಿದೆ

ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಮೋಹನ್ ಆರ್ಟ್ಸ್ ನ ಮಾಲೀಕ ಮೋಹನ್ ಕುಮಾರ್ ಪ್ರಕಾರ, 50,000 ಗ್ರಾಹಕರಿಗೆ ಫಲಕವನ್ನು ಈವರೆಗೂ ಮಾಡಿಕೊಟ್ಟಿದ್ದೇನೆ. 1975 ರಿಂದ ಈ ಕ್ಷೇತ್ರದಲ್ಲಿ ಇದ್ದೇನೆ. ಈಗ ಶೇ 60 ರಷ್ಟು ಫಲಕಗಳಲ್ಲಿ ಕನ್ನಡ ಇಡಬೇಕು ಎನ್ನುವ ಜಾಗೃತಿಯನ್ನು ಅಂಗಡಿಯವರು ಹೊಂದಿದ್ದಾರೆ. ಎಷ್ಟೋ ಜನರಿಗೆ ನಾನೇ ಹಲವು ಬಾರಿ ತಿಳವಳಿಕೆ ನೀಡಿ ಜಾಗೃತಿ ಮೂಡಿಸಿದ್ದೇನೆ ಎನ್ನುತ್ತಾರೆ.

Whats_app_banner