ಕನ್ನಡ ಸುದ್ದಿ  /  Karnataka  /  Bbmp Budget 2023 Highlights What Are The Highlights Of Bbmp Budget What Is The Size Here Is The Detail

BBMP budget 2023 Highlights: ಬಿಬಿಎಂಪಿ ಬಜೆಟ್‌ನ ಹೈಲೈಟ್ಸ್‌ ಏನು?; ಗಾತ್ರ ಎಷ್ಟು? ಇಲ್ಲಿದೆ ವಿವರ

BBMP budget 2023 Highlights: ಈ ಸಲದ ಬಿಬಿಎಂಪಿ ಬಜೆಟ್‌ ಗಾತ್ರ 11,000 ಕೋಟಿ ರೂಪಾಯಿಗೂ ಹೆಚ್ಚಿನ ಗಾತ್ರದ್ದಾಗಿತ್ತು. ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ಘೋಷಣೆ ಆಗಿತ್ತು. ಇಂದು ಮಂಡನೆಯಾದ ಬಿಬಿಎಂಪಿ ಬಜೆಟ್‌ನ ಮುಖ್ಯಾಂಶಗಳು ಹೀಗಿವೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ ಮಂಡನೆಗೆ ಮುನ್ನ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್‌ ಮಂಡನೆಗೆ ಮುನ್ನ (bbmp)

ಸತತ ಮೂರನೇ ವರ್ಷ ಜನಪ್ರತಿನಿಧಿಗಳ ಆಡಳಿತ ಇಲ್ಲದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಂಗಡ ಪತ್ರವನ್ನು ಅಧಿಕಾರಿಗಳೇ ಮಂಡಿಸಿದರು. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಇಂದು ಪೂರ್ವಾಹ್ನ 11.30ಕ್ಕೆ ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ಮಾಡಿದರು.

ಈ ಸಲದ ಬಜೆಟ್‌ ಗಾತ್ರ 11,000 ಕೋಟಿ ರೂಪಾಯಿಗೂ ಹೆಚ್ಚಿನ ಗಾತ್ರದ್ದಾಗಿತ್ತು. ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ಘೋಷಣೆ ಆಗಿತ್ತು. ಇಂದು ಮಂಡನೆಯಾದ ಬಿಬಿಎಂಪಿ ಬಜೆಟ್‌ನ ಮುಖ್ಯಾಂಶಗಳು ಹೀಗಿವೆ.

ಬಿಬಿಎಂಪಿ ಬಜೆಟ್‌ 2023-24ರ ಮುಖ್ಯಾಂಶಗಳು

2023-24 ಆಯ-ವ್ಯಯ ಅಂದಾಜು ಮುಖ್ಯಾಂಶ

  • ಒಟ್ಟು ಆಯವ್ಯಯ ಅಂದಾಜು 11,157 ಕೋಟಿ ರೂಪಾಯಿ
  • ಒಟ್ಟು ಸ್ವೀಕೃತಿ 11,158 ಕೋಟಿ ರೂಪಾಯಿ
  • ರಾಜಸ್ವ ಸ್ವೀಕೃತಿ 6,376 ಕೋಟಿ ರೂಪಾಯಿ
  • ಬಂಡವಾಳ ಸ್ವೀಕೃತಿ 3,461 ಕೋಟಿ ರೂಪಾಯಿ
  • ಅಸಾಧರಣಾ ಸ್ವೀಕೃತಿ 1,321 ಕೋಟಿ ರೂಪಾಯಿ
  • ಒಟ್ಟು ವೆಚ್ಚ 11,157 ಕೋಟಿ ರೂಪಾಯಿ
  • ರಾಜಸ್ವ ವೆಚ್ಚ 4,400 ಕೋಟಿ ರೂಪಾಯಿ
  • ಬಂಡವಾಳ ವೆಚ್ಚ 6,264 ಕೋಟಿ ರೂಪಾಯಿ
  • ಅಸಾಧರಣಾ ವೆಚ್ಚ 493 ಕೋಟಿ ರೂಪಾಯಿ
  • ಉಳಿತಾಯ 6.14 ಕೋಟಿ ರೂಪಾಯಿ

ಅನುದಾನ ಹಂಚಿಕೆ ವಿವರ ಹೀಗಿದೆ ಗಮನಿಸಿ

  • ಕಟ್ಟಡ ನಕ್ಷೆಗಳ ಡಿಜಟಲೀಕರಣ - 2 ಕೋಟಿ ರೂಪಾಯಿ
  • ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿ ರೂಪಾಯಿ - ಒಟ್ಟು 8 ಕೋಟಿ ರೂಪಾಯಿ
  • ಅನಧಿಕೃತ ಕಟ್ಟಡ ತೆರವುಗೊಳಿಸಲು - ಒಟ್ಟು 10 ಕೋಟಿ ರೂಪಾಯಿ
  • ಕಸಾಯಿಖಾನೆಗಳ ನಿರ್ವಹಣೆಗೆ- 1 ಕೋಟಿ ರೂಪಾಯಿ
  • ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗೆ- 7.74 ಕೋಟಿ ರೂಪಾಯಿ
  • ಆರ್ಟರಿಯಲ್/ ಸಬ್ ಆರ್ಟರಿಯಲ್ ರಸ್ತೆಗಳ ನಿರ್ವಹಣೆಗೆ 60.10 ಕೋಟಿ ರೂಪಾಯಿ
  • ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗೆ 23.11 ಕೋಟಿ ರೂಪಾಯಿ
  • ವಾಡ್ ನ ನಿರ್ವಹಣೆ ಕೆಲಸಗಳಿಗೆ ಪ್ರತಿ ವಾರ್ಡಗೆ - 75 ಲಕ್ಷ ರೂಪಾಯಿಯಂತೆ ಒಟ್ಟು - 182.25 ಕೋಟಿ ರೂಪಾಯಿ

1. ಪ್ರತಿ ವಾರ್ಡ್ ಗೆ ಹೂಳೆತ್ತುವ ಕಾಮಗಾರಿಗೆ 30 ಲಕ್ಷ ರೂಪಾಯಿ

2. ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ 15 ಲಕ್ಷ ರೂಪಾಯಿ

3. ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗೆ 25 ಲಕ್ಷ ರೂ.

4. ಮುಂಗಾರು ಸಮಯದ ನಿರ್ವಹಣೆಗೆ 5 ಲಕ್ಷ ರೂಪಾಯಿ

  • ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗೆ 70.20 ಕೋಟಿ ರೂಪಾಯಿ
  • ತುರ್ತು ಮಾನ್ಸುನ್‌ ಕಾಮಗಾರಿಗಳಿಗೆ15 ಕೋಟಿ ರೂಪಾಯಿ

1. ಹೊಸ ವಲಯಗಳಿಗೆ 2 ಕೋಟಿ ರೂಪಾಯಿ

2. ಹಳೆ ವಲಯಗಳಿಗೆ 1 ಕೋಟಿ ರೂಪಾಯಿ

  • ಬೀದಿ ದೀಪಗಳ ನಿರ್ವಹಣೆಗೆ 38 ಕೋಟಿ ರೂಪಾಯಿ
  • ಕೆರೆಗಳ ನಿರ್ವಹಣೆಗೆ 35 ಕೋಟಿ ರೂಪಾಯಿ
  • ಭೂಸ್ವಾಧೀನ ಪುಕ್ರಿಯೆಗೆ 100 ಕೋಟಿ ರೂ.
  • ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗೆ 40 ಕೋಟಿ ರೂಪಾಯಿ
  • ಹೊಸದಾಗಿ ರಚನೆಯಾದ ವಾರ್ಡ್ ಗಳ ಕಚೇರಿ ನಿಮಾಣಕ್ಕೆ 12 ಕೋಟಿ ರೂ.
  • ವಲಯ ಕಟ್ಟಡಗಳಿಗೆ 10 ಕೋಟಿ ರೂಪಾಯಿ
  • ವಿವಿಧೋದ್ದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ 25 ಕೋಟಿ ರೂಪಾಯಿ.
  • ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗೆ 5 ಕೋಟಿ ರೂಪಾಯಿ
  • ಅಂಗನವಾಡಿಗಳ ನಿರ್ಮಾಣಕ್ಕೆ 4.50 ಕೋಟಿ ರೂಪಾಯಿ
  • ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ 10 ಕೋಟಿ ರೂ.
  • ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗೆ 5 ಕೋಟಿ ರೂಪಾಯಿ
  • ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿಗಳಿಗೆ 2.5 ಕೋಟಿ ರೂಪಾಯಿ.
  • ಹೊಸ ಉದ್ಯಾನವನಗಳ ಅಭಿವೃದ್ಧಿಗೆ 15 ಕೋಟಿ ರೂಪಾಯಿ.
  • ಹೊಸ ಚಿತಾಗಾರಗಳ ನಿರ್ಮಾಣಕ್ಕೆ 30 ಕೋಟಿ ರೂಪಾಯಿ
  • ಪ್ರಾಣಿಗಳ ಹೊಸ ಚಿತಾಗಾರಗಳ ನಿರ್ಮಾಣಕ್ಕೆ 5 ಕೋಟಿ ರೂಪಾಯಿ
  • ಕೆರೆಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ
  • ಅಂಡರ್ ರೌಂಡ್ ಪಾರ್ಕಿಂಗ್ ನಿರ್ಮಾಣಕ್ಕೆ 5 ಕೋಟಿ ರೂಪಾಯಿ
  • 75 ಜಂಕ್ಷನ್‌ಗಳ ಅಭಿವೃದ್ಧಿಗೆ 150 ಕೋಟಿ ರೂಪಾಯಿ.
  • ಪ್ರತಿ ವಾರ್ಡಗೆ 1.50 ಕೋಟಿ ರೂಪಾಯಿ ಪ್ರಕಾರ, ವಾರ್ಡ್‌ ಕಾಮಗಾರಿಗಳಿಗಾಗಿ ಒಟ್ಟು 303.75 ಕೋಟಿ ರೂಪಾಯಿ.
  • ದಾಸರಹಳ್ಳಿ ವಲಯದಲ್ಲಿ ಬೃಹತ್‌ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ 5 ಕೋಟಿ ರೂಪಾಯಿ.

ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್‌ಗೆ ಒಟ್ಟು 17.25 ಕೋಟಿ ರೂ.

1. ಹೊಸ ವಲಯದ ಪ್ರತಿ ವಾರ್ಡ್‌ಗೆ 10 ಲಕ್ಷ ರೂ.

2. ಹಳೆ ವಲಯದ ಪ್ರತಿ ವಾರ್ಡ್‌ಗೆ 5 ಲಕ್ಷ ರೂ.

ವಿವೇಚನೆಗೆ ಒಳಪಟ್ಟ ಅನುದಾನಕ್ಕೆ ಒಟ್ಟು 400 ಕೋಟಿ ರೂಪಾಯಿ

1. ಪೂಜ್ಯ ಮಹಾಪೌರರು 100 ಕೋಟಿ ರೂಪಾಯಿ.

2. ಮುಖ್ಯ ಆಯುಕ್ತರು 50 ಕೋಟಿ ರೂಪಾಯಿ.

3. ಬೆಂಗಳೂರು ನಗರ ಉಸ್ತುವಾರಿ ಸಚಿವರು 250 ಕೋಟಿ ರೂಪಾಯಿ.

  • ಸ್ವಾತಂತ್ರ್ಯ ಉದ್ಯಾನದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ.
  • 110 ಹಳ್ಳಿಗಳಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ 6 ಕೋಟಿ ರೂ.
  • ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗೆ 24 ಕೋಟಿ ರೂ.
  • ಒಂಟಿ ಮನೆ ನಿರ್ಮಾಣಕ್ಕಾಗಿ ಫಲಾನುಭವಿಗಳ ಸಹಾಯಧನಕ್ಕೆ 100 ಕೋಟಿ ರೂಪಾಯಿ
  • ಲ್ಯಾಪ್ ಟಾಪ್‌ಗಳ ವಿತರಣೆಗಾಗಿ 25 ಕೋಟಿ ರೂಪಾಯಿ
  • ಹೊಲಿಗೆ ಯಂತ್ರಗಳ ವಿತರಣೆಗೆ 9 ಕೋಟಿ ರೂಪಾಯಿ
  • ವೃದ್ಧಾಶ್ರಮಗಳಿಗಾಗಿ 16 ಕೋಟಿ ರೂಪಾಯಿ
  • ವಿದ್ಯಾರ್ಥಿ ವೇತನ ನೀಡಲು 5 ಕೋಟಿ ರೂಪಾಯಿ
  • 15ನೇ ಹಣಕಾಸು ಯೋಜನೆ ಅಡಿಯ ಕಾಮಗಾರಿಗಳಿಗೆ 461 ಕೋಟಿ ರೂಪಾಯಿ
  • ಬೆಂಗಳೂರಿನ ಉದ್ಯಾನವನಗಳ ನಿರ್ವಹಣೆಗೆ ಒಟ್ಟು 80 ಕೋಟಿ ರೂಪಾಯಿ

1. ಹೊಸ ವಲಯಗಳ ಉದ್ಯಾನವನಗಳಿಗೆ 35 ಕೋಟಿ ರೂಪಾಯಿ

2. ಹಳೆ ವಲಯಗಳ ಉದ್ಯಾನವನಗಳಿಗೆ 45 ಕೋಟಿ ರೂಪಾಯಿ

  • ಶಿಕ್ಷಣ ಉನ್ನತೀಕರಣ ಕಾರ್ಯಕ್ರಮಗಳಿಗಾಗಿ 11.56 ಕೋಟಿ ರೂಪಾಯಿ
  • ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಸಂಸೆಗೆ 700 ಕೋಟಿ ರೂಪಾಯಿ ಸಹಾಯನುದಾನ
  • ಬೀದಿ ನಾಯಿಗಳ ನಿರ್ವಹಣೆಗಾಗಿ 20 ಕೋಟಿ ರೂಪಾಯಿ
  • ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 50 ಕೋಟಿ ರೂಪಾಯಿ
  • ಬೆಂಗಳೂರು ಆರೋಗ್ಯ ವ್ಯವಸ್ಥೆಗಾಗಿ 2 ಕೋಟಿ ರೂಪಾಯಿ
  • ಅವಿನ್ಯು ಪ್ಲಾಂಟೇಷನ್‌ಗಾಗಿ 11 ಕೋಟಿ ರೂಪಾಯಿ
  • ಮಠಗಳ ಗಣತಿಗಾಗಿ 4 ಕೋಟಿ ರೂಪಾಯಿ
  • ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ 7.5 ಕೋಟಿ ರೂಪಾಯಿ
  • Tree canopy ನಿರ್ವಹಣೆಗಾಗಿ 14 ಕೋಟಿ ರೂಪಾಯಿ
  • ಹೈ-ಟೆಕ್ ನರ್ಸರಿಗಳಿಗಾಗಿ 8 ಕೋಟಿ ರೂಪಾಯಿ
  • ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಶೂ ನೀಡಲು 25 ಕೋಟಿ ರೂ.
  • ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ.
  • ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ 210 ಕೋಟಿ ರು.
  • 10 ಹೊಸ ಪ್ಲಾಜಾಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ
  • ಕೊಳಗೇರಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 60 ಕೋಟಿ ರೂಪಾಯಿ.

IPL_Entry_Point