BBMP election: ಬಿಬಿಎಂಪಿ ಚುನಾವಣೆ ಇನ್ನೆಷ್ಟು ತಿಂಗಳು ಮುಂದಕ್ಕೆ? ಹೈಕೋರ್ಟಲ್ಲಿ ದಾಖಲಿಸಿದ್ದ ಪಿಟಿಷನ್ ಹಿಯರಿಂಗ್ ಯಾವಾಗ? ಇಲ್ಲಿದೆ ವಿವರ
BBMP election: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಯಾವಾಗ ಎಂಬುದು ಒಂದು ಯಕ್ಷಪ್ರಶ್ನೆಯಾಗುವಂತೆ ತೋರುತ್ತಿದೆ. ಇದು ಕೂಡ ಒಂದಿಲ್ಲೊಂದು ಕಾರಣಕ್ಕೆ ಮುಂದೂಡಲ್ಪಡುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ವಿಚಾರಣೆ ಕೂಡ ನಿನ್ನೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಅದರ ವಿವರ ಇಲ್ಲಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ವಿಚಾರವಾಗಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಪಿಟಿಷನ್‌ನ ಹಿಯರಿಂಗ್ ಅನ್ನು ರಾಜ್ಯ ಹೈಕೋರ್ಟ್ ಜನವರಿ 9ಕ್ಕೆ ಮುಂದೂಡಿದೆ.
ಬಿಬಿಎಂಪಿ ಚುನಾವಣೆ ಕುರಿತು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಇದು ಡಿಸೆಂಬರ್ 15 ರಂದು ಅಂದರೆ ಇಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವೂ ಚುನಾವಣೆ ನಡೆಸಲು ಕಾಲಾವಕಾಶ ಕೋರಿ ಅರ್ಜಿಯೊಂದಿಗೆ ಎಸ್‌ಸಿಯನ್ನು ಸಂಪರ್ಕಿಸಿದೆ.
ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು, ರಾಜ್ಯ ಚುನಾವಣಾ ಆಯೋಗದ ಸಲ್ಲಿಕೆಯನ್ನು ದಾಖಲಿಸಿ ಬಳಿ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿದರು.
ಈ ಹಿಂದೆ ಸರ್ಕಾರದ ಆಗಸ್ಟ್ ನಾಲ್ಕು ಮೀಸಲಾತಿ ಪಟ್ಟಿಯನ್ನು ಬದಿಗಿಟ್ಟ ಹೈಕೋರ್ಟ್, ಬಿಬಿಎಂಪಿಯ 243 ವಾರ್ಡ್‌ಗಳಿಗೆ ಹೊಸ ಮೀಸಲಾತಿ ಪಟ್ಟಿಯನ್ನು ಸೆಪ್ಟೆಂಬರ್ 30 ರೊಳಗೆ ಅಂತಿಮಗೊಳಿಸಬೇಕು ಮತ್ತು ಡಿಸೆಂಬರ್ 31 ರ ಮೊದಲು ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಆದೇಶಿಸಿತ್ತು. ತರುವಾಯ, ಸೆಪ್ಟೆಂಬರ್ 30 ರಂದು ಹೊಸ ಪಟ್ಟಿಯ ಗಡುವಿನ ದಿನಾಂಕದಂದು, ನಗರಾಭಿವೃದ್ಧಿ ಇಲಾಖೆಯು ಹೈಕೋರ್ಟ್ ಆದೇಶವನ್ನು ಅನುಸರಿಸಲು ಇನ್ನೂ ಮೂರು ತಿಂಗಳುಗಳನ್ನು ಕೋರಿತ್ತು.
ಗಮನಾರ್ಹ ಸುದ್ದಿಗಳು
ಪಂಚಾಯಿತಿ ಚುನಾವಣೆ ʻವಿಳಂಬʼ; ರಾಜ್ಯ ಸರ್ಕಾರಕ್ಕೆ ಬಿತ್ತು ದಂಡ- ಏನಿದು ವಿದ್ಯಮಾನ?
K'taka ZP & TP elections: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬವಾಗಿರುವ ವಿಚಾರ ಹೈಕೋರ್ಟ್‌ನಲ್ಲಿದ್ದು, ಸರ್ಕಾರವನ್ನು ಅದು ತರಾಟೆಗೆ ತೆಗೆದುಕೊಂಡು 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ವಿದ್ಯಮಾನದ ವಿವರ ಇಲ್ಲಿದೆ ಕ್ಲಿಕ್ ಮಾಡಿ.
KEA counselling: ಬಿಎಸ್ಸಿ ನರ್ಸಿಂಗ್, ಬಿಪಿಟಿ ಮತ್ತು ಇತರೆ ಕೋರ್ಸ್‌ಗಳ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ
KEA counselling: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು B.Sc ನರ್ಸಿಂಗ್, B.P.T ಮತ್ತು ಇತರ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಳಗಿನ ಸಂಪೂರ್ಣ ವಿವರಗಳನ್ನು ಪರಿಶೀಲಿಸಬಹುದು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
Five varieties of Tea for winter: ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸುವ 3 ವೆರೈಟಿ ಚಹಾ ಮಾಡುವುದು ಹೇಗೆ? ವಿಧಾನ ಇಲ್ಲಿದೆ ನೋಡಿ
International Tea Day: ಉತ್ತಮ ಆರೋಗ್ಯದೊಂದಿಗೆ ಚಳಿಗಾಲವನ್ನು ಎದುರಿಸಲು ಮನೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಹಾವನ್ನು ತಯಾರಿಸುವ ಕೆಲವು ಸರಳ ಪಾಕವಿಧಾನಗಳು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ಆಂಡ್ರಾಯ್ಡ್ ಡಿವೈಸ್‌ನಲ್ಲಿ ಆಪಲ್ ಏರ್‌ಪಾಡ್ಸ್ ಬಳಸುವುದು ಹೇಗೆ? ಇಲ್ಲಿದೆ ಮಿನಿ ಗೈಡ್
How to use Apple Airpods: ಕ್ಯುಪರ್ಟಿನೊ ಮೂಲದ ಕಂಪನಿಯು ತನ್ನ ಏರ್‌ಪಾಡ್‌ಗಳನ್ನು ಯಾವುದೇ ಬ್ಲೂಟೂತ್ ಸಂಪರ್ಕದೊಂದಿಗೆ ಸುಲಭವಾಗಿ ಕನೆಕ್ಟ್ ಮಾಡಲು ಸಿದ್ಧಗೊಳಿಸಿದೆ. ಆ್ಯಪಲ್‌ನ ಏರ್‌ಪಾಡ್‌ಗಳು ಮತ್ತು ಏರ್‌ಪಾಡ್‌ಗಳನ್ನು ಆಂಡ್ರಾಯ್ಡ್ ಫೋನ್‌ನೊಂದಿಗೆ ಸುಲಭವಾಗಿ ಪೇರ್ ಮಾಡಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ