ಕನ್ನಡ ಸುದ್ದಿ  /  Karnataka  /  Bbmp Will Make Unofficially Installed Ofc Poles To Official

BBMP on OFC poles:ಅನಧಿಕೃತವಾಗಿ ಅಳವಡಿಸಿರುವ ಓಎಫ್​​ಸಿ ಪೋಲ್‌ಗಳನ್ನು ಅಧಿಕೃತಗೊಳಿಸಲಿರುವ ಬಿಬಿಎಂಪಿ.. ಆದ್ರೆ ಇಷ್ಟು ಹಣ ಪಾವತಿಸಬೇಕು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊನೆ ಮೈಲಿ ಸಂಪರ್ಕ (last mile connectivity) ಕ್ಕೆ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ ಪೋಲ್‌ಗಳನ್ನು ಅಧಿಕೃತಗೊಳಿಸುವ ಬಗ್ಗೆ ಬಿಬಿಎಂಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊನೆ ಮೈಲಿ ಸಂಪರ್ಕ (last mile connectivity) ಕ್ಕೆ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ ಪೋಲ್‌ಗಳನ್ನು ಅಧಿಕೃತಗೊಳಿಸುವ ಬಗ್ಗೆ ಬಿಬಿಎಂಪಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಓ.ಎಫ್.ಸಿ ಕೇಬಲ್ ಸೇವಾ ಸಂಸ್ಥೆಯವರಿಗೆ ಪ್ರತಿ ಒಂದು ಪೋಲ್‌ಗೆ ರೂ. 54,35,39/- ಶುಲ್ಕವನ್ನು ಪಾಲಿಕೆಗೆ ಪಾವತಿಸಿಕೊಂಡು ಅನಧಿಕೃತವಾಗಿ ಹಾಕಿರುವ ಪೋಲ್‌ಗಳನ್ನು ಅಧಿಕೃತಗೊಳಿಸಲು ತೀರ್ಮಾನಿಸಲಾಗಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಆದುದರಿಂದ ಈ ಪತ್ರಿಕಾ ಪ್ರಕಟಣೆಯಾದ 10 ದಿನಗಳ ಒಳಗಾಗಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಮತ್ತು ಡಿಡಿಯನ್ನು ಪಾವತಿಸಿ ಅಧಿಕೃತಗೊಳಿಸಿಕೊಳ್ಳಲು ಕಾಲಾವಕಾಶ ನೀಡಲಾಗಿರುತ್ತದೆ. ಪತ್ರಿಕಾ ಪ್ರಕಟಣೆಯಾದ 10 ದಿನಗಳ ನಂತರ ಬರುವ ಅರ್ಜಿಗಳಿಗೆ ಶುಲ್ಕ ಜೊತೆಗೆ ಶೇ‌ 100 ದಂಡವನ್ನು ವಿಧಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

ಸದರಿ ಪತ್ರಿಕಾ ಪ್ರಕಟಣೆಯ ಬಗ್ಗೆ ಯಾವುದಾದರೂ ಗೊಂದಲಗಳಿದ್ದಲ್ಲಿ ಅಥವಾ ಮಾಹಿತಿ ಬೇಕಾದಲ್ಲಿ ಮುಖ್ಯ ಅಭಿಯಂತರರು(ಓ.ಎಫ್.ಸಿ) ರವರ ಕಛೇರಿಯನ್ನು ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಾದ (ಓ.ಎಫ್.ಸಿ) ಶ್ರೀ. ಸಚಿನ್ ಇವರನ್ನು ಸಂಪರ್ಕಿಸಬಹುದು. ಇವರ ಮೊಬೈಲ್​ ಸಂಖ್ಯೆ - 9844508268

ಮಾ. 23 ರಂದು ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್

ರಾಜ್ಯ ರಾಜಧಾನಿಯಲ್ಲಿ ಮಾ.23ರಂದು ನೀರಿನ ಅದಾಲತ್‌ ನಡೆಸುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಘೋಷಿಸಿದೆ. ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನೀರಿನ ಅದಾಲತ್‌ನಲ್ಲಿ ನಡೆಯಲಿದೆ. ನೀರಿನ ಅದಾಲತ್‍ ಮಾರ್ಚ್ 23 ರಂದು ಬೆಳಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನಡೆಯಲಿದೆ ಎಂದು ಜಲಮಂಡಳಿ ತಿಳಿಸಿದೆ.

ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್, 1,2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್.ಕೆ ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರ ಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್. ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ ಇಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿ ಮಂಡಳಿಯ 24x7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‌ಆಪ್‌ ಸಂಖ್ಯೆ 8762228888 ಸಂದೇಶದ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

IPL_Entry_Point

ವಿಭಾಗ