ಕನ್ನಡ ಸುದ್ದಿ / ಕರ್ನಾಟಕ /
Belagavi Accident: ಬೆಳಗಾವಿಯ ಕಿತ್ತೂರು ಬಳಿ ಭೀಕರ ಅಪಘಾತ, 6 ಮಂದಿ ಸಾವು, 4 ಮಂದಿಗೆ ಗಾಯ
Accident ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ಬೆಳಗಾವಿ ಬಳಿ ಅಪಘಾತದಲ್ಲಿ ನಜ್ಜು ಗುಜ್ಜಾದ ಕಾರು.
ಬೆಳಗಾವಿ: ವೇಗವಾಗಿ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬಂದ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ 6 ಮಂದಿ ಮೃತಪಟ್ಟು, 4 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆಯಿದು. ಇದು ನಡೆದಿರುವುದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಸಮೀಪದ ಮಂಗ್ಯಾನಕೊಪ್ಪ ಗ್ರಾಮದ ಬಳಿ. ಮರ ಡಿಕ್ಕಿ ಹೊಡೆದಿರುವ ರಭಸಕ್ಕೆ ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಕಾರಿನಲ್ಲಿ ಹತ್ತು ಮಂದಿ ಪ್ರಯಾಣಿಸುತ್ತಿದ್ದರು.
ಮೃತರನ್ನು ಚಾಲಕ ಶಾರುಕ್ ಪೆಂಡಾರಿ( 30 ). ಇಕ್ಬಾಲ್ ಜಮಾದಾರ್(50). ಸಾನಿಯಾ ಲಂಗೋಟಿ(37), ಉಮ್ರಾ ಬೇಗಂ ಲಂಗೋಟಿ(17), ಶಬನಮ್ ಲಂಗೋಟಿ( 37), ಫರ್ಹಾನ್ ಲಂಗೋಟಿ(13 ) ಎಂದು ಗುರುತಿಸಲಾಗಿದೆ.
ಮೃತರು ಮಹಾರಾಷ್ಟ್ರದವರು ಎಂದು ತಿಳಿದು ಬಂದಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ಧಾರೆ. ಸ್ಥಳಕ್ಕೆ ಎಸ್ಪಿ ಭೀಮಾಶಂಕರ್ ಗುಳೇದ ಭೇಟಿ ನೀಡಿದ್ದರು, ನಂದಗಡ ಠಾಣೆಯಲ್ಲಿ ದೂರು ದಾಖಲಾಗಿದೆ.