ಕನ್ನಡ ಸುದ್ದಿ  /  ಕರ್ನಾಟಕ  /  Belgaum Election Result: ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌ಗೆ ಭಾರೀ ಅಂತರದ ಗೆಲುವು, ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನಿಗೆ ಸೋಲು

Belgaum Election Result: ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌ಗೆ ಭಾರೀ ಅಂತರದ ಗೆಲುವು, ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರನಿಗೆ ಸೋಲು

ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ 2024: ಬಿಜೆಪಿಯ ಭದ್ರಕೋಟೆ ಎಣಿಸಿದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ ಬಿಜೆಪಿಯಿಂದ ಮತ್ತು ಕಾಂಗ್ರೆಸ್‌ನಿಂದ ಮೃಣಾಲ್‌ ರವೀಂದ್ರ ಹೆಬ್ಬಾಳ್ಕರ್‌ ಸ್ಪರ್ಧಿಸಿದ್ದಾರೆ. ಚುನಾವಣಾ ಫಲಿತಾಂಶದ ಪ್ರಕಾರ ಬೆಳಗಾವಿಯಲ್ಲಿ ... ಗೆಲುವು ಪಡೆದಿದ್ದಾರೆ. Belgaum Lok Sabha MP Election 2024 Result.

ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ 2024
ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ 2024

ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತಎಣಿಕೆ ಚುರುಕಾಗಿ ಸಾಗಿದೆ. ಕರ್ನಾಟಕದ ಬೆಳಗಾವಿಯ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ (Belgaum South Lok Sabha MP Election 2024 Result) ಹೊರಬಿದ್ದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2024ರ ಕೇಂದ್ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಜಗದೀಶ್‌ ಶೆಟ್ಟರ್‌ (Jagadish Shettar) ಮತ್ತು ಕಾಂಗ್ರೆಸ್‌ನಿಂದ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ (Mrunal Ravindra Hebbalkar) ಸ್ಪರ್ಧಿಸಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ ಈ ಚುನಾವಣೆ ಮೂಲಕ ಬಿಜೆಪಿಗೆ ವಾಪಸ್‌ ಬಂದಿದ್ದಾರೆ. ಬಿಜೆಪಿ ಪಾಲಿಗೆ ಬೆಳಗಾವಿ ಲೋಕಸಭಾ ಕ್ಷೇತ್ರವು ಭದ್ರಕೋಟೆಯಂತೆ ಇತ್ತು. ಸುರೇಶ್‌ ಅಂಗಡಿ ಸತತ ನಾಲ್ಕು ಬಾರಿ ಇಲ್ಲಿ ಗೆಲುವು ಪಡೆದಿದ್ದರು. ಇನ್ನೊಂದು ಬಾರಿ ಸುರೇಶ್‌ ಅಂಗಡಿ ಪತ್ನಿ ಮಂಗಲಾ ಸಂಸದರಾಗಿದ್ದರು. ಈ ಬಾರಿ ಜಗದೀಶ್‌ ಶೆಟ್ಟರ್‌ ಎಂಟ್ರಿಯಿಂದ ಭದ್ರಕೋಟೆಗೆ ಹಾನಿಯಾಗಬಹುದೇ ಎಂಬ ಚಿಂತೆ ಬಿಜೆಪಿಗರಲ್ಲಿತ್ತು. ಕಾಂಗ್ರೆಸ್‌ನವರು ಕೂಡ ಜಗದೀಶ್‌ ಶೆಟ್ಟರ್‌ ಎದುರು ಮೃಣಾಲ್‌ ರವೀಂದ್ರ ಹೆಬ್ಬಾಳ್ಕರ್‌ ಕಣದಲ್ಲಿದ್ದರು. ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಳಗಾವಿ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಬೆಳಗಾವಿ ಲೋಕಸಭಾ ಕ್ಷೇತ್ರ

ಮೃಣಾಲ್‌ ರವೀಂದ್ರ ಹೆಬ್ಬಾಳ್ಕರ್‌ (ಕಾಂಗ್ರೆಸ್‌): 245442 ಮತಗಳು (ಮಧ್ಯಾಹ್ನದ ವೇಳೆಗೆ)

ಜಗದೀಶ್‌ ಶೆಟ್ಟರ್‌ (ಬಿಜೆಪಿ): 302649 ಮತಗಳು (ಮಧ್ಯಾಹ್ನದ ವೇಳೆಗೆ)

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಭಾರೀ ಅಂತರದಿಂದ ಗೆಲುವು ಪಡೆದಿದ್ದಾರೆ. (ಅಧಿಕೃತ ಪ್ರಕಟಣೆ ಬಿಡುಗಡೆಯಾಗಬೇಕಿದೆ).

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಜಗದೀಶ್‌ ಶೆಟ್ಟರ್‌ ಪರಿಚಯ

ಜಗದೀಶ್ ಶಿವಪ್ಪ ಶೆಟ್ಟರ್ ಅವರ ಪೂರ್ಣ ಹೆಸರು. ಕರ್ನಾಟಕದಲ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಮಾಜಿ ಮುಖ್ಯಮಂತ್ರಿ. ವಿಧಾನ ಸಭೆಯ ಸ್ಪೀಕರ್‌ ಕೂಡ ಆಗಿದ್ದವರು. ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿ ಲಿಂಗಾಯತ ಸಮುದಾಯದ ನಡುವೆ ಪಕ್ಷದ ಫೇಸ್‌ ಆಗಿ ಪ್ರಭಾವ ಹೊಂದಿದವರು. ಅವರ ತಂದೆ, ಎಸ್‌ಎಸ್ ಶೆಟ್ಟರ್ ಅಂದಿನ ಜನಸಂಘ ಪಕ್ಷದಿಂದ ಹುಬ್ಬಳ್ಳಿ-ಧಾರವಾಡದ ಮೇಯರ್ ಆಗಿದ್ದರು ಮತ್ತು ನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು. ಜಗದೀಶ್‌ ಶೆಟ್ಟರ್‌ ಪ್ರೊಫೈಲ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸೋತ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಪರಿಚಯ

ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಅವರು ಬೆಳಗಾವಿಯ ಪ್ರಭಾವಿ ರಾಜಕಾರಣಿ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ. ವಯಸ್ಸು 31. ಕೆಎಲ್‌ಎಸ್ ಗೊಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗ್ರಾಜುಯೇಟ್ ಪ್ರೊಫೆಷನಲ್ ಬಿಇ ಸಿವಿಲ್ ಇಂಜಿನಿಯರಿಂಗ್ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಚುನಾವಣಾ ಕಣ: ಬೆಳಗಾವಿ ಲೋಕಸಭಾ ಕ್ಷೇತ್ರ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆದಿತ್ತು. ಶೇಕಡ 71.49 ಮತದಾನವಾಗಿದೆ. 2019ರಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್‌ ಅಂಗಡಿ 3,91,304 ಮತಗಳ ಬೃಹತ್‌ ಅಂತರದಿಂದ ಗೆಲುವು ಪಡೆದಿದ್ದರು. ಕಾಂಗ್ರೆಸ್‌ನ ವಿರೂಪಾಕ್ಷಿ ಎಸ್ ಸಾಧುಣ್ಣವರ್ ಸೋಲು ಅನುಭವಿಸಿದ್ದರು. 2019 ವರ್ಷದಲ್ಲಿ 67.43 ಮತದಾನವಾಗಿತ್ತು. ಈ ಬಾರಿ ಇದಕ್ಕಿಂತಲೂ ಹೆಚ್ಚು ಮತದಾನವಾಗಿದೆ. ಬೆಳಗಾವಿ ಕ್ಷೇತ್ರವು ಕರ್ನಾಟಕದ ಪ್ರಮುಖ ಲೋಕಸಭಾ ಕ್ಷೇತ್ರವಾಗಿದೆ.

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024

ವಿಭಾಗ