ಕನ್ನಡ ಸುದ್ದಿ  /  Karnataka  /  Bengaluru Agricultural University Admission University Of Agricultural Sciences Bangalore

Bengaluru Agri University Admission: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

Bengaluru Agri University Admission: ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕವು ಎರಡು ಡಿಪ್ಲೊಮಾ ಕೋರ್ಸ್ ಹಾಗೂ ಐದು ಸರ್ಟಿಫಿಕೇಟ್ ಕೋರ್ಸ್‌ಗಳ 2023-24ನೇ ಶೈಕ್ಷಣಿಕ ಸಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅದು ಅರ್ಜಿಗಳನ್ನು ಆಹ್ವಾನಿಸಿದೆ.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು (e-krishiuasb.karnataka.gov.in)

ಕೃಷಿಗೆ ಸಂಬಂಧಿಸಿದ ಎರಡು ಡಿಪ್ಲೊಮಾ ಕೋರ್ಸ್‌ ಮತ್ತು ಐದು ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಬೆಂಗಳೂರಿನ ಕೃಷಿ ವಿವಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕ ಈ ಕೋರ್ಸ್‌ಗಳನ್ನು ನಡೆಸುತ್ತದೆ.

ಎರಡು ಡಿಪ್ಲೊಮಾ ಕೋರ್ಸ್ ಹಾಗೂ ಐದು ಸರ್ಟಿಫಿಕೇಟ್ ಕೋರ್ಸ್‌ಗಳ 2023-24ನೇ ಶೈಕ್ಷಣಿಕ ಸಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅದು ಅರ್ಜಿಗಳನ್ನು ಆಹ್ವಾನಿಸಿದೆ.

ಒಂದು ವರ್ಷದ ಸ್ನಾತಕೋತ್ತರ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ತಲಾ 12,000 ರೂಪಾಯಿ ಶುಲ್ಕವಿದೆ. ಈ ಕೋರ್ಸ್‌ ಆಂಗ್ಲ ಭಾಷೆಯಲ್ಲಿ ಇರಲಿದೆ. ಕೃಷಿ ಪದವೀಧರರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದೇ ರೀತಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ ಕೂಡಾ ಇದೆ. ಇದು ಕನ್ನಡ ಮಾಧ್ಯಮದಲ್ಲಿ ಇರಲಿದೆ. ಇದಕ್ಕೆ 10 ಸಾವಿರ ರೂಪಾಯಿ ಶುಲ್ಕವಿದೆ. ಈ ಕೋರ್ಸ್‌ಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ಅಂತೆಯೇ ಸರ್ಟಿಫಿಕೇಟ್‌ ಕೋರ್ಸ್‌ಗಳ ಪೈಕಿ 'ಕೃಷಿಯಲ್ಲಿ ಬೀಜೊತ್ಪಾದನೆ ತಾಂತ್ರಿಕತೆ ಗಳು' ಮತ್ತು 'ಕೃಷಿಯಲ್ಲಿ ಯಂತ್ರೋಪ ಕರಣಗಳ ನಿರ್ವಹಣೆ' ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ತಲಾ 3,000 ರೂಪಾಯಿ ಶುಲ್ಕ ನಿಗದಿ ಗೊಳಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು ಎಂದು ವಿವಿ ಹೇಳಿದೆ.

ಡಿಪ್ಲೊಮಾ ಮತ್ತು ಸರ್ಟಿಫೀಕೇಟ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಏ.28 ಕೊನೇ ದಿನವಾಗಿದ್ದು, ಅಲ್ಲಿತನಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿಯೊಂದು ಕೋರ್ಸ್‌ಗೂ ಪ್ರತ್ಯೇಕವಾಗಿ ಅರ್ಜಿ ಶುಲ್ಕ 100 ರೂಪಾಯಿ ಪಾವತಿಸಬೇಕು.

ಕೋರ್ಸ್‌ಗೆ ಪ್ರವೇಶ ಅರ್ಜಿಯನ್ನು ಪಡೆಯಬಹುದಾದ ವಿಳಾಸ ಹೀಗಿದೆ - ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ, ಬೆಂಗಳೂರು-65 ಇಲ್ಲಿ ಅರ್ಜಿ ಪಡೆಯಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಪಡೆಯಲು ಬಯಸುವುದಾದರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ www.uasbangalore.edu.in ಕ್ಕೆ ಭೇಟಿ ನೀಡಿ, ಅಲ್ಲಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಕೋರ್ಸ್ ಶುಲ್ಕವನ್ನು ಡಿ.ಡಿ. ಮೂಲಕ ನಿಯಂತ್ರಕರು, ಯುಎಎಸ್‌, ಜಿಕೆವಿಕೆ, ಬೆಂಗಳೂರು- 65 ಇವರ ಹೆಸರಿನಲ್ಲಿ ಪಡೆದು ಏ. 29ರೊಳಗೆ ಸಂಯೋಜಕರು/ ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿವಿ, ಜಿಕೆವಿಕೆ, ಬೆಂಗಳೂರು-65 ಇಲ್ಲಿ ಸಲ್ಲಿಸಬೇಕು.

ಕೋರ್ಸ್‌ಗಳಿಗೆ ಸಂಬಂಧಿಸಿದ ವಿವರಕ್ಕೆ ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ ದೂರ ಶಿಕ್ಷಣ ಘಟಕದ ದೂರವಾಣಿ ಸಂಖ್ಯೆ 080-2363 6353 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು.

ಗಮನಿಸಬಹುದಾದ ಸುದ್ದಿಗಳು

ಭಾರತೀಯ ವಿದ್ಯಾಭವನ - ಬಿಬಿಎಂಪಿ ಪಬ್ಲಿಕ್ ಸ್ಕೂಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

BVB-BBMP School Admission: ಬೆಂಗಳೂರಿನ ಶ್ರೀರಾಮಪುರ ಕ್ರಾಂತಿಕವಿ ಸರ್ವಜ್ಞರಸ್ತೆಯ 215ನೇ ಮುಖ್ಯರಸ್ತೆಯ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಶುವಿಹಾರಕ್ಕೆ ಅಡ್ಮಿಷನ್‌ ಶುರುವಾಗುತ್ತಿದೆ. ಮಾರ್ಚ್‌ 27ರಿಂದ ಅಡ್ಮಿಷನ್‌ ಶುರುವಾಗುತ್ತಿದ್ದು, ಏಪ್ರಿಲ್‌ 10ರ ತನಕ ಅರ್ಜಿ ವಿತರಣೆ ನಡೆಯಲಿದೆ ಎಂದು ಪಾಲಿಕೆ ಹೇಳಿದೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.Ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೂನಿವರ್ಸಿಟಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪ್ರವೇಶಾತಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point