ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಸಾರ್ವಜನಿಕ ಮನಸೂರೆಗೊಂಡ ಆರ್ಟ್‌ ಪಾರ್ಕ್
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಸಾರ್ವಜನಿಕ ಮನಸೂರೆಗೊಂಡ ಆರ್ಟ್‌ ಪಾರ್ಕ್

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಸಾರ್ವಜನಿಕ ಮನಸೂರೆಗೊಂಡ ಆರ್ಟ್‌ ಪಾರ್ಕ್

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಪ್ರಸಿದ್ಧ ಕಲಾವಿದರ ತಂಡದ ಕಲಾ ಪ್ರದರ್ಶನ ಇಂದು ಗಮನಸೆಳೆಯಿತು. ಬೆಂಗಳೂರು ವಿಮಾನ ನಿಲ್ದಾಣ ಆಯೋಜಿಸಿದ್ದ ಆರ್ಟ್‌ ಪಾರ್ಕ್ ಉಪಕ್ರಮ ಸಾರ್ವಜನಿಕರ ಮನಸೂರೆಗೊಂಡಿತು.

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಆರ್ಟ್‌ ಪಾರ್ಕ್ ಉಪಕ್ರಮ ಸಾರ್ವಜನಿಕ ಮನಸೂರೆಗೊಂಡಿತು.
ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಆರ್ಟ್‌ ಪಾರ್ಕ್ ಉಪಕ್ರಮ ಸಾರ್ವಜನಿಕ ಮನಸೂರೆಗೊಂಡಿತು.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ 2ರ ಮುಂಭಾಗದಲ್ಲಿ ಕಲಾಸಕ್ತರು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಆರ್ಟ್‌ ಪಾರ್ಕ್‌ ಉಪಕ್ರಮ ಕಲಾಪ್ರೇಮಿಗಳ ಮನಸೂರೆಗೊಂಡಿತು. ಪ್ರಸಿದ್ಧ ಕಲಾವಿದ ಎಸ್‌.ಜಿ. ವಾಸುದೇವ್‌ ಅವರ ತಂಡದ ಕಲಾವಿದರು ತೆರೆದ ಆವರಣದಲ್ಲಿ ಪ್ರದರ್ಶಿಸಿದ ಕಲಾ ಪ್ರದರ್ಶನವನ್ನು ಪ್ರಯಾಣಿಕರು, ಸ್ಥಳೀಯ ನಿವಾಸಿಗಳು, ಸಿಬ್ಬಂದಿಗಳು ಕಣ್ತುಂಬಿಕೊಂಡರು.

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ

“ಆರ್ಟ್ ಪಾರ್ಕ್ ಎಂಬುದು ಸುದೀರ್ಘ ಕಾಲದಿಂದ ಆಯೋಜಿಸುತ್ತಿರುವ ಉಪಕ್ರಮವಾಗಿದ್ದು, ಬೆಂಗಳೂರು ನಗರದಾದ್ಯಂತ 75 ಕ್ಕೂ ಹೆಚ್ಚು ಆವೃತ್ತಿಗಳನ್ನು ನಡೆಸುವ ಮೂಲಕ ಕಲಾವಿದರು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸಿದೆ. ಅನೌಪಚಾರಿಕ, ಅಂತರ್ಗತ ವಾತಾವರಣಕ್ಕೆ ಹೆಸರುವಾಸಿಯಾದ ಈ ವೇದಿಕೆಯು ಸಮಕಾಲೀನ ಕಲೆಯನ್ನು ಪ್ರೋತ್ಸಾಹಿಸುತ್ತದೆ” ಎಂದು ಪ್ರಸಿದ್ಧ ಕಲಾವಿದ ಎಸ್.ಜಿ ವಾಸುದೇವ್ ಹೇಳಿದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟ್ ಪಾರ್ಕ್‌ನ್ನು ಪ್ರಯಾಣಿಕರು, ಸಾರ್ವಜನಿಕ ಜೊತೆಗೆ ಕಲಾವಿದರು ಬೆರೆಯುವ ಅನುಭವವನ್ನಾಗಿ ಮರುರೂಪಿಸಲಾಯಿತು. ಕಲಾವಿದರು ಸ್ಥಳದಲ್ಲೇ ಚಿತ್ರಗಳನ್ನು ರಚಿಸಿದ್ದಲ್ಲದೇ, ಆಸಕ್ತರ ಜೊತೆಗೆ ವಿಚಾರ ವಿನಿಮಯ ನಡೆಸಿದರು.

ಕಲಾ ಪ್ರೇಮಿಗಳ ಮನಸೂರೆಗೊಂಡ ಕಲಾ ಪ್ರದರ್ಶನ

“ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ಕೇವಲ ಪ್ರಯಾಣದ ತಾಣವಾಗಿಸದೇ, ಪ್ರಯಾಣಿಕರ ಮನಸೂರೆಗೊಳಿಸುವ ತಾಣವನ್ನಾಗಿಸುವುದು ನಮ್ಮ ಆಶಯವಾಗಿದೆ. ಅಂತೆಯೇ, ಕಲಾಸಕ್ತರಿಗಾಗಿ ಕಲೆಯನ್ನು ಕಣ್ತುಂಬಿಕೊಳ್ಳಲು ಈ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಕಲೆಯನ್ನು ಒಳಗೊಳ್ಳಲು ಕಲಾವಿದರನ್ನು ಆಹ್ವಾನಿಸಿದ್ದೇವೆ. ವಿಶಿಷ್ಟ ಸಾಂಸ್ಕೃತಿಕ ಅನುಭವಗಳ ಮೂಲಕ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಂದರಗೊಳಿಸುವ ಆಶಯ ನಮ್ಮದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಎಂಡಿ ಮತ್ತು ಸಿಇಒ ಹರಿ ಮಾರಾರ್ ಈ ವಿಶಿಷ್ಟ ಉಪಕ್ರಮವನ್ನು ವಿವರಿಸಿದರು.

210ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಕಲೆಯನ್ನು ತನ್ನ ಗುರುತಿನ ಆಧಾರಸ್ತಂಭವಾಗಿ ರೂಪಿಸಿಕೊಂಡಿದೆ. ಮುಖ್ಯವಾಗಿ ಟರ್ಮಿನಲ್‌ 2 ತನ್ನ ಕಲಾ ಕಾರ್ಯಕ್ರಮದ ಮೂಲಕ ಮನೆಮಾತಾಗಿದೆ. ಪ್ರಸಿದ್ಧ ಕಲಾವಿದ ವಾಸುದೇವ್ ಎಸ್‌ಜಿ ಸೇರಿದಂತೆ ವಿಶ್ವದ 67 ಕಲಾವಿದರ 210 ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ಕಂಡಿದೆ. ಅಲ್ಲದೇ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಮಕಾಲೀನ ಧ್ವನಿಗಳನ್ನು ಕಲಾ ಪ್ರಕಾರಗಳ ಮೂಲಕ ಬಿಂಬಿಸಲಾಗಿದೆ. ಆರ್ಟ್ ಪಾರ್ಕ್‌ನಂತಹ ಉಪಕ್ರಮಗಳೊಂದಿಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರು ಮತ್ತು ಸಂದರ್ಶಕರಿಗೆ ಹೆಚ್ಚು ಅರ್ಥಪೂರ್ಣ ಅನುಭವವನ್ನು ನೀಡುವ ಆಶಯವನ್ನು ಮುಂದುವರೆಸಿದೆ ಎಂದು ಹರಿ ಮಾರಾರ್ ಹೇಳಿದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner