28 ವರ್ಷದಿಂದ ಗ್ರಾಹಕರಲ್ಲಿ ಒಂದೇ ಒಂದು ರೂಪಾಯಿ ಹೆಚ್ಚುವರಿ ಹಣ ಕೇಳಿಲ್ವಂತೆ ಬೆಂಗಳೂರಿನ ಈ ಆಟೋ ಚಾಲಕ! ಕಾರಣ ಹೀಗಿದೆ-bengaluru auto driver claims he is never asked rs 10 extra from riders in 3 decades customer is king prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  28 ವರ್ಷದಿಂದ ಗ್ರಾಹಕರಲ್ಲಿ ಒಂದೇ ಒಂದು ರೂಪಾಯಿ ಹೆಚ್ಚುವರಿ ಹಣ ಕೇಳಿಲ್ವಂತೆ ಬೆಂಗಳೂರಿನ ಈ ಆಟೋ ಚಾಲಕ! ಕಾರಣ ಹೀಗಿದೆ

28 ವರ್ಷದಿಂದ ಗ್ರಾಹಕರಲ್ಲಿ ಒಂದೇ ಒಂದು ರೂಪಾಯಿ ಹೆಚ್ಚುವರಿ ಹಣ ಕೇಳಿಲ್ವಂತೆ ಬೆಂಗಳೂರಿನ ಈ ಆಟೋ ಚಾಲಕ! ಕಾರಣ ಹೀಗಿದೆ

Bengaluru auto driver: 1996 ರಿಂದ ವಾಹನ ಚಲಾಯಿಸುತ್ತಿರುವ ಬೆಂಗಳೂರಿನ ಆಟೋ ಚಾಲಕ ಶಾಂತ ಗೌಡ ಎಂಬವರು, ಇಲ್ಲಿಯವರೆಗೆ ತಮ್ಮ ಗ್ರಾಹಕರಿಂದ ಹೆಚ್ಚುವರಿಯಾಗಿ ಒಂದೇ ಒಂದು ರೂಪಾಯಿ ಸಹ ಕೇಳಿಲ್ಲ ಎಂದು ಹೇಳಿದ್ದಾರೆ. ಕಾರಣ ಏನೆಂದು ವಿವರಿಸಿದ್ದಾರೆ ನೋಡಿ.

ಆಟೋ ಚಾಲಕ ಶಾಂತ ಗೌಡ
ಆಟೋ ಚಾಲಕ ಶಾಂತ ಗೌಡ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಆಟೋ ಚಾಲಕರಿಂದ (Bengaluru auto driver) ಪ್ರಯಾಣಿಕರಿಗೆ ಕಿರಿಕಿರಿ ಹೆಚ್ಚಾಗಿದೆ. ಹೆಚ್ಚಿನ ಶುಲ್ಕ ವಿಧಿಸುವುದು, ಮೀಟರ್​ ಬಳಸಲು ನಿರಾಕರಿಸುವುದು ಮತ್ತು ಅನ್ಯ ಭಾಷಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಹಲವು ವಿಚಾರಗಳಿಗೆ ಸದಾ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಆದರೆ, ಇಂತಹವರ ಮಧ್ಯೆ ಇಲ್ಲೊಬ್ಬ ಆಟೋ ಚಾಲಕ ಎಲ್ಲರಿಗೂ ಉದಾಹರಣೆ ಆಗಿ ನಿಲ್ಲುತ್ತಾರೆ. ಎಲ್ಲಾ ಆಟೋ ಚಾಲಕರೂ ಒಂದೇ ಅಲ್ಲ ಎಂಬುದನ್ನು ನೆನಪಿಸಿದ್ದಾರೆ. ಕಳೆದ 28 ವರ್ಷಗಳಿಂದ ಗ್ರಾಹಕರಿಂದ 10 ರೂಪಾಯಿ ಕೂಡ ಹೆಚ್ಚಿಗೆ ಪಡೆದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಗ್ರಾಹಕರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಕೂಡ ತಿಳಿಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಆಟೋ ಚಾಲಕನ ಹೆಸರು ಶಾಂತ ಗೌಡ (Shanta Gowda, Auto Driver). ಇವರು 28 ವರ್ಷಗಳಿಂದ ವಾಹನ ಚಲಾಯಿಸುತ್ತಿದ್ದಾರಂತೆ. ಶಾಂತ ಗೌಡ ಅವರು ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಟೋ ಹತ್ತುವ ಗ್ರಾಹಕರನ್ನು ಹೇಗೆ ಉಪಚರಿಸಬೇಕು ಎಂಬುದನ್ನು ತಿಳಿಸಿದ್ದಾರೆ. ನಾವು ಗ್ರಾಹಕರಿಗೆ ಉತ್ತಮ ಸೇವೆ ನೀಡಿದರೆ, ಅವರು ಸಂತೋಷವಾಗಿರುತ್ತಾರೆ. ಆಗ ಅವರೇ ನಮಗೆ ಹೆಚ್ಚುವರಿಯಾಗಿ ಪಾವತಿಸಲು ಇಚ್ಛಿಸುತ್ತಾರೆ. ನಾವು ಅವರಿಗೆ ಹೆಚ್ಚಿನ ಶುಲ್ಕ ವಿಧಿಸಬೇಕಾಗಿಲ್ಲ ಎಂದು ವೈರಲ್ ಆದ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ನಗರ ಮೀಟರ್ಡ್ ಆಟೋ ಎಂಬ ಖಾತೆಯು ಪೋಸ್ಟ್ ಮಾಡಿದೆ. ಇವರನ್ನು ನೋಡಿ ಬೇರೆ ಆಟೋ ಚಾಲಕರು ಕಲಿಯಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಶಾಂತ ಗೌಡ ಅವರು ತಮ್ಮ ಆಟೋದಲ್ಲಿ ಒಂದು ಸಣ್ಣ ಡಿಜಿಟಲ್ ಡಿಸ್​ಪ್ಲೇ ಅಳವಡಿಸಿದ್ದು, ಅದರಲ್ಲಿ ‘ಗ್ರಾಹಕರು ನಮ್ಮ ಆಟೋದ ಪ್ರಮುಖ ಸಂದರ್ಶಕರು. ಅವರು ನಮ್ಮ ಮೇಲೆ ಅವಲಂಬಿತರಾಗಿಲ್ಲ; ನಾವು ಅವರ ಮೇಲೆ ಅವಲಂಬಿತರಾಗಿದ್ದೇವೆ’ ಎಂಬ ಸಂದೇಶವನ್ನು ಡಿಸ್​ಪ್ಲೇ ಮಾಡಿದ್ದಾರೆ. ಈ ಸಂದೇಶ ನೋಡುವ ಅನೇಕ ಜನರು ಸಂತೋಷಪಟ್ಟು ಪ್ರೀತಿಯಿಂದ 10, 20, 30.. ಹೀಗೆ ಹೆಚ್ಚು ಪಾವತಿಸುತ್ತಾರೆ ಅನ್ನುತ್ತಾರೆ ಅವರು. 1996 ರಿಂದ ವಾಹನ ಚಲಾಯಿಸುತ್ತಿರುವ ಅವರು, ಎಷ್ಟೇ ದೂರ ಇದ್ದರೂ ಮೀಟರ್​​ನಲ್ಲಿ ತೋರಿಸುವಷ್ಟೇ ಹಣ ಪಡೆಯುತ್ತೇನೆ. ತಮ್ಮ ಗ್ರಾಹಕರಿಂದ ಹೆಚ್ಚುವರಿ 10 ರೂಪಾಯಿಗಳನ್ನು ಇದುವರೆಗೂ ನಾನು ಕೇಳಿಲ್ಲ ಎಂದು ಹೇಳುತ್ತಾರೆ.

ವಿಡಿಯೋವನ್ನು ಇಲ್ಲಿ ನೋಡಿ

ಕನ್ನಡಿಗರು ಎಂದರೆ ಇದೇ ಎಂದ ನೆಟ್ಟಿಗರು

ನಗರ ಗ್ರಾಹಕ ಅಪ್ಲಿಕೇಶನ್​ನಲ್ಲಿ ಒಮ್ಮೆ ನೀವು ರೈಡ್ ಅನ್ನು ರಿಕ್ವೆಸ್ಟ್ ಮಾಡಿದ ನಂತರ ಚಾಲಕ ನಿಮ್ಮ ನಿರ್ದಿಷ್ಟ ಪಿಕಪ್ ಸ್ಥಳಕ್ಕೆ ತಕ್ಷಣ ಆಗಮಿಸುತ್ತಾನೆ. ನಂತರ ಚಾಲಕ ಶುಲ್ಕ ಮೀಟರ್ ಅನ್ನು ಆನ್ ಮಾಡುತ್ತಾನೆ. ನಿಮ್ಮ ಗಮ್ಯಸ್ಥಾನ ತಲುಪಿದ ನಂತರ ನೀವು ಮೀಟರ್​ನಲ್ಲಿ ಪ್ರದರ್ಶಿಸಲಾದ ಹಣವನ್ನು ಪಾವತಿಸಬೇಕು. ಅನೇಕ ಎಕ್ಸ್ ಬಳಕೆದಾರರು ಶಾಂತಾ ಗೌಡ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಇತರ ಆಟೋ ಚಾಲಕರು ಅವರಿಂದ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ‘ಕನ್ನಡಿಗರು ಎಂದರೆ ಇದೇ’ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

mysore-dasara_Entry_Point