ಬೆಂಗಳೂರಲ್ಲಿ ಪವರ್ ಕಟ್‌; ನಾಳೆ ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಪವರ್ ಕಟ್‌; ನಾಳೆ ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ

ಬೆಂಗಳೂರಲ್ಲಿ ಪವರ್ ಕಟ್‌; ನಾಳೆ ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ

BESCOM Updates: ಬೆಂಗಳೂರು ನಗರದಲ್ಲಿ ಬೆಸ್ಕಾಂ ವ್ಯಾಪ್ತಿಯ ವಿವಿಧ ಸಬ್‌ ಸ್ಟೇಷನ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುತ್ತವೆ. ಫೆ 18ರಂದು ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಕೆಲವೆಡೆ ಈ ಕಾಮಗಾರಿ ನಡೆಯಲಿದ್ದು, ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ ಇಲ್ಲಿದೆ.(ವರದಿ- ಎಚ್ ಮಾರುತಿ, ಬೆಂಗಳೂರು)

BESCOM Updates; ಬೆಂಗಳೂರಲ್ಲಿ ಮಂಗಳವಾರ (ಫೆ 18) ಪವರ್ ಕಟ್‌, ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಿ
BESCOM Updates; ಬೆಂಗಳೂರಲ್ಲಿ ಮಂಗಳವಾರ (ಫೆ 18) ಪವರ್ ಕಟ್‌, ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಿ

BESCOM Updates: ಬೆಂಗಳೂರಿನ ವಿವಿಧೆಡೆ ಮಂಗಳವಾರ (ಫೆ 18) ಪವರ್‌ ಕಟ್ ಇರಲಿದೆ. ಬೆಸ್ಕಾಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೆಪಿಟಿಸಿಎಲ್ ಕೈಗೆತ್ತಿಕೊಳ್ಳುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಅಂತಹ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಬಹುತೇಕ 66/11 ಕೆವಿ ವಿದ್ಯುತ್ ಸ್ಟೇಷನ್‌ಗಳಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತವೆ.

ಟೆಲಿಕಾಂ ಸ್ಟೇಷನ್‌ನಲ್ಲಿ ಫೆ 18ರಂದು ತುರ್ತುನಿರ್ವಹಣೆ, ಹೊಸಹಳ್ಳಿ, ಬಿನ್ನಿ ಪೇಟೆ ವಿಭಾಗದಲ್ಲಿ ಪವರ್‌ಕಟ್‌

ಮಂಗಳವಾರ ಬೆಳಿಗ್ಗೆ 10 ಗಂಟೆಯಿOದ ಮದ್ಯಾಹ್ನ 1 ಗಂಟೆಯವರೆಗೆ “66/11ಕೆ.ವಿ ಟೆಲಿಕಾಂ” ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ಹೊಸಹಳ್ಳಿ, ಬಿನ್ನಿ ಪೇಟೆ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ವಿವರ ಹೀಗಿದೆ-

ಹೊಸಹಳ್ಳಿ ಮುಖ್ಯರಸ್ತೆ, ಅರ್ಫತ್ ನಗರ ಪಾದರಾಯನಪುರ ಪೂರ್ವ ಮತ್ತು ಪಶ್ಚಿಮ, ದೇವರಾಜ ಅರಸ್ ನಗರ, ಸುಜಾತಾ ಟೆಂಟ್, ಜೆಜೆಆರ್ ನಗರ, ಹೆರಿಗೆ ಆಸ್ಪತ್ರೆ, ಸಂಗಮ್ ಆರ್ಕಲ್, ಓಬಳೇಶ್ ಕಾಲೋನಿ, ವಿಎಸ್ ಗಾರ್ಡನ್, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜನತಾ ಕಾಲೋನಿ, ಶಾಮಣ್ಣ ಗಾರ್ಡನ್, ಆರ್ಫತ್ ನಗರ, ರಂಗನಾಥ ಕಾಲೋನಿ, ಹೊಸಹಳ್ಳಿ ಮುಖ್ಯ ರಸ್ತೆ, ಪಾರ್ಕ್ ವೆಸ್ಟ್ ಗಾರ್ಡನ್, ಅಪಾರ್ಟ್ ಮೆಂಟ್, ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್ , ಮನರ‍್ತಿ ಪೆಟ್, ಸುಲ್ತಾನ್ ಪೆಟ್, ನಲ್ಬಂಡ್ವಾಡಿ ಎದುರು ಚಿಕ್ಕಪೇಟೆ ಮೆಟ್ರೋಸ್ಟೇಷನ್, ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ಲೆಪ್ರಸಿ ಆಸ್ಪತ್ರೆ, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್, ಎಸ್‌ಬಿಐ ಕ್ವಾಟ್ರಸ್, ಗೋಪಾಲನ್ ಅಪಾರ್ಟ್ ಮೆಂಟ್, ಮರಿಯಪ್ಪನ ಪಾಳ್ಯ, ಕೆಪಿ ಅಗ್ರಹಾರ, ಭುವನಂಗೇಶ್ವರಿ ಮಠ , ಇಟಿಎ ಅಪಾರ್ಟ್ ಮೆಂಟ್, ಆರೋಗ್ಯ ಭವನ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ ಮೆಂಟ್, ಹಂಪಿನಗರ, ವಿಜಯನಗರ, ಟೆಲಿಕಾಂ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ.

ಹೊರಮಾವು, ಕಲ್ಯಾಣನಗರ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ

ಬಾಣಸವಾಡಿ 66/11 ಕೆವಿ ಸ್ಟೇಷನ್‌ನಲ್ಲಿ ಫೆ 18 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರ ತನಕ ತುರ್ತುನಿರ್ವಹಣಾ ಕಾರ್ಯಗಳು ನಡೆಯಲಿದ್ದು, ಹೊರಮಾವು, ಕಲ್ಯಾಣನಗರ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೊರಮಾವು ಪಿ&ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ ಗ್ರೋವ್, ದೇವಮತ ಶಾಲೆ, ಅಮರ್‌ ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯೂ. ಎಸ್. ಎಸ್.ಬಿ ವಾಟರ್‌ ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥ ನಗರ ರಸ್ತೆ, ಎನ್.ಆರ್.ಐ ಲೇಔಟ್, ರಿಚಸ್‌ಗಾರ್ಡನ್, ಸುಂದರಾಜನೇಯ ದೇವಸ್ಥಾನ, ಡಬಲ್ ರಸ್ತೆ, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಯಾಸಿನ್‌ನಗರ, ಪಿ.ಎನ್.ಎಸ್. ಲೇಔಟ್, ಕುಳ್ಳಪ್ಪ ಸರ್ಕಲ್, 5 ನೇ ಮುಖ್ಯರಸ್ತೆ, ಹೆಚ್.ಬಿ.ಆರ್. 2ನೇ ಬ್ಲಾಕ್, ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ನೆಹರು ರಸ್ತೆ, 80 ಅಡಿ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್, ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್.ರಸ್ತೆ, ನಂಜುಂಡಪ್ಪ ರಸ್ತೆ, ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್, 100 ಅಡಿ ರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇ ಔಟ್, ಫ್ಲವರ್‌ ಗಾರ್ಡನ್, ಎಂ.ಎ.ಗಾರ್ಡನ್, ದಿವ್ಯಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಮಲ್ಲಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶ, ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇ ಔಟ್, ಬೈರತಿ ಬಂಡೆ, ಸಂಗಂ ಎನ್‌ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್‌ ಅವೆನ್ಯೂ ಲೇ ಔಟ್, ನಂಜಪ್ಪಗಾರ್ಡನ್, ಸಿ.ಎನ್.ಆರ್. ಲೇಔಟ್, ಆರ್.ಎಸ್.ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪರಸ್ತೆ, ಮುನೆಗೌಡ ರಸ್ತೆ, ಸತ್ಯಮೂರ್ತಿ ರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ ಎ,ಡಿ.ಎಂ.ಸಿ. ಮಿಲಿಟರಿ, ಬಂಜಾರ ಲೇ ಔಟ್, ಎನ್.ಪಿ.ಎಸ್., ಬೆಥೆಲ್‌ ಲೇ ಔಟ್, ಸಮೃದ್ಧಿ ಲೇಔಟ್, ವಾಟರ್‌ ಟ್ಯಾಂಕ್, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶ.

ಮಂಜುನಾಥ ನಗರ, ಶಂಕರಮಠ, ಮಾಗಡಿ ರಸ್ತೆ ವಿದ್ಯುತ್ ವ್ಯತ್ಯಯ

ಫೆ 18 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ “220/66/11ಕೆ.ವಿ ಎನ್.ಆರ್.ಎಸ್” ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಮಂಜುನಾಥ ನಗರ, ಶಂಕರಮಠ, ಮಾಗಡಿ ರಸ್ತೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ಮಂಜುನಾಥ ನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್ ಪುರ, ಸುಬ್ರಂಮಣ್ಯನಗರ, ವಿಜಯನಗರ, ರಾಜಾಜಿನಗರ 2ನೆ ಬ್ಲಾಕ್ & 6 ನೇ ಬ್ಲಾಕ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಬ್ರೀಗೆಡ್ ಅಪಾರ್ಟಮೆಂಟ್, ಮಾಗಡಿ ರಸ್ತೆ 1ನೇ ಕ್ರಾಸ್ ನಿಂದ 8ನೇ ಕ್ರಾಸ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ರಾಜನಕುಂಟೆ, ಅದ್ದೆ ವಿಶ್ವನಾಥಪುರ ಭಾಗದಲ್ಲಿ ಪವರ್ ಕಟ್‌

ರಾಜನಕುಂಟೆ 66/11 kV ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದಲ್ಲಿ ರಾಜನಕುಂಟೆ, ಅದ್ದೆ ವಿಶ್ವನಾಥಪುರ ಭಾಗದ ಪ್ರದೇಶಗಳಲ್ಲಿ ದಿನಾಂಕ 18.02.2025 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅದ್ದೆ ವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರಿ ಲೇ ಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂದು ಬೆಸ್ಕಾಂ ತಿಳಿಸಿದೆ.

ರಾತ್ರಿ ವೇಳೆ ಸಿಂಗಲ್ ಫೇಸ್ ಕೃಷಿ ಪಂಪ್ಸೆಟ್ ಗಳನ್ನು ನೀರಾವರಿ ಫೀಡರ್ ಗಳಲ್ಲಿ ಬಳಸದಂತೆ ರೈತರಿಗೆ ಬೆಸ್ಕಾಂ ಮನವಿ

ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಇದನ್ನು ಹೊರತುಪಡಿಸಿ ನೀರಾವರಿ ಫೀಡರ್ ಗಳ ಮೂಲಕ ತೋಟದ ಮನೆಗಳಿಗೆ ಗೃಹೊಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿ ಯನ್ನು ಗಮನದಲ್ಲಿರಿಸಿಕೊಂಡು ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾಗಿ ) ಫೀಡರ್ ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು.

ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗಳನ್ನು ನೀರಾವರಿ ಫೀಡರ್ ಗಳ ಮೂಲಕ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಆದ್ದರಿಂದ ಈ ಸಮಯದಲ್ಲಿ (ಸಂಜೆ 6 ರಿಂದ ಬೆಳಗ್ಗೆ 6ರವರೆಗೆ) ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗಳನ್ನು ಬಳಸದಂತೆ ರೈತರಿಗೆ ಬೆಸ್ಕಾಂ ಮನವಿ ಮಾಡಿದೆ .

(ವರದಿ- ಎಚ್ ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner