ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ
BMTC Bus Pass Price: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪಾಸ್ ದರ ಪರಿಷ್ಕರಣೆಯಾಗಿದೆ. ಇದು ಗುರುವಾರ (ಜನವರಿ 9) ಜಾರಿಗೆ ಬರಲಿದ್ದು, ಪ್ರತಿಯೊಂದು ವಿಧದ ಬಸ್ ಪಾಸ್‌ಗಳ ಪರಿಷ್ಕೃತ ದರ ವಿವರ ಇಲ್ಲಿದೆ.
BMTC Bus Pass Price: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಪಾಸ್ ದರ ಹೆಚ್ಚಳವಾಗಿದ್ದು, ಗುರುವಾರ (ಜನವರಿ 9) ಜಾರಿಗೆ ಬರಲಿದೆ. ವಿವಿಧ ವರ್ಗದ ದೈನಿಕ, ಸಾಪ್ತಾಹಿಕ, ಮಾಸಿಕ ಬಸ್ ಪಾಸ್ ದರ ಪರಿಷ್ಕರಣೆ ಮಾಡಿರುವ ಬಿಎಂಟಿಸಿ, ಗುರುವಾರದಿಂದಲೇ ಇದನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಈಗಾಗಲೇ ಬಿಎಂಟಿಸಿ ಬಸ್ ಟಿಕೆಟ್ ದರ ಶೇಕಡ 15 ರಷ್ಟು ಹೆಚ್ಚಳವಾಗಿದ್ದು, ಕಳೆದ ಭಾನುವಾರದಿಂದಲೇ (ಜನವರಿ 5) ಜಾರಿಗೆ ಬಂದಿದೆ.
ಬಿಎಂಟಿಸಿ ಬಸ್ ಪಾಸ್ ದರ; ಪ್ರಸ್ತುತ vs ಪರಿಷ್ಕೃತ
ಬಿಎಂಟಿಸಿ ಬಸ್ ಪಾಸ್ ದರ ಪರಿಷ್ಕರಣೆಯಾಗಿದ್ದು, ಇದೇ ಗುರುವಾರದಿಂದ ಅಂದರೆ ಜನವರಿ 9 ರಿಂದ ಜಾರಿಗೆ ಬರಲಿದೆ. ಪ್ರಯಾಣಿಕರ ತಿಳಿವಳಿಕೆಗಾಗಿ ಬಿಎಂಟಿಸಿ ಬಸ್ ಪಾಸ್‌ನ ಪ್ರಸ್ತುತ ದರ ಮತ್ತು ಪರಿಷ್ಕೃತ ದರಗಳ ವಿವರ ಇಲ್ಲಿ ನೀಡಲಾಗಿದೆ.
ಬಿಎಂಟಿಸಿ ಬಸ್ ಪಾಸ್ ದರ
ಬಿಎಂಟಿಸಿ ಬಸ್ ವರ್ಗ | ಪ್ರಸ್ತುತ ದರ (ರೂಪಾಯಿ) | ಪರಿಷ್ಕೃತ ದರ (ರೂಪಾಯಿ) |
---|---|---|
ಸಾಮಾನ್ಯ ದೈನಿಕ ಪಾಸ್ | 70 | 80 |
ಸಾಮಾನ್ಯ ಸಾಪ್ತಾಹಿಕ ಪಾಸ್ (ವಾರದ ಪಾಸ್) | 300 | 350 |
ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸ್ | 945 | 1080 |
ಸಾಮಾನ್ಯ ಮಾಸಿಕ ಪಾಸ್ | 1050 | 1200 |
ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸ್ (ಟೋಲ್ ಶುಲ್ಕ ಸೇರಿಸಿ) | 2200 | 2350 |
ವಜ್ರ ಮತ್ತು ವಾಯುವಜ್ರ ಬಸ್‌ಗಳ ಬಸ್ ಪಾಸ್ ದರ ವಿವರ
ಬಿಎಂಟಿಸಿ ಓಡಿಸುತ್ತಿರುವ ವಜ್ರ ಮತ್ತು ವಾಯುವಜ್ರ ಬಸ್‌ಗಳ ಪ್ರಯಾಣಿಕರ ಅನುಕೂಲಕ್ಕೆ ವಿತರಿಸುತ್ತಿರುವ ಬಸ್ ಪಾಸ್ ದರ ಕೂಡ ಪರಿಷ್ಕರಿಸಲಾಗಿದೆ. ಅದರ ವಿವರ ಹೀಗಿದೆ.
ಬಿಎಂಟಿಸಿ ಸಾಮಾನ್ಯ ಸೇವೆಯ ಮಾಸಿಕ ಬಸ್ ಪಾಸ್‌ನವರು ವಾಯುವಜ್ರ ಪ್ರಯಾಣ ದರ
ಬಿಎಂಟಿಸಿ ಬಸ್‌ಗಳಲ್ಲಿ ಸಾಮಾನ್ಯ ಸೇವೆಯ ಮಾಸಿಕ ಬಸ್ ಪಾಸ್ ದರವನ್ನೂ ಪರಿಷ್ಕರಿಸಲಾಗಿದ್ದು, ಅದು ಕೂಡ ಗುರುವಾರದಿಂದಲೇ ಜಾರಿಗೆ ಬರುತ್ತಿದೆ. ಅದರ ವಿವರ ಹೀಗಿದೆ
ವಜ್ರ ಮಾಸಿಕ ಪಾಸುದಾರರು ವಾಯುವಜ್ರದಲ್ಲಿ ಪ್ರಯಾಣಿಸುವಾಗಿ ಪಾವತಿಸಬೇಕಾದ ದರ
ವಜ್ರ ಸೇವೆಯ ಮಾಸಿಕ ಪಾಸುದಾರರು ವಾಯುವಜ್ರ ಸಾರಿಗೆಯಲ್ಲಿ ಸಾಗುವಾಗ ಪಾವತಿಸಬೇಕಾದ ಪ್ರಯಾಣ ದರದ ವಿವರ.
ಬೆಂಗಳೂರು- ಚಿಕ್ಕಬಳ್ಳಾಪುರ ದೈನಿಕ ಮತ್ತು ಮಾಸಿಕ ಬಸ್ ಪಾಸ್ ವಿವರ
ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ಬಿಎಂಟಿಸಿ ಬಸ್‌ಗಳ ದೈನಿಕ ಮತ್ತು ಮಾಸಿಕ ಬಸ್ ಪಾಸ್ ದರ ಪರಿಷ್ಕರಣೆಯಾಗಿದೆ. ಇದರ ವಿವರ ಇಲ್ಲಿದೆ.ವ
ಇದಲ್ಲದೆ, ವಜ್ರ ಸೇವೆಗಳ 140 ರೂಪಾಯಿ ದೈನಿಕ ಪಾಸು ಮತ್ತು 2000 ರೂಪಾಯಿ ಮಾಸಿಕ ಪಾಸು ಪಡೆದ ಪ್ರಯಾಣಿಕರಿಗೆ 298 ಎಂ.ಎನ್ ಸೇವೆಗಳಲ್ಲಿ ಕೆಳಕಂಡಂತೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. 140 ರೂಪಾಯಿ ವಜ್ರ ದೈನಿಕ ಪಾಸು ಮತ್ತು 2000 ರೂಪಾಯಿ ವಜ್ರ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಸದರಿ ಸೇವೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣ/ ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ದೇವನಹಳ್ಳಿಯವರೆಗೂ ಹಾಗೂ ದೇವನಹಳ್ಳಿಯಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಪ್ರಯಾಣಿಸಬಹುದು (ಟೋಲ್ ಪ್ಲಾಜಾ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಪ್ರಯಾಣಕ್ಕೆ ಅನ್ವಯವಾಗುವ ಟೋಲ್ ಶುಲ್ಕ (ಜಿಎಸ್‌ಟಿ ಸೇರಿ) ಪಾವತಿಸುವುದು ಕಡ್ಡಾಯ ಎಂದು ಬಿಎಂಟಿಸಿ ಹೇಳಿದೆ.
ವಜ್ರದ 140 ರೂಪಾಯಿ ದೈನಿಕ ಪಾಸು ಮತ್ತು 2000 ರೂಪಾಯಿ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ವಜ್ರ ಬಸ್‌ಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣ/ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ಚಿಕ್ಕಬಳ್ಳಾಪುರದವರೆಗೂ ಹಾಗೂ ಚಿಕ್ಕಬಳ್ಳಾಪುರದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಪ್ರಯಾಣಿಸಲು ಹೆಚ್ಚುವರಿಯಾಗಿ ಪ್ರತಿ ಪ್ರಯಾಣಕ್ಕೆ 40 ರೂಪಾಯಿ (ಜಿಎಸ್‌ಟಿ ಒಳಗೊಂಡು) ಹಾಗೂ ಅನ್ವಯವಾಗುವ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ. ಈ ಪದಲಿ ಪಾಸುದಾರರು, ಪಾಸಿನೊಂದಿಗೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹಾಗೂ ಚಿಕ್ಕಬಳ್ಳಾಪುರನಿಂದ ದೇವನಹಳ್ಳಿಗೆ ಪ್ರಯಾಣಿಸುವಾಗ, ಪ್ರತಿ ಪ್ರಯಾಣಕ್ಕೆ 40 ರೂಪಾಯಿ (ಜಿಎಸ್‌ಟಿ ಒಳಗೊಂಡು) ಹೆಚ್ಚುವರಿಯಾಗಿ ಪಾವತಿಸುವುದು. ಸಾಮಾನ್ಯ ಮಾಸಿಕ ಪಾಸುದಾರರು ಈ ಸೇವೆಗಳಲ್ಲಿ ಪಾಸಿನೊಂದಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.