ಕ್ಯಾನ್ಸರ್‌ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ, ಮಣಿಪಾಲ್ ಆಸ್ಪತ್ರೆಯಿಂದ ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ಡಿಂಗ್ ಅವೇರ್‌ನೆಸ್‌ ಅಭಿಯಾನ
ಕನ್ನಡ ಸುದ್ದಿ  /  ಕರ್ನಾಟಕ  /  ಕ್ಯಾನ್ಸರ್‌ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ, ಮಣಿಪಾಲ್ ಆಸ್ಪತ್ರೆಯಿಂದ ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ಡಿಂಗ್ ಅವೇರ್‌ನೆಸ್‌ ಅಭಿಯಾನ

ಕ್ಯಾನ್ಸರ್‌ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ, ಮಣಿಪಾಲ್ ಆಸ್ಪತ್ರೆಯಿಂದ ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ಡಿಂಗ್ ಅವೇರ್‌ನೆಸ್‌ ಅಭಿಯಾನ

ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಬ್ರೇಕಿಂಗ್ ಬ್ಯಾರಿಯರ್ಸ್‌ ಬಿಲ್ಡಿಂಗ್ ಅವೇರ್‌ನೆಸ್‌‘ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಮೂಲಕ ಕ್ಯಾನ್ಸರ್ ರೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಮಣಿಪಾಲ್ ಆಸ್ಪತ್ರೆ ಕ್ಯಾನ್ಸರ್ ತಜ್ಞರು ಭಾಗವಹಿಸಿದ್ದರು.

ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ಡಿಂಗ್ ಅವೇರ್‌ನೆಸ್‌ ಅಭಿಯಾನ
ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ಡಿಂಗ್ ಅವೇರ್‌ನೆಸ್‌ ಅಭಿಯಾನ

ಬೆಂಗಳೂರು: ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಪುಟ್ಟ ಮಕ್ಕಳನ್ನೂ ಬಿಡದ ಈ ಮಹಾಮಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯವಿದೆ. ಇದರೊಂದಿಗೆ ಕ್ಯಾನ್ಸರ್ ಬಗ್ಗೆ ಜನರಲ್ಲಿ ತಿಳುವಳಿಕೆಯೂ ಕಡಿಮೆ ಇದೆ. ಕ್ಯಾನ್ಸರ್ ಕುರಿತ ಅಪನಂಬಿಕೆಗಳು ಜನರಲ್ಲಿ ಗೊಂದಲ ಮೂಡಲು ಕಾರಣವಾಗುತ್ತಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಆರೈಕೆ ಹಾಗೂ ಕುಟುಂಬದವರು ಅವರನ್ನು ನೋಡಿಕೊಳ್ಳುವ ವಿಚಾರದಲ್ಲಿ ತೊಂದರೆಗಳು ಎದುರಾಗುತ್ತಿವೆ. ಇದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ. 

ಕ್ಯಾನ್ಸರ್ ಬಗ್ಗೆ ಯುವಜನರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಮಹತ್ವವನ್ನು ಅರಿತ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಡಿ. 20 ರಂದು ಬ್ರೇಕಿಂಗ್ ಬ್ಯಾರಿಯರ್ಸ್‌, ಬಿಲ್ದಿಂಗ್ ಅವೇನರ್ಸ್ ಎಂಬ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ‌ತ್ತು.

ಸೇಂಟ್ ಫ್ರಾನ್ಸಿಸ್ ಕಾಲೇಜು, ಜ್ಯೋತಿ ನಿವಾಸ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ನ್ಯೂ ಹಾರೈಜನ್ ಕಾಲೇಜ್ ಅಫ್ ಎಂಜಿನಿಯರಿಂಗ್‌ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಯಾನ್ಸರ್ ತಡೆ ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಮಣಿಪಾಲದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್‌ನ ಅನುಭವಿ ತಜ್ಞರು ಕ್ಯಾನ್ಸರ್‌ನ ವಿವಿಧ ಅಪಾಯಕಾರಿ ಅಂಶಗಳು, ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮಹತ್ವ ಹಾಗೂ ವಿಧಾನ, ಇತ್ತೀಚಿನ ಚಿಕಿತ್ಸೆಗಳ ಬಗ್ಗೆ ಮಾತನಾಡಿದ್ದರು.

ರಕ್ತದ ಕ್ಯಾನ್ಸರ್ ಬಗ್ಗೆ ಮಾತನಾಡಿದ ಡಾ. ಮಲ್ಲಿಕಾರ್ಜುನ ಕಲಶೆಟ್ಟಿ ‘ರಕ್ತ ಕ್ಯಾನ್ಸರ್ ಲಕ್ಷಣಗಳನ್ನು ಗುರುತಿಸುವಲ್ಲಿ ಜಾಗೃತಿಯ ಮಹತ್ವವನ್ನು ತಿಳಿಸಿದರು. ರಕ್ತ ಕ್ಯಾನ್ಸರ್‌ ಸಾಲಿಡ್‌ ಟ್ಯೂಮರ್‌ಗಳಿಗಿಂತ ಭಿನ್ನವಾಗಿರುತ್ತದೆ. ಸುಸ್ತು ಜ್ವರ, ಮೂಳೆನೋವು, ಆಗಾಗ್ಗೆ ಸೋಂಕು ಹಾಗೂ ವಿವರಿಸಲಾಗದ ರಕ್ತಸ್ರಾವದಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಕಂಪ್ಲಿಟ್ ಬ್ಲಡ್ ಕೌಂಟ್ (ಸಿಬಿಸಿ) ನಂತಹ ಸರಳ ಪರೀಕ್ಷೆಗಳು ಆರಂಭಿಕ ಹಂತದ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ. ಆ ಮೂಲಕ ತ್ವರಿತ ರೋಗನಿರ್ಣಯ, ಚಿಕಿತ್ಸೆ ಸಾಧ್ಯ‘ ಎಂದು ಅವರು ಹೇಳಿದ್ದಾರೆ.

‘ಕ್ಯಾನ್ಸರ್ ಯಾವಾಗಲೂ ಸಾವು ತರುವ ಕಾಯಿಲೆಯಲ್ಲ. ಇದನ್ನು ನಿರ್ವಹಿಸಲು ಸಾಧ್ಯವಿದೆ. ಆರಂಭಿಕ ಹಂತದಲ್ಲೇ ಪತ್ತೆ ಹೆಚ್ಚಿದರೆ ಸೂಕ್ತ ಚಿಕಿತ್ಸೆ ನೀಡಬಹುದು‘ ಎಂಬುದನ್ನು ತಜ್ಞರು ವಿದ್ಯಾರ್ಥಿಗಳಿಗೆ ಹೇಳಿದರು. ಒಟ್ಟಾರೆ ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಕ್ಯಾನ್ಸರ್‌ನ ಬಗ್ಗೆ ವಿವರವಾದ ವಿಷಯಗಳನ್ನು ತಿಳಿದುಕೊಂಡು ಅರಿವು ಮೂಡಿಸಿಕೊಂಡರು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner