ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಕಮೀಷನ್‌ ಆಮಿಷ; 37.50 ಲಕ್ಷ ರೂ ವಂಚಿಸಿದ್ದ ಐವರ ಬಂಧನ; ಡ್ರಗ್ಸ್ ಮಾರಾಟ, ಮೂವರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಕಮೀಷನ್‌ ಆಮಿಷ; 37.50 ಲಕ್ಷ ರೂ ವಂಚಿಸಿದ್ದ ಐವರ ಬಂಧನ; ಡ್ರಗ್ಸ್ ಮಾರಾಟ, ಮೂವರ ಬಂಧನ

ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಕಮೀಷನ್‌ ಆಮಿಷ; 37.50 ಲಕ್ಷ ರೂ ವಂಚಿಸಿದ್ದ ಐವರ ಬಂಧನ; ಡ್ರಗ್ಸ್ ಮಾರಾಟ, ಮೂವರ ಬಂಧನ

ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಕಮೀಷನ್‌ ಆಮಿಷ ಒಡ್ಡಿ, ಅವರಿಗೆ 37.50 ಲಕ್ಷ ರೂಪಾಯಿ ವಂಚಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ 37.50 ಲಕ್ಷ ರೂ ವಂಚಿಸಿದ್ದ ಐವರ ಬಂಧನವಾಗಿದೆ. ಬಂಧಿತರಿಂದ ವಶಪಡಿಸಿದ ವಸ್ತುಗಳ ಪ್ರದರ್ಶನ ವೀಕ್ಷಿಸಿದ ಪೊಲೀಸ್ ಅಧಿಕಾರಿಗಳು.
ಬೆಂಗಳೂರು: ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ 37.50 ಲಕ್ಷ ರೂ ವಂಚಿಸಿದ್ದ ಐವರ ಬಂಧನವಾಗಿದೆ. ಬಂಧಿತರಿಂದ ವಶಪಡಿಸಿದ ವಸ್ತುಗಳ ಪ್ರದರ್ಶನ ವೀಕ್ಷಿಸಿದ ಪೊಲೀಸ್ ಅಧಿಕಾರಿಗಳು.

ಬೆಂಗಳೂರು: ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಕಂಪನಿ ಮಾಲೀಕರೊಬ್ಬರಿಗೆ ಕಮಿಷನ್‌ ರೂಪದಲ್ಲಿ ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿ 37.50 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಉಮೇಶ್‌ (31), ಸುಕೀರ್ತಿ (41) ನಾಯತ್‌ ಉಲ್ಲಾ (50), ಜಾಕೀರ್‌ (36) ಹಾಗೂ ಪ್ರತೀಕ್‌ (35), ಬಂಧಿತ ಆರೋಪಿಗಳು. ಇವರಿಂದ ಎರಡು ಕಾರು, ಐದು ಮೊಬೈಲ್‌, ಆರ್‌ಬಿಐ ಹೆಸರಿನಲ್ಲಿದ್ದ ಎರಡು ನಕಲಿ ಕಡತಗಳು, 1 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಕಮೀಷನ್‌ ಆಮಿಷ; 37.50 ಲಕ್ಷ ರೂಪಾಯಿ ವಂಚಿಸಿದ್ದ ಐವರ ಬಂಧನ

ಶೇಷಾದ್ರಿಪುರದ ಕಂಪನಿಯೊಂದರ ಮಾಲೀಕರು ನೀಡಿದ ದೂರು ಆಧರಿಸಿ ಬಸವೇಶ್ವರ ನಗರ ಹಾಗೂ ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ನಡೆಸುತ್ತಿದ್ದ ಕಂಪನಿ ನಷ್ಟ ಅನೂಭವಿಸುತ್ತಿತ್ತು. ಹಣಕಾಸಿನ ಅವಶ್ಯಕತೆಯಿದ್ದ ಕಾರಣಕ್ಕೆ ಅವರು ಸಹಾಯ ಮಾಡುವಂತೆ ಇಬ್ಬರು ಸ್ನೇಹಿತರನ್ನು ಭೇಟಿ ಮಾಡಿದ್ದರು. ಆ ಸ್ನೇಹಿತರು ಆರೋಪಿಗಳನ್ನು ಪರಿಚಯ ಮಾಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪುರಾತನ ಕಾಲದ ತಾಮ್ರದ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡಲಾಗಿದ್ದು, ವಿದೇಶಿ ಕಂಪನಿಯಿಂದ 15 ಲಕ್ಷ ಕೋಟಿ ರೂಪಾಯಿ ಬಂದಿದೆ. ಇದಕ್ಕೆ ಸಂಬಂಧಿಸಿದ ಕಡತ ಆರ್‌ಬಿಐನಲ್ಲಿದ್ದು ತೆರಿಗೆ ಪಾವತಿಸಿ ಕಡತ ಪಡೆದುಕೊಳ್ಳಬೇಕಿದೆ ಎಂದು ಆರೋಪಿಗಳು ದೂರುದಾರರನ್ನು ನಂಬಿಸಿದ್ದರು. ಕಡತ ಪಡೆದುಕೊಳ್ಳಲು ಮತ್ತು ಹಣವನ್ನು ಬಿಡಗಡೆ ಮಾಡಿಸಿಕೊಳ್ಳಲು ಹಣದ ಅಗತ್ಯವಿದ್ದು, ಈಗ ಹಣದ ಸಹಾಯ ನೀಡಿದರೆ, ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿದ್ದರು. ಆರೋ‍ಪಿಗಳ ಮಾತು ನಂಬಿದ್ದ ದೂರುದಾರ, ಹಂತಹಂತವಾಗಿ ರೂ. 37.50 ಲಕ್ಷ ಪಾವತಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಬಸವೇಶ್ವರನಗರದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆತ ನೀಡಿದ ಸುಳಿವು ಆಧರಿಸಿ, ಉಳಿದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ವಂಚನೆ ಎಸಗಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದರು. ವಿದೇಶದಿಂದ ಬಂದ ಹಣಕ್ಕೆ ತೆರಿಗೆ ಕಟ್ಟಿ ಹಣ ಬಿಡಿಸಿಕೊಳ್ಳಬೇಕಿದೆ. ಬಂದ ಹಣದಲ್ಲಿ ಕಮಿಷನ್‌ ನೀಡಲಾಗುವುದು ಎಂಬುದಾಗಿ ಹಲವಾರು ಮಂದಿಯನ್ನು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

ಡ್ರಗ್ಸ್ ಮಾರಾಟ, ಮೂವರ ಬಂಧನ

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವ ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಸುದ್ದಗುಂಟೆಪಾಳ್ಯ ಮತ್ತು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಅಂಥೋಣಿ(35) ಎಂಬಾತನನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ. 6.5 ಲಕ್ಷ ಮೌಲ್ಯದ 3 ಕೆ.ಜಿ. 55 ಗ್ರಾಂ. ಎಂಡಿಎಂಎ ಕ್ರಿಸ್ಟಲ್ ವಶಕ್ಕೆ ಪಡೆಯಲಾಗಿದೆ.

ಆರೋಪಿ ಎರಡು ವರ್ಷಗಳ ಹಿಂದೆ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಆಗಮಿಸಿದ್ದ. ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ವೀಸಾ ಅವಧಿ ಮುಕ್ತಾಯವಾಗಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಅಂಥೋಣಿಯು, ಮುಂಬೈ ಹಾಗೂ ದೆಹಲಿಯಲ್ಲಿ ನೆಲಸಿದ್ದ ತನ್ನ ಸ್ನೇಹಿತರಿಂದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತರುತ್ತಿದ್ದ. ನಂತರ ಚೇಳಕೆರೆ ಮೈದಾನದಲ್ಲಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುದ್ದಗುಂಟೆಪಾಳ್ಯ ನಿವಾಸಿಗಳಾದ ಯೂಸುಫ್ ಶರೀಫ್ (35) ಮತ್ತು ಸಾದಿಕ್ (30) ಬಂಧಿತ ಆರೋಪಿಗಳು. ಇವರಿಂದ ರೂ.1.50 ಲಕ್ಷ ಮೌಲ್ಯದ 1 ಕೆ.ಜಿ. 825 ಗ್ರಾಂ. ಗಾಂಜಾ, ಮೊಬೈಲ್, ಒಂದು ಬೈಕ್ ಜಪ್ತಿ ಮಾಡಲಾಗಿದೆ.

ಆರೋಪಿಗಳು ಭವಾನಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕೂಡಲೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕೇರಳ ಮತ್ತು ಆಂಧ್ರಪ್ರದೇಶದ ಪೆಡ್ಲರ್‌ಗಳ ಮೂಲಕ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner