ಕನ್ನಡ ಸುದ್ದಿ / ಕರ್ನಾಟಕ /
ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ; ಮೇ 25ಕ್ಕೆ ಬೆಳಿಗ್ಗೆ 6ರಿಂದಲೇ ಬೆಂಗಳೂರು ಮೆಟ್ರೋ ರೈಲು ಸಂಚಾರ ಆರಂಭ
ಯುಪಿಎಸ್‌ಸಿ (ಪ್ರಿಲಿಮ್ಸ್) ಪರೀಕ್ಷೆ ಮೇ 25, ಭಾನುವಾರ ನಡೆಯಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ನಮ್ಮ ಮೆಟ್ರೋ 1 ಗಂಟೆ ಮುಂಚಿತವಾಗಿ ಅಂದರೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾರಂಭ ಮಾಡಲಿದೆ.

ಯುಪಿಎಸ್‌ಸಿ ಪರೀಕ್ಷೆ; ಮೇ 25ಕ್ಕೆ ಬೆಳಿಗ್ಗೆ 6ರಿಂದಲೇ ಬೆಂಗಳೂರು ಮೆಟ್ರೋ ರೈಲು ಸಂಚಾರ ಆರಂಭ (ಸಾಂದರ್ಭಿಕ ಚಿತ್ರ)
ಬೆಂಗಳೂರು: ನಾಳೆ (ಮೇ 25) ದೇಶದಾದ್ಯಂತ ಯುಪಿಎಸ್‌ಸಿ (ಪ್ರಿಲಿಮ್ಸ್) ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೆರವಾಗಲೆಂದು ನಮ್ಮ ಮೆಟ್ರೊ ಬೆಳಿಗ್ಗೆ 1 ಗಂಟೆ ಮುಂಚಿತವಾಗಿ ಓಡಾಟ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಸಾಮಾನ್ಯವಾಗಿ ಭಾನುವಾರದ ದಿನಗಳಲ್ಲಿ ಮೆಟ್ರೊ ರೈಲು ಸಂಚಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುತ್ತದೆ. ಆದರೆ ನಾಳೆ ಯುಪಿಎಸ್‌ಸಿ ಪರೀಕ್ಷೆ ಇರುವ ಕಾರಣ ಬೆಳಿಗ್ಗೆ 6 ರಿಂದಲೇ ಪ್ರಮುಖ 4 ಟರ್ಮಿನಲ್‌ಗಳಾದ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ಮಾದಾವರ ಹಾಗೂ ರೇಷ್ಮೆ ಸಂಸ್ಥೆಗಳಿಂದ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ.
ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ನಮ್ಮ ಮೆಟ್ರೊವನ್ನು ಸೇವೆಯನ್ನು ಬಳಸಲಿಕೊಳ್ಳಬಹುದು.
ಯುಪಿಎಸ್‌ಸಿ ಪರೀಕ್ಷೆ ನಾಳೆ ದೇಶದ ಒಟ್ಟು 80 ಪರೀಕ್ಷೆ ಕೇಂದ್ರಗಳಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿದೆ.