Matrimony Portal: ಹೆಣ್ಣು ಹುಡುಕಿಕೊಡಲು ವಿಫಲ; ಮ್ಯಾಟ್ರಿಮೋನಿ ಪೋರ್ಟಲ್​ಗೆ ಬಿತ್ತು ಎರಡು ಪಟ್ಟು ದಂಡ!
ಕನ್ನಡ ಸುದ್ದಿ  /  ಕರ್ನಾಟಕ  /  Matrimony Portal: ಹೆಣ್ಣು ಹುಡುಕಿಕೊಡಲು ವಿಫಲ; ಮ್ಯಾಟ್ರಿಮೋನಿ ಪೋರ್ಟಲ್​ಗೆ ಬಿತ್ತು ಎರಡು ಪಟ್ಟು ದಂಡ!

Matrimony Portal: ಹೆಣ್ಣು ಹುಡುಕಿಕೊಡಲು ವಿಫಲ; ಮ್ಯಾಟ್ರಿಮೋನಿ ಪೋರ್ಟಲ್​ಗೆ ಬಿತ್ತು ಎರಡು ಪಟ್ಟು ದಂಡ!

Bengaluru Consumer Court: ಯುವಕನಿಗೆ ವಧು ಹುಡುಕಿಕೊಡಲು ವಿಫಲವಾದ ಬೆಂಗಳೂರಿನ ಕಲ್ಯಾಣ ನಗರದಲ್ಲಿ ಇರುವ ಮ್ಯಾಟ್ರಿಮೋನಿ ಪೋರ್ಟಲ್​ಗೆ ಗ್ರಾಹಕ ನ್ಯಾಯಾಲಯ 60 ಸಾವಿರ ದಂಡ ವಿಧಿಸಿದೆ.

ಹೆಣ್ಣು ಹುಡುಕಿಕೊಡಲು ವಿಫಲ; ಮ್ಯಾಟ್ರಿಮೋನಿ ಪೋರ್ಟಲ್​ಗೆ ಬಿತ್ತು ಎರಡು ಪಟ್ಟು ದಂಡ!
ಹೆಣ್ಣು ಹುಡುಕಿಕೊಡಲು ವಿಫಲ; ಮ್ಯಾಟ್ರಿಮೋನಿ ಪೋರ್ಟಲ್​ಗೆ ಬಿತ್ತು ಎರಡು ಪಟ್ಟು ದಂಡ!

ಬೆಂಗಳೂರು: ಈಗಿನ ಯುವಕರ ಪರಿಸ್ಥಿತಿ ಯಾರಿಗೂ ಬೇಡ. ಮದುವೆ ಆಗಬೇಕು ಎಂದುಕೊಂಡಿದ್ದರೂ ಹೆಣ್ಣೇ ಸಿಗುತ್ತಿಲ್ಲ ಎಂದು ಯುವಕರು ನೋವು ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ರೈತರಾದರೆ, ಅವರನ್ನು ಯಾರೂ ಲೆಕ್ಕಿಸುವುದೇ ಇಲ್ಲ. ಪರಿಸ್ಥಿತಿಗಳು ಹೀಗಿರುವಾಗ ಎಲ್ಲರೂ ಮ್ಯಾರೇಜ್​ ಬ್ಯೂರೋಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಅವುಗಳಿಂದಲೂ ಹೆಣ್ಣು ಸಿಗುತ್ತಿಲ್ಲ ಎಂಬುದು ಅಚ್ಚರಿ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ವಧು ಹುಡುಕೊಡದ ಮ್ಯಾಟ್ರಿಮೋನಿ ಪೋರ್ಟಲ್​ಗೆ (Matrimony Portal) ಬೆಂಗಳೂರು ಗ್ರಾಹಕ ನ್ಯಾಯಾಲಯವು (Bengaluru Consumer Court) ದಂಡ ವಿಧಿಸಿರುವುದು.

ಹೌದು, ವಧು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೋನಿ ಪೋರ್ಟಲ್​ಗೆ ಗ್ರಾಹಕ ನ್ಯಾಯಾಲಯ 60 ಸಾವಿರ ದಂಡ ವಿಧಿಸಿದೆ. ಬೆಂಗಳೂರಿನ ಎಂಎಸ್ ನಗರದ ನಿವಾಸಿ ಕೆಎಸ್ ವಿಜಯಕುಮಾರ್ ಎಂಬವರು ತಮ್ಮ ಮಗ ಬಾಲಾಜಿಗೆ ಹೆಣ್ಣು ಹುಡುಕಾಟ ನಡೆಸುತ್ತಿದ್ದರು. ಅದರಂತೆ ಕಲ್ಯಾಣ್ ನಗರದಲ್ಲಿ ಕಚೇರಿ ಹೊಂದಿರುವ ದಿಲ್ಮಿಲ್ ಮ್ಯಾಟ್ರಿಮೋನಿ ಪೋರ್ಟಲ್​ಗೆ ಅವರು ಭೇಟಿ ನೀಡಿದ್ದರು. ಈ ವೇಳೆ 45 ದಿನಗಳಲ್ಲಿ ತಮ್ಮ ಮಗನಿಗೆ ಸಂಭಾವ್ಯ ವಧು ಹುಡುಕುವುದಾಗಿ ಸಂಸ್ಥೆ ಭರವಸೆ ನೀಡಿತ್ತು.

ಹಣ ನೀಡದೆ ನಿಂದಿಸಿದ್ದ ಸಿಬ್ಬಂದಿ!

ಇದೇ ವರ್ಷ ಮಾರ್ಚ್ 17ರಂದು ವಿಜಯಕುಮಾರ್ ತಮ್ಮ ಮಗನ ಎಲ್ಲಾ ದಾಖಲೆಗಳು, ಫೋಟೋಗಳನ್ನು ನೀಡಿದ್ದರು. ವಧು ಹುಡುಕಲು ಶುಲ್ಕ ಎನ್ನುವಂತೆ 30 ಸಾವಿರ ಪಡೆದಿದ್ದರು. ಅದೇ ದಿನವೇ ವಿಜಯಕುಮಾರ್ ಅವರು ಪಾವತಿಸಿದ್ದರು. ಆದರೆ, 45 ದಿನಗಳಲ್ಲಿ ಹೆಣ್ಣು ಹುಡುಕುವಲ್ಲಿ ವಿಫಲವಾದ ದಿಲ್ಮಿಲ್ ಮ್ಯಾಟ್ರಿಮೋನಿ ಕಚೇರಿಗೆ ಬಾಲಾಜಿ ಸಾಕಷ್ಟು ಬಾರಿ ಅಲೆದಾಡಿದ್ದರು. ಅಲ್ಲದೆ, ಹಣವನ್ನು ಮರಳಿಸುವಂತೆ ಕೇಳಿದ್ದರು. ಆದರೆ, ಕಚೇರಿಯ ಸಿಬ್ಬಂದಿ ಹಣವನ್ನು ಪಾವತಿಸಲು ನಿರಾಕರಿಸಿದ್ದಾರೆ. ಅಲ್ಲದೆ ನಿಂದಿಸಿದ್ದಾರೆ. ಇದರಿಂದ ಬಾಲಾಜಿ ಅವರು ಮನನೊಂದಿದ್ದರು.

ಅಕ್ಟೋಬರ್ 28ರಂದು ತೀರ್ಪು

ಹೆಣ್ಣು ಹುಡುಕಲು ವಿಫಲವಾದ ದಿಲ್ಮಿಲ್​ ಮ್ಯಾಟ್ರಿಮೋನಿಗೆ ಮೇ 9ರಂದು ಬಾಲಾಜಿ ಅವರು ಲೀಗಲ್ ನೋಟಿಸ್ ಕಳುಹಿಸಿದ್ದರು. ಆದರೆ ಮ್ಯಾಟ್ರಿಮೋನಿ ಪ್ರತಿಕ್ರಿಯಿಸದ ಕಾರಣ ಪ್ರಕರಣದ ವಿಚಾರಣೆ ಬಳಿಕ ನ್ಯಾಯಾಲಯ ಅಕ್ಟೋಬರ್ 28ರಂದು ದಂಡ ವಿಧಿಸಿ ಆದೇಶ ಹೊರಡಿಸಿದೆ. ದೂರುದಾರನು ತನ್ನ ಮಗನಿಗೆ ಸೂಕ್ತವಾದ ಒಂದೇ ಒಂದು ಪ್ರೊಫೈಲ್ ಪಡೆಯಲಿಲ್ಲ. ದಿಲ್ಮಿಲ್ ಕಚೇರಿಗೆ ಭೇಟಿ ನೀಡಿದಾಗಲೂ ನಿಂದಿಸಿರುವುದರ ಜೊತೆಗೆ ಹಣವನ್ನೂ ಮರಳಿಸಿಲ್ಲ ಎಂದು ಬಾಲಾಜಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಬೆಂಗಳೂರು ಗ್ರಾಹಕ ಆಯೋಗದ ಅಧ್ಯಕ್ಷ ಎಂಎಸ್ ರಾಮಚಂದ್ರ ಅವರು ವಿಚಾರಣೆ ವೇಳೆ, ದೂರುದಾರರಿಗೆ ಸೇವೆ ಸಲ್ಲಿಸುವ ವೇಳೆ ಸ್ಪಷ್ಟವಾದ ಕೊರತೆ ಕಂಡು ಬಂದಿದೆ. ಇದು ಅನ್ಯಾಯದ ವ್ಯಾಪಾರ ಅಭ್ಯಾಸಗಳಲ್ಲಿ ತೊಡಗಿದೆ ಎಂದು ಹೇಳಬಹುದು. ಹಾಗಾಗಿ ದೂರುದಾರರು ನೀಡಲಾದ ಇತರ ಪರಿಹಾರಗಳೊಂದಿಗೆ ಮೊತ್ತವನ್ನು ಮರು ಪಾವತಿಸಬೇಕಾಗುತ್ತದೆ ಎಂದು ಆದೇಶ ಹೊರಡಿಸಿದೆ. ಶುಲ್ಕವಾಗಿ ಸಂಗ್ರಹಿಸಿದ 30,000 ರೂಪಾಯಿ ಜೊತೆಗೆ ಸೇವಾ ಕೊರತೆಗೆ 20 ಸಾವಿರ ರೂಪಾಯಿ, ಮಾನಸಿಕ ಸಂಕಟಕ್ಕೆ 5,000 ರೂಪಾಯಿ, ವ್ಯಾಜ್ಯಕ್ಕೆ 5,000 ರೂಪಾಯಿಗಳನ್ನು ಮರುಪಾವತಿಸಲು ನ್ಯಾಯಾಲಯ ಆದೇಶ ಹೊರಡಿಸಿದೆ.

Whats_app_banner